ನಗರದ ಪ್ರಮುಖ ರಸ್ತೆಗಳ ಗೋಡೆಗಳ ಮೇಲೆ ಪೋಸ್ಟರ್ ಗಳು ರಾರಾಜಿಸುತ್ತಿವೆ.ಸಾರ್ವಜನಿಕ ಸ್ಥಳಗಳಲ್ಲಿ ಬಿಜೆಪಿ,ಕಾಂಗ್ರೆಸ್ ಭರವಸೆಗಳ ಪೋಸ್ಟರ್ ಪಾಲಿಟಿಕ್ಸ್ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದರು ಅದರೂ ಬಿಬಿಎಂಪಿ ಕ್ಯಾರೆ ಎಂದಿರಲ್ಲಿಲ್ಲಾ ರಾಜ್ ನ್ಯೂಸ್ ಈ ಸುದ್ದಿಯನ್ನ ಒಂದರ ಮೇಲೊಂದು ಸುದ್ದಿ ಬಿತ್ತರಿಸಿತ್ತು ತದಾದನಂತರ ಪೊಲೀಸ್ ಕಮೀಷನರ್ ಜೊತೆ ಬಿಬಿಎಂಪಿ ಕಮೀಷನರ್ ಮತ್ತು ಪಾಲಿಕೆ ಕಂದಾಯ ವಿಭಾಗದ ದೀಪಕ್ ಸೇರಿದಂತೆ ಹೈ ವೋಲ್ಟೇಜ್ ಮೀಟಿಂಗ್ ನಡೆಸಿದ್ದಾರೆ.ಅದರಂತೆ ಪೋಸ್ಟರ್ ಕೇಸ್ ನಲ್ಲಿ ಒಟ್ಟು ಈಗಾಗಲೇ 90 ಕೇಸ್ ಗಳು ದಾಖಾಲಾಗಿವೆ ಇದರ ಪೈಕಿ 52 ಕೇಸ್ ಗಳಿಗೆ ಎಫ್,ಐ,ಆರ್ ಬಿದ್ದಿದೆ .ರಾಜಕೀಯ ನಾಯಕರು ಪಕ್ಷಗಳ ಹೆಸರಿನಲ್ಲಿ ಕಾನೂನಿನ ನಿಯಮಗಳನ್ನು ಗಾಳಿಗೆ ತೂರಿ ಸಾರ್ವಜನಿಕ ವಲಯಗಳಲ್ಲಿ ಪೊಸ್ಟ್ ರ್ ಅಂಟಿಸಿದ್ದ ಕೆಲ ಮಂದಿಗಳ ಮೇಲೆ ಬಿಬಿಎಂಪಿಯ ಖಡಕ್ ಎಚ್ಚರಿಕೆಯ ಮೇರಿಗೆ ಕೆಲವು ಠಾಣೆ ಗಳಲ್ಲಿ ಎಫ್.ಐ.ಆರ್ ದಾಖಲಾಗಿದೆ.