ಬೆಂಗಳೂರು: ಲಾಕ್ ಡೌನ್ ಬಳಿಕ ದೇವಾಲಯ ತೆರೆಯಲು ಸರ್ಕಾರ ಒಪ್ಪಿಗೆ ನೀಡಿದೆ. ಆದರೆ ಕೆಲವು ನಿರ್ಬಂಧಗಳನ್ನೂ ಹೇರಲಾಗಿದೆ.
ರಾಜ್ಯದ ಎಲ್ಲಾ ದೇವಾಲಯಗಳಿಗೆ 65 ವರ್ಷ ಮೇಲ್ಪಟ್ಟವರಿಗೆ, 10 ವರ್ಷ ಒಳಗಿನವರಿಗೆ ಪ್ರವೇಶವಿಲ್ಲ. ಪ್ರಸಾದ ರೂಪದಲ್ಲಿ ತೀರ್ಥ ನೀಡುವಂತಿಲ್ಲ. ಪ್ರಸಾದ ಭೋಜನ ಸಮಯದಲ್ಲೂ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ದೇವರ ದರ್ಶನ ಸಮಯದಲ್ಲೂ ಸಾಮಾಜಿಕ ಅಂತರವಿರಬೇಕು.
ರಾಜ್ಯದ ಪ್ರಸಿದ್ಧ ದೇವಾಲಯಗಳಲ್ಲಿ ಈಗಾಗಲೇ ಈ ಬಗ್ಗೆ ದೇವಾಲಯದ ಪರಿಸರದಲ್ಲೇ ಸೂಚನಾ ಫಲಕವನ್ನೂ ನೀಡಲಾಗಿದೆ. ಸ್ಯಾನಿಟೈಸ್ ವ್ಯವಸ್ಥೆಯನ್ನೂ ಮಾಡಲಾಗಿದೆ.