Webdunia - Bharat's app for daily news and videos

Install App

ಸರ್ಕಾರ ಅಕ್ಕಿ ಕೊಡ್ತೀವಿ ಅಂತೇಳಿ ಮೋಸ ಮಾಡಿದೆ

Webdunia
ಗುರುವಾರ, 15 ಜೂನ್ 2023 (18:50 IST)
ಸಿಎಂ ಸಿದ್ದರಾಮಯ್ಯ ಅವರು ಅನ್ನಭಾಗ್ಯ ಯೋಜನೆಗೆ ಕೇಂದ್ರ ಅಕ್ಕಿ ಕೊಡ್ತಿಲ್ಲ ಅಂತ ಆರೋಪಿಸಿದ್ದಾರೆ. ಈ ಬಗ್ಗೆ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯೆ ನೀಡಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಇದನ್ನು ನೋಡ್ತಿದ್ರೆ ರಾಜ್ಯ ಸರ್ಕಾರ ಅಕ್ಕಿ ಕೊಡ್ತೀವಿ ಅಂತ ಹೇಳಿ ರಾಜ್ಯದ ಜನರಿಗೆ ಮೋಸ ಮಾಡ್ತಿದೆ. ಇನ್ನೊಂದು ಕಡೆ ತಮ್ಮ ದೋಖಾ ಮುಚ್ಚಿಕೊಳ್ಳಲು, ರೈತರಿಗೆ, ಜನರಿಗೆ ಕೊಟ್ಟ‌ ಮಾತಿಂದ ತಪ್ಪಿಸಿಕೊಳ್ಳಲು ರಾಜಕಾರಣ ಮಾಡ್ತಿದೆ. ಕೇಂದ್ರ ಸರ್ಕಾರ ಆಹಾರ ಭದ್ರತಾ ಕಾಯ್ದೆ ಬಂದ ಮೇಲೆ ಎಲ್ಲರಿಗೂ 5 ಕೆಜಿ ಅಕ್ಕಿ ಕೊಡ್ತಾ ಬರ್ತಿದೆ. ಯಾವುದೇ ಖರ್ಚಿಲ್ಲದೇ ತಲಾ ವ್ಯಕ್ತಿಗೆ 5 ಕೆಜಿ ಅಕ್ಕಿಯನ್ನ ಕೇಂದ್ರ ಕೊಡ್ತಿದೆ. ಸಾಗಣೆ ವೆಚ್ಚ, ನಿರ್ವಹಣಾ ವೆಚ್ಚಗಳನ್ನು ಕೇಂದ್ರವೇ ಭರಿಸುತ್ತಿದೆ. ಸತ್ಯ ಹೇಳಬೇಕೆಂದ್ರೆ ರಾಜ್ಯ ಸರ್ಕಾರ 10 ಕೆಜಿ ಹೆಚ್ಚುವರಿ ಅಕ್ಕಿ ಕೊಡಬೇಕು. ರಾಜ್ಯವು ಕೇಂದ್ರದ ಅಕ್ಕಿ ಸೇರಿ 15 ಕೆಜಿ ಕೊಡಬೇಕು. ಆದ್ರೆ, ಈಗ ಕೇಂದ್ರದ ಐದು ಕೆಜಿ + ಇವರ ಐದು ಕೆಜಿ ಸೇರಿಸಿ 10 ಕೆಜಿ ಕೊಡೋದಾಗಿ ಹೇಳ್ತಿದ್ದಾರೆ. ಮಾತು‌ ತಪ್ಪಿದ ಆಪಾದನೆಯಿಂದ ಪಾರಾಗಲು ಈ ರೀತಿ ಅಕ್ಕಿಯ ರಾಜಕೀಯ ಮಾಡ್ತಿದ್ದಾರೆ. ಕೇಂದ್ರ ಸರ್ಕಾರ ಫುಡ್ ಸೇಫ್ಟಿ ಆಕ್ಟ್ ಪ್ರಕಾರ ಕೊಡ್ತಿದೆ ಎಂದಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಇಂಡೋನೇಷ್ಯಾದಲ್ಲಿ ಪ್ರಬಲ ಭೂಕಂಪಕ್ಕೆ 38ಮಂದಿ ಬಲಿ, ಹಲವು ಮಂದಿಗೆ ಗಾಯ, ಭೀಕರ ವಿಡಿಯೋ

ಇನ್ನೇನು ಹತ್ತಬೇಕೆನ್ನುಷ್ಟರಲ್ಲಿ ಹೊರಟ ವಂದೇ ಭಾರತ್ ಎಕ್ಸ್‌ಪ್ರೆಸ್‌, ಕೈಮುಗಿದು ಬೇಡುತ್ತಿರುವ ಪ್ರಯಾಣಿಕೆಯನ್ನು ಕಂಡು ಲೋಕೋ ಪೈಲೆಟ್ ಏನ್ ಮಾಡಿದ್ರು, Video

ನಾನು ದೇಶಭಕ್ತಿಯ ಪಾಠವನ್ನು ಬಿಜೆಪಿಯವರಿಂದ ಕಲಿಯಬೇಕಿಲ್ಲ: ಜಮೀರ್ ಅಹ್ಮದ್

ಪಡುಬಿದ್ರಿ ಡೇವಿಡ್ ಡಿಸೋಜ ಹತ್ಯೆ, ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ

80ನೇ ಸ್ವಾತಂತ್ರ್ಯ ಸಂದರ್ಭದಲ್ಲಿ ಭಾರತದ ಅಸಾಧಾರಣ ಪ್ರಗತಿಗೆ ಪುಟಿನ್ ಶ್ಲಾಘನೆ

ಮುಂದಿನ ಸುದ್ದಿ
Show comments