ಬೆಂಗಳೂರು : ಮೆಟ್ರೋ ಎಸ್ಕೆಲೇಟರ್ ಮೇಲಿಂದ ಬಿದ್ದು ಮಗುವೊಂದು ಸಾವನ್ನಪ್ಪಿರುವ ಘಟನೆ ನಿನ್ನೆ ರಾತ್ರಿ ಶ್ರೀರಾಂಪುರ ಮೆಟ್ರೋ ಸ್ಟೇಷನ್ನಲ್ಲಿ ನಡೆದಿದೆ.
ಒಂದೂವರೆ ವರ್ಷದ ಹಾಸಿನಿ ಎಸ್ಕಲೇಟರ್ ನಿಂದ ಬಿದ್ದ ಮೃತಪಟ್ಟ ಕಂದ. ನಿನ್ನೆ ರಾತ್ರಿ ಶ್ರೀರಾಂಪುರ ಮೆಟ್ರೋ ಸ್ಟೇಷನ್ನಲ್ಲಿ ಹಾಸಿನಿ ತನ್ನ ಅಜ್ಜಿ ಜೊತೆ ತೆರಳುವಾಗ ಎಸ್ಕಲೇಟರ್ನಿಂದ ಆಯತಪ್ಪಿ ಬಿದ್ದಿದ್ದಾಳೆ. ಪರಿಣಾಮ ಮಗುವಿನ ತಲೆಗೆ ಬಲವಾದ ಪೆಟ್ಟು ಬಿದ್ದಿದೆ.
ತಕ್ಷಣವೇ ಮಗುವನ್ನು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಿತ್ತಾದರೂ, ಚಿಕಿತ್ಸೆ ಫಲಕಾರಿಯಾಗದೇ ಹಾಸಿನಿ ಇಂದು ಬೆಳಿಗ್ಗೆ ಮೃತಪಟ್ಟಿದ್ದಾಳೆ. ಆಸ್ಪತ್ರೆಯ ಬಳಿ ಪೋಷಕರ ಆಂಕ್ರಂದನ ಮುಗಿಲು ಮುಟ್ಟಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.