Daily Horoscope
✕

ಬೆಂಗಳೂರು ದಕ್ಷಿಣದಿಂದ ತೇಜಸ್ವಿನಿ ಅನಂತ್ ಕುಮಾರ್ ಸ್ಪರ್ಧೆ

Webdunia
ಗುರುವಾರ, 14 ಮಾರ್ಚ್ 2019 (13:55 IST)
ದಿ. ಅನಂತಕುಮಾರ ಅವರ ಪತ್ನಿ ತೇಜಸ್ವಿನಿ ಅನಂತ್ ಕುಮಾರ್ ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಸ್ಪರ್ಧೆ ಮಾಡೋ ಇಂಗಿತ ವ್ಯಕ್ತಪಡಿಸಿದ್ದಾರೆ.

ಸಿದ್ದಗಂಗಾ ಮಠದಲ್ಲಿ  ತೇಜಸ್ವಿನಿ ಅನಂತ್ ಕುಮಾರ್ ಹೇಳಿಕೆ ನೀಡಿದ್ದು, ಯಾವುದೇ ಶುಭಕಾರ್ಯಕ್ಕೆ‌ ಮುನ್ನ ಅನಂತ್ ಕುಮಾರ್ ಸಿದ್ದಗಂಗಾ ಮಠಕ್ಕೆ  ಭೇಟಿ ನೀಡಿ ಶ್ರೀ ಗಳ ಆಶಿರ್ವಾದ ಪಡೆಯುತ್ತಿದ್ದರು. ನಾನು ಕೂಡ ಶುಭಕಾರ್ಯಕ್ಕೋಸ್ಕರ ಮಠಕ್ಕೆ ಬಂದು ಶ್ರೀಗಳ ಆಶಿರ್ವಾದ ಪಡೆಯುತ್ತಿದ್ದೇನೆ ಎಂದರು. ‌

ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಸ್ಪರ್ಧೆ ಮಾಡುವ ಇಂಗಿತವಿದೆ. ಬಿಜೆಪಿ ಮುಖಂಡರು ಈ ಬಗ್ಗೆ ಸಮ್ಮತಿಸಿದ್ದಾರೆ.
ಮೋದಿಯವರ ದೇಶದ ಅಭಿವೃದ್ಧಿ ಕೆಲಸ ಹಾಗೂ ಮೋದಿ ಅವರ ದೇಶಭಕ್ತಿಯ ಅಲೆ ಇದೆ.
ಆ ಅಲೆಯೇ ನಮ್ಮ ಗೆಲುವಿಗೆ ಕಾರಣವಾಗಲಿದೆ ಎಂದರು.

ದಿವಂಗತ ಅನಂತ್ ಕುಮಾರ್ ರವರ 22 ವರ್ಷಗಳ ಸೇವೆ ಅಭಿವೃದ್ಧಿ ಕೆಲಸ ಶ್ರೀ ರಕ್ಷೆಯಾಗಲಿದೆ. ಮೋದಿ ಅಲೆಯಲ್ಲಿ ಎಲ್ಲಾ ಎದುರಾಳಿಗಳು ತೇಲಿ ಹೋಗ್ತಾರೆ. ಹಾಗಾಗಿ ನಮಗೆ ಯಾವುದೇ ಎದುರಾಳಿಗಳು ಇಲ್ಲ, ಗೆಲುವು ನಮ್ಮದೇ. ಮುಂದಿನ ಪ್ರಧಾನಿ ಮೋದಿಯಾಗುವುದು ನಿಶ್ಚಿತ ಅಂತ ತುಮಕೂರು ಮಠದಲ್ಲಿ ತೇಜಸ್ವಿನಿ ಅನಂತ್ ಕುಮಾರ್ ಹೇಳಿದರು.

 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಹಣವಿಲ್ಲದಿದ್ದರೂ ಮುಖ್ಯಮಂತ್ರಿಗಳಿಂದ ಪುಕ್ಕಟೆ ಘೋಷಣೆ: ಬಿ.ವೈ.ವಿಜಯೇಂದ್ರ

ಪೊಲೀಸರೂ ಮನುಷ್ಯರಲ್ಲವೇ…ದೆಹಲಿ ಪ್ರತಿಭಟನೆ ವೇಳೆ ಗಾಯಗೊಂಡು ಕಣ್ಣೀರು ಹಾಕುತ್ತಿದ್ದ ಪೇದೆಯನ್ನು ತಬ್ಬಿ ಸಾಂತ್ವನಿಸಿದ ಡಿಸಿಪಿ Video

Gold Price: ಚಿನ್ನದ ದರ ಇಂದು ಎಷ್ಟಾಗಿದೆ ನೋಡಿ

ಡಿ.ಕೆ.ಶಿವಕುಮಾರ್ ಮತ್ತೆ ಸಿಎಂ ಆಗುವುದಕ್ಕೆ ನನ್ನ ತಕರಾರಿಲ್ಲ: ಬಿವೈ ವಿಜಯೇಂದ್ರ ಹೀಗಂದಿದ್ಯಾಕೆ

ಮತ್ತೆ ಕಮಲ ಹಿಡಿಯಲಿದ್ದಾರಾ ಕೆ.ಎಸ್. ಈಶ್ವರಪ್ಪ: ಸುಳಿವು ನೀಡಿದ ಮಾಜಿ ಸಚಿವ

ಮುಂದಿನ ಸುದ್ದಿ
Show comments