Webdunia - Bharat's app for daily news and videos

Install App

ಟೆಕ್ಕಿಗಳನ್ನೇ ಟಾರ್ಗೆಟ್ ಮಾಡಿ ಸುಲಿಗೆ ಮಾಡುತ್ತಿದ್ದ ಹನಿಟ್ರ್ಯಾಪ್ ತಂಡ

Webdunia
ಸೋಮವಾರ, 11 ಅಕ್ಟೋಬರ್ 2021 (21:52 IST)
ಬೆಂಗಳೂರು: ಟೆಕ್ಕಿಗಳನ್ನೇ ಟಾರ್ಗೆಟ್ ಮಾಡಿ ಸುಲಿಗೆ ಮಾಡುತ್ತಿದ್ದ ಹನಿಟ್ರ್ಯಾಪ್ ತಂಡವನ್ನು ಬೆಂಗಳೂರು ಪೊಲೀಸರು ಬಲೆಗೆ ಕೆಡವಿದ್ದಾರೆ.
ಈ ಸಂಬಂಧ ಐವರು ಮೈಕೋ ಲೇಔಟ್ ಠಾಣೆ ಪೊಲೀಸರ ಬಲೆಗೆ ಬಿದ್ದಿದ್ದಾರೆ. 
ಗಾರೆಪಾಳ್ಯ ನಿವಾಸಿಯನ್ನು ಗ್ಯಾಂಗ್ ಹನಿಟ್ರ್ಯಾಪ್ ಮಾಡಿತ್ತು. ಟೆಕ್ಕಿಯೋರ್ವನ ಬಳಿ ಕಾರು, ಮೊಬೈಲ್, ಹಣ ಸುಲಿಗೆ ಮಾಡಿತ್ತು. ಟೆಕ್ಕಿ, ಸೂಪರ್ ಮಾರ್ಕೆಟ್​ಗೆ ತರಕಾರಿ ತರಲು ಹೋಗಿದ್ದಾಗ ಗ್ಯಾಂಗ್​ನ ಮಹಿಳೆ ಟೆಕ್ಕಿಗೆ ಪರಿಚಯವಾಗಿದ್ದಳು. ಬಳಿಕ, ಕುಟುಂಬಸ್ಥರನ್ನು ಪರಿಚಯಿಸಲು ಮಹಿಳೆ ಕರೆದೊಯ್ದಿದ್ದಳು.
ಟೆಕ್ಕಿಯನ್ನು ಮನೆಗೆ ಕರೆದೊಯ್ದಿದ್ದ ಆರೋಪಿ ಮಹಿಳೆ, ಬಳಿಕ ಟೆಕ್ಕಿ ಮನೆಯ ರೂಮ್​ನಲ್ಲಿ ವಿಶ್ರಾಂತಿ ಪಡೆಯುತ್ತಿದ್ದ ವೇಳೆ ಯೋಜನೆಯಂತೆ ಮನೆಗೆ ನುಗ್ಗಿದ ನಾಲ್ವರು ಆರೋಪಿಗಳು ರೂಮ್​​ನಲ್ಲಿದ್ದ ಟೆಕ್ಕಿ ಫೋಟೋ ತೆಗೆದು ಬೆದರಿಕೆ ಹಾಕಿದ್ದರು. 10 ಲಕ್ಷ ರೂ. ನೀಡುವಂತೆ ಯುವಕರು ಧಮ್ಕಿ ಹಾಕಿದ್ದರು. ಹಣ ನೀಡಲು ಒಪ್ಪದಿದ್ದ ವೇಳೆ ಗ್ಯಾಂಗ್​ ಸುಲಿಗೆ ಮಾಡಿತ್ತು. ಟೆಕ್ಕಿ ಬಳಿ ಇದ್ದ ಐಷಾರಾಮಿ ಕಾರು, 37 ಸಾವಿರ ನಗದು ಹಾಗೂ ಮೊಬೈಲ್​​ ಕಿತ್ತುಕೊಂಡು ಆರೋಪಿಗಳ ಗ್ಯಾಂಗ್ ಪರಾರಿಯಾಗಿತ್ತು.
ಈ ಬಗ್ಗೆ ಟೆಕ್ಕಿ ಮೈಕೋ ಲೇಔಟ್ ಠಾಣೆಗೆ ದೂರು ನೀಡಿದ್ದರು. ಮೈಕೋ ಲೇಔಟ್ ಪೊಲೀಸರು  ಕೇಸ್ ದಾಖಲಿಸಿಕೊಂಡು ಕಾರ್ಯಾಚರಣೆ ನಡೆಸಿ ಐವರನ್ನು ಬಂಧಿಸಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments