Webdunia - Bharat's app for daily news and videos

Install App

ಕುಖ್ಯಾತ ರೌಡಿಗೆ ಗುಂಡೇಟು!

Webdunia
ಭಾನುವಾರ, 27 ಜನವರಿ 2019 (14:57 IST)
ಇಬ್ಬರು ವ್ಯಾಪಾರಿಗಳ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದ ಕುಖ್ಯಾತ ರೌಡಿ ಗೌತಮ್ ಅಲಿಯಾಸ್ ಆರ್ಮುಗಂಗೆ ಯನ್ನು  ಪೊಲೀಸರು ಗುಂಡು ಹೊಡೆದು ಬಂಧಿಸಿದ್ದಾರೆ.

ಯಶವಂತಪುರ ಮಾಡೆಲ್ ಕಾಲೋನಿಯ ರೌಡಿ ಗೌತಮ್(22)ಬಲಗಾಲಿಗೆ ಗುಂಡೇಟ್ ತಗುಲಿ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಪ್ರಾಣಾಪಾಯದಿಂದ ರೌಡಿ ಪಾರಾಗಿದ್ದಾನೆ. ಬಂಧಿಸಲು ಹೋದಾಗ ಗೌತಮ್ ಲಾಂಗ್ನಿಂದ ನಡೆಸಿದ ಹಲ್ಲೆಯಿಂದ ಗಾಯಗೊಂಡಿರುವ ಯಶವಂತಪುರ ಠಾಣೆಯ ಪೇದೆಗಳಾದ ಶಿವಕುಮಾರ್ ಹಾಗೂ ಭಜಂತ್ರಿ ಅವರು ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಯಶವಂತಪುರ ರೈಲ್ವೆ ನಿಲ್ದಾಣ ಬಳಿಯ ಮಾಡೆಲ್ ಕಾಲೋನಿ ಬಳಿ ಪಾರ್ಟಿ ಮುಗಿದ ನಂತರ ನಡೆದ ಜಗಳದಲ್ಲಿ ರೌಡಿ ಗೌತಮ್ ಮತ್ತವನ ಸ್ನೇಹಿತರಾದ ಸಲ್ಮಾನ್ ಹಾಗೂ ಪ್ರಶಾಂತ್ ಪರಿಚಯಸ್ಥರಾದ ಚಿಲ್ಲರೆ ಅಂಗಡಿ ನಡೆಸುತ್ತಿದ್ದ ವಿನೋದ್ಕುಮಾರ್ ತರಕಾರಿ ವ್ಯಾಪಾರಿಯಾಗಿದ್ದ ಮಾರುತಿ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿದ್ದರು.

ಸ್ಥಳೀಯರು ರಕ್ಷಣೆಗೆ ಧಾವಿಸಿದ ಕೂಡಲೇ ಗೌತಮ್ ಸೇರಿ ಮೂವರು ಪರಾರಿಯಾಗಿದ್ದರು. ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿ ಪರಾರಿಯಾಗಿದ್ದ ಆರೋಪಿಗಳಿಗಾಗಿ ಶೋಧ ಕಾರ್ಯ ಕೈಗೊಂಡರು. ರೌಡಿ ಗೌತಮ್ ಮತ್ತವನ ಸ್ನೇಹಿತರಾದ ಸಲ್ಮಾನ್ ಹಾಗೂ ಪ್ರಶಾಂತ್ ಜೊತೆ ನಿನ್ನೆ ರಾತ್ರಿ 2ರ ವೇಳೆ ಪೈಪ್ಲೇನ್ ಫ್ಲಾಟಿನಂ ಸಿಟಿ ನಲ್ಲಿರುವ ಮಾಹಿತಿ ಆಧರಿಸಿ ಯಶವಂತಪುರ ಪೊಲೀಸ್ ಇನ್ಸ್ಪೆಕ್ಟರ್ ಮುದ್ದುರಾಜ್ ಅವರು ಪೇದೆಗಳಾದ ಶಿವಕುಮಾರ್ ಹಾಗೂ ಭಜಂತ್ರಿ ಇನ್ನಿತರ ಸಿಬ್ಬಂದಿಯೊಂದಿಗೆ ಕಾರ್ಯಾಚರಣೆ ಕೈಗೊಂಡರು.


ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಪ್ರವಾಹಕ್ಕೆ ನಲುಗಿದ ನೇಪಾಳದಲ್ಲಿ ಸಿಲುಕಿರುವ ಕನ್ನಡಿಗರಿಗೆ ಧೈರ್ಯ ತುಂಬಿದ ಡಿಕೆ ಶಿವಕುಮಾರ್‌

ಸೋನಿಯಾ ಗಾಂಧಿ ಮತದಾರರ ಪಟ್ಟಿ ಪ್ರಕರಣ: ಪರಿಶೀಲನಾ ಅರ್ಜಿಯ ಮೇಲಿನ ಆದೇಶ ಮುಂದೂಡಿಕೆ

ಮಲ್ಲಿಕಾರ್ಜುನರನ್ನು ಅಸ್ಪೃಶ್ಯರಂತೆ ನೋಡಲಾಗಿದೆ: ಪವನ್ ಖೇರಾ ಕಿಡಿ

ಕಾಡುಹಂದಿಗಳ ದಾಳಿಗೆ ನಾಲ್ವರು ರೈತರಿಗೆ ಗಾಯ

ಮಲ್ಲಿಕಾರ್ಜುನ ಖರ್ಗೆ ಭೇಟಿ ಬಳಿಕ ಶುದ್ಧೀಕರಿಸಿದವರ ವಿರುದ್ಧ ಎಫ್‌ಐಆರ್‌ಗೆ ರಾಹುಲ್ ಒತ್ತಾಯ

ಮುಂದಿನ ಸುದ್ದಿ
Show comments