Select Your Language

Notifications

webdunia
webdunia
webdunia
webdunia

ಟೆಲಿಕಾಂ ಸ್ಪೆಕ್ಟ್ರಂ ಹಗರಣ: ಕೋರ್ಟ್‌ಗೆ ಮಾಹಿತಿ ನೀಡಿದ ಸರ್ಕಾರ

ಟೆಲಿಕಾಂ ಸ್ಪೆಕ್ಟ್ರಂ ಹಗರಣ: ಕೋರ್ಟ್‌ಗೆ ಮಾಹಿತಿ ನೀಡಿದ ಸರ್ಕಾರ
ನವದೆಹಲಿ , ಗುರುವಾರ, 26 ಮಾರ್ಚ್ 2015 (19:19 IST)
ಟೆಲಿಕಾಂ ಸ್ಪೆಕ್ಟ್ರಂ ಹಗರಣಕ್ಕೆ ಸಂಬಂಧಿಸಿದ ಎಲ್ಲಾ ಹರಾಜು ಪ್ರಕ್ರಿಯೆಯನ್ನು ಪೂರ್ಣಗೊಳಿಸಿ ಬಿಡ್ ಖರೀದಿದಾರರ ಹೆಸರುಗಳನ್ನು ಬಹಿರಂಗಗೊಳಿಸಿ ಎಂದು ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಇಂದು ಸೂಚಿಸಿದೆ.    
 
ಈ ಹಿಂದೆ ಪ್ರತಿಕ್ರಿಯಿಸಿದ್ದ ಸುಪ್ರೀಂ ಕೋರ್ಟ್, ಹರಾಜು ಪ್ರಕ್ರಿಯೆಯ ಫಲಿತಾಂಶವೇ ಒಂದು ದೊಡ್ಡ ತಲೆನೋವಾಗಿ ಪರಿಣಮಿಸಿದ್ದು, ಅವುಗಳು ಬಗೆ ಹರಿಯದೆ ಸ್ಪೆಕ್ರಂ ಹಗರಣವನ್ನು ಪೂರ್ಣಗೊಳಿಸಲು ಸಾಧ್ಯವಿಲ್ಲ ಎಂದು ಕಳೆದ 19 ದಿನಗಳ ಹಿಂದೆ ಸರ್ಕಾರಕ್ಕೆ ಸೂಚಿಸಿತ್ತು. ಈ ಹಿನ್ನೆಲೆಯಲ್ಲಿ ಹರಾಜು ಪ್ರಕ್ರಿಯೆಯನ್ನು ಸರ್ಕಾರ ನಿನ್ನೆ ಪೂರ್ಣಗೊಳಿಸಿದ್ದು, 8 ಮಂದಿ ಬಿಡ್ ಖರೀದಿರಾರು ಹರಾಜಿನಲ್ಲಿ ಪಾಲ್ಗೊಂಡು ಖರೀದಿಸಿದ್ದಾರೆ. ಅಲ್ಲದೆ ಬಿಡ್ ಮೊತ್ತ 110 ಸಾವಿರ ಕೋಟಿಗೂ ಮೀರಿ ಸಂಗ್ರಹವಾಗಿದೆ.  
 
ಬಿಡ್‌ಗೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ಕೇಂದ್ರ ಸರ್ಕಾರದ ಅಟಾರ್ನಿ ಜನರಲ್ ಮುಕುಲ್ ರೊಹೊಟ್ಗಿ ಅವರು ಸುಪ್ರೀಂ ಕೋರ್ಟ್‌ಗೆ ನಿನ್ನೆ ಸಲ್ಲಿಸಿದ್ದಾರೆ ಎನ್ನಲಾಗಿದೆ. ಈ ವೇಳೆ ಅವರೊಂದಿಗೆ ಮೊಬೈಲ್ ಆಪರೇಟರ್ಸ್ ಪರವಾಗಿ ಪ್ರತಿಸ್ಪರ್ಧಿ ಸಲಹಾಗಾರರಾದ ಪಿ.ಚಿದಂಬರಂ ಕೂಡ ನ್ಯಾಯಾಲಯದಲ್ಲಿ ಹಾಜರಿದ್ದರು ಎಂದು ತಿಳಿದು ಬಂದಿದೆ. 
 
ಪ್ರಕರಣದ ವಿಚಾರಣೆಯನ್ನು ನಡೆಸುತ್ತಿದ್ದ ನ್ಯಾಯಾಮೂರ್ತಿಗಳಾದ ದೀಪಕ್ ಮಿಶ್ರಾ ಹಾಗೂ ಪ್ರಫುಲ್ಲಾ ಸಿ. ಫಾಂಟ್ ಅವರಿದ್ದ ದ್ವಿ ಸದಸ್ಯ ಪೀಠ, ನಾವು ನ್ಯಾಯಾಲಯದ ಆದೇಶವನ್ನು ಮಾರ್ಪಡಿಸಲು ಒಲವು ತೋರಿದ್ದು, ಹರಾಜು ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಕೇಂದ್ರ ಸರ್ಕಾರಕ್ಕೆ ಸೂಚಿಸುತ್ತಿದ್ದೇವೆ. ಆ ಬಳಿಕ ಮುಂದಿನ ಕ್ರಮವನ್ನು ಕೈಗೊಳ್ಳಲಿದ್ದೇವೆ ಎಂದು ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ ಸರ್ಕಾರ ಬಿಡ್ ಹರಾಜು ಮಾಡಿದೆ.   
 
ಸುಪ್ರೀಂ ನಿನ್ನೆ ಹೊರಡಿಸಿದ ಆದೇಶದಲ್ಲಿ ಬಿಡ್ ಖರೀದಿ ಮಾಡಿರುವ ಎಲ್ಲಾ ಅರ್ಜಿದಾರರು ಸರ್ಕಾರಕ್ಕೆ ಹತ್ತಿರವಾಗಿದ್ದು, ಹರಾಜು ಪ್ರಕ್ರಿಯೆ ಮುಗಿದಿದೆ. ಇದು ಪ್ರಕರಣದ ವಿಚಾರಣೆಗೆ ನೆರವಾಗಲಿದೆ ಎಂದು ಅಭಿಪ್ರಾಯಪಟ್ಟಿತು. 
 
ಇನ್ನು ಪ್ರಕರಣ ಸಂಬಂಧ ಕಳೆದ ಫೆ.26ರಂದು ಹೊರಡಿಸಿದ್ದ ಆದೇಶವನ್ನು ತಡೆಹಿಡಿಯುವ ಹಿನ್ನೆಲೆಯಲ್ಲಿ ಹರಾಜು ಪ್ರಕ್ರಿಯೆಯನ್ನು ಪೂರ್ಣಗೊಳಿಸುವಂತೆ ಸರ್ಕಾರಕ್ಕೆ ಪುನರುಚ್ಚರಿಸಿತ್ತು. 
 
ವಿಚಾರಣಾ ವೇಳೆ ಮಾತನಾಡಿದ ಚಿದಂಬರಂ, ಪ್ರಕರಣವು ಲಕೋಟೆಯೊಂದನ್ನು ಪ್ರದರ್ಶಿಸುವಂತಿದ್ದು, ಒಂದೊಂದು ಇಂಚನ್ನೂ ಕೂಡ ಪರಿಶೀಲಿಸಬೇಕಿದೆ ಎಂದು ನ್ಯಾಯಾಲಯದ ಗಮನಕ್ಕೆ ತಂದರು. 
  
ಬಳಿಕ ಪ್ರತಿಕ್ರಿಯಿಸಿದ ರೊಹೊಟ್ಗಿ, ಹರಾಜು ಪ್ರಕ್ರಿಯೆಯಲ್ಲಿ ಉತ್ತಮ ಯಶಸ್ಸು ಕಂಡು ಬಂದಿದೆ ಎಂದು ಕೋರ್ಟ್ ಗಮನಕ್ಕೆ ತಂದರು.  
 
ಕಳೆದ ಫೆಬ್ರುವರಿ 26ರಂದು ಹೊರಡಿಸಿದ್ದ ಆದೇಶವನ್ನು ಮಾರ್ಪಾಡು ಮಾಡಲು ಕೋರ್ಟ್ ಯತ್ನಿಸುತ್ತಿರುವ ಹಿನ್ನೆಲೆಯಲ್ಲಿ ಮಾತನಾಡಿದ ರೊಹೊಟ್ಗಿ, ಸರ್ಕಾರಕ್ಕೂ ಕೂಡ ಉತ್ತಮ ಬಿಡ್ ಖರೀದಿದಾರರನ್ನು ಪ್ರೋತ್ಸಾಹಿಸಲು ಸಾಧ್ಯವಾಗಿದ್ದು, ಬಿಡ್ ಖರೀದಿದಾರರಿಂದ 28 ಸಾವಿರ ಕೋಟಿ ಹಣ ಪಾವತಿ ಮಾಡಿಕೊಂಡಿದೆ. ಅಲ್ಲದೆ ಅದನ್ನು ಈಗಾಗಲೇ ಕಳೆದ ತಿಂಗಳು ಮಂಡಿಸಿದ ಆಯವ್ಯಯಕ್ಕೆ ಸೇರ್ಪಡೆ ಮಾಡಿಕೊಳ್ಳಲಾಗಿದೆ ಎಂದು ನ್ಯಾಯಾಲಯದ ಗಮನಕ್ಕೆ ತಂದರು. 

Share this Story:

Follow Webdunia kannada