Webdunia - Bharat's app for daily news and videos

Install App

ತಂತ್ರಜ್ಞಾನ ಆಧಾರಿತ ಅಭಿವೃದ್ಧಿ ಕರ್ನಾಟಕದಿಂದ ಆಗುತ್ತಿದೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

Webdunia
ಶುಕ್ರವಾರ, 17 ಜೂನ್ 2022 (19:03 IST)
ಕರ್ನಾಟಕವನ್ನು ದೇಶದ ಅಭಿವೃದ್ಧಿಯ ಇಂಜಿನ್ ಎಂದು ಗುರುತಿಸಿರುವುದೇ ಕರ್ನಾಟಕದ ಮಹತ್ವವನ್ನು ಸಾರುತ್ತದೆ. ಕರ್ನಾಟಕಕ್ಕೆ ತಂತ್ರಜ್ಞಾನ ಅಭಿವೃದ್ಧಿಯ ಸುದೀರ್ಘ ಇತಿಹಾಸವಿದೆ. ಏರೋಸ್ಪೇಸ್ ರಕ್ಷಣಾ ಹಾಗೂ ಉತ್ಪಾದನಾ ವಲಯದಲ್ಲಿ ಅತಿ ಹೆಚ್ಚಿನ ಸಾರ್ವಜನಿಕ ವಲಯ ಸಂಸ್ಥೆಗಳನ್ನು ಕರ್ನಾಟಕ ಹೊಂದಿದೆ. ಮೈಸೂರು ಮಹಾರಾಜರು ಸ್ಟೀಲ್, ಸಿಮೆಂಟ್ ನಿಂದ ಹಡಿದು ಶಾಯಿಯವರೆಗೆ ಕೈಗಾರಿಕೆಗಳನ್ನು ಪ್ರಾರಂಭಿಸಿದ್ದರು. ಹಾಗಾಗಿ ಕರ್ನಾಟಕ ಬಹಳ ಹಿಂದಿನಿಂದಲೇ ಕೈಗಾರೀಕರಣದಲ್ಲಿ ಮುಂಚೂಣಿಯಲ್ಲಿರುವ ರಾಜ್ಯ.  ವಿಶ್ವದಾದ್ಯಂತ ಬಳಕೆಯಲ್ಲಿದ್ದ ಹೊಸ ತಂತ್ರಜ್ಞಾನವನ್ನು ಬೆಂಗಳೂರಿನಲ್ಲಿ ಪರೀಕ್ಷಿಸಲಾಗುತ್ತಿತ್ತು. ಜೈವಿಕ ತಂತ್ರಜ್ಞಾನ, ಜಿನೋಮ್ಯಾಟಿಕ್ಸ್, ಕೃತಕ ಬುದ್ದಿಮತ್ತೆ ಸೇರಿದಂತೆ ಅತಿ ಹೆಚ್ಚಿನ ಅಂಡ್ ಡಿ ಕೇಂದ್ರಗಳು ಬೆಂಗಳೂರಿನಲ್ಲಿವೆ.  ಅತಿ ಹೆಚ್ಚಿನ ಆರ್ ಅಂಡ್ ಡಿ ಕೇಂದ್ರಗಳನ್ನು ಹೊಂದಿರುವ ಏಕೈಕ ರಾಜ್ಯ ಕರ್ನಾಟಕ.  ಹೊಸ ಉತ್ಪನ್ನಗಳು, ಅಪ್ಲಿಕೇಷನ್‍ಗಳನ್ನು ಅಭಿವೃದ್ಧಿಪಡಿಸಲಾಗಿದೆ.  500 ಫಾರ್ಚೂನ್ ಕಂಪನಿಗಳು ಬೆಂಗಳೂರಿನಲ್ಲಿವೆ. ಕೃಷಿ, ಉತ್ಪಾದನೆ, ಐಟಿ-ಬಿಟಿ, ಡಿ.ಆರ್.ಡಿ.ಒ, ಏರೋಸ್ಪೇಸ್ ಹಾಗೂ ಸ್ಟಾರ್ಟ್ ಅಪ್‍ಗಳಲ್ಲಿ ನಾವು ಮುಂಚೂಣಿಯಲ್ಲಿದ್ದೇವೆ ಎಂದರು. 
 
ದೆಹಲಿಯಲ್ಲಿ ರೂಪಿಸಲಾಗುವ ನೀತಿಗಳ ನೇರ ಪರಿಣಾಮ ಕರ್ನಾಟದ ಮೇಲಾಗಲಿದೆ
ಡಬಲ್ ಇಂಜಿನ್ ಸರ್ಕಾರದಿಂದ  ಆಗುವ ಲಾಭಗಳೇನು ಎಂಬ ಪ್ರಶ್ನೆಗೆ ಉತ್ತರಿಸುತ್ತಾ,  ಡಬಲ್ ಇಂಜಿನ್ ಸರ್ಕಾರದಿಂದ  ಖಂಡಿತ ಲಾಭವಿದೆ. ದೆಹಲಿಯ ಬಾಗಿಲು ತೆರೆದಿದ್ದರೆ ಅನೇಕ ಕೆಲಸಗಳು ಸುಲಭವಾಗಿ ಆಗುತ್ತವೆ.  ನೀತಿ ನಿರೂಪಣೆ ದೆಹಲಿಯಲ್ಲಿ ಆಗುತ್ತದೆ. ಅಂತರರಾಷ್ಟ್ರೀಯ ಹೆಬ್ಬಾಗಿಲು ದೆಹಲಿಯಲ್ಲಿದ್ದು, ಡಬಲ್ ಇಂಜಿನ್ ಸರ್ಕಾರ ಮಾತ್ರ ಅಂತರರಾಷ್ಟ್ರೀಯ ಮಟ್ಟಕ್ಕೆ ಏರಲು ರಹದಾರಿ ಮಾಡಿಕೊಡಲು ಸಾಧ್ಯವಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.  
 
ಪ್ರಧಾನಿಗಳು ದೂರದೃಷ್ಟಿವುಳ್ಳ ನಾಯಕರು.
 
ಪ್ರಧಾನಿ ಮೋದಿವರು ಒಬ್ಬ ದೂರದೃಷ್ಟಿವುಳ್ಳ ನಾಯಕರು. ಕೌಶಲ್ಯಾಭಿವೃದ್ಧಿಗೆ ಅವರು ಆದ್ಯತೆ ನೀಡಿದ್ದಾರೆ. ಕರ್ನಾಟಕದಲ್ಲಿ ಕೌಶಲ್ಯವುಳ್ಳ ಮಾನವ ಸಂಪನ್ಮೂಲವಿದೆ. ಮೊದಲು ದೇಶದಲ್ಲಿ ಜನಸಂಖ್ಯೆ ಅಭಿವೃದ್ಧಿಗೆ ಮಾರಕ ಎಂಬಂತೆ ಬಿಂಬಿಸಲಾಗುತ್ತಿತ್ತು. ಈ ಅನಾನುಕೂಲವನ್ನು ಅನುಕೂಲವನ್ನಾಗಿ ಮೋದಿಯವರು  ಪರಿವರ್ತಿಸಿದರು. ಜನಸಂಖ್ಯಾ ವಿಜ್ಞಾನದ ಲಾಭ ಕರ್ನಾಟಕದಿಂದ ದೊಡ್ಡ ಮಟ್ಟದಲ್ಲಿ ಆಗುತ್ತಿದೆ. ಇದು ಇತರೆ ರಾಜ್ಯಗಳನ್ನೂ ಆಕರ್ಷಿಸುತ್ತಿದೆ ಎಂದರು.
 
ಆತ್ಮನಿರ್ಭರ್ ಭಾರತ್ ಯೋಜನೆಯಡಿ ರಕ್ಷಣಾ ಇಲಾಖೆಯ ಮೂರೂ ವಿಭಾಗಗಳ ಅಸ್ತಿತ್ವ ರಾಜ್ಯದಲ್ಲಿದೆ ಅದರಲ್ಲೂ ಡಿಆರ್ ಡಿ ಒ, ಆರ್ ಅಂಡ್ ಡಿ ಕೇಂದ್ರಗಳಿವೆ. ಸೆಮಿ ಕಂಡಕ್ಟರ್ ವಲಯದಲ್ಲಿ ಪ್ರಮುಖ ಸಂಸ್ಥೆಗಳೊಂದಿಗೆ  ಒಪ್ಪಂದ ಮಾಡಿಕೊಂಡಿರುವ  ಮೊದಲ ರಾಜ್ಯ ಕರ್ನಾಟಕ.  ಅತಿ ಶೀಘ್ರದಲ್ಲಿಯೇ ರಾಜ್ಯದಲ್ಲಿ ಸೆಮಿ ಕಂಡಕ್ಟರ್ ಗಳನ್ನು ರಾಜ್ಯದಲ್ಲಿ ಉತ್ಪಾದಿಸಲಾಗುವುದು. ಇದು  ನಮ್ಮ ಶಕ್ತಿ. ಆದ್ದರಿಂದ ಡಬಲ್ ಇಂಜಿನ್ ಸರ್ಕಾರ ನೂರಕ್ಕೆ ನೂರರಷ್ಟು ಲಾಭವನ್ನು ತಂದುಕೊಡಲಿದೆ. ಅತಿ ಹೆಚ್ಚಿನ ಎಫ್ ಪಿ ಒ ಗಳಿವೆ, ಸ್ಟಾರ್ಟ್ ಅಪ್‍ಗಳು, ಯೂನಿಕಾರ್ನ್‍ಗಳು ಇಲ್ಲಿವೆ.  ದೆಹಲಿಯಲ್ಲಿ ರೂಪಿಸಲಾಗುವ ನೀತಿಗಳ ನೇರ ಪರಿಣಾಮ ಕರ್ನಾಟದ ಮೇಲಾಗಲಿದೆ ಎಂದರು.
 
ಕರ್ನಾಟಕ ರಾಜ್ಯದಲ್ಲಿ ಯೂನಿಕಾರ್ನ್‍ಗಳನ್ನು ಆಕರ್ಷಿಸಲು ತೆಗೆದುಕೊಂಡಿರುವ ಕ್ರಮಗಳೇನು ಎಂಬ ಪ್ರಶ್ನೆಗೆ  ಉತ್ತರಿಸಿ, ಸ್ಟಾರ್ಟ್‍ಅಪ್‍ಗಳು ಬೆಳೆದು ಯೂನಿಕಾರ್ನ್,ಡೆಕಾಕಾರ್ನ್‍ಗಳಾಗುತ್ತವೆ. ಸಂಸ್ಥೆಗಳ ಸ್ಥಾಪನೆಗೆ ಪೂರಕ ವಾತಾವರಣದ ಅವಶ್ಯಕತೆ ಇದೆ.ಮೋದಿಯವರ Little Government,  Best Governance ನೀತಿ ಬೆಳವಣಿಗೆಯ ಹೊಸ ರೀತಿಯಾಗಿದೆ.  ಕರ್ನಾಟಕದ ಎಕೋ ಸಿಸ್ಟಂ, ಆರ್ ಎಂಡ್ ಡಿ, ಕೌಶಲ್ಯಭರಿತ ಮಾನವ ಸಂಪನ್ಮೂಲಗಳು ಸ್ಟಾರ್ಟ್‍ಅಪ್‍ಗಳ ಸ್ಥಾಪನೆಗೆ ಪೂರಕವಾಗಿದೆ. ರಾಜ್ಯದಲ್ಲಿ ಎಲಿವೇಟ್ ಕಾರ್ಯಕ್ರಮಗಳು, ಮಹಿಳೆಯರು, ಗ್ರಾಮೀಣ ಯುವಜನತೆಗೆ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ರಾಜ್ಯದಲ್ಲಿ ಕೃಷಿ, ಮೀನುಗಾರಿಕೆ,ಜವಳಿ ಕ್ಷೇತ್ರದಲ್ಲಿಯೂ ಸ್ಟಾರ್ಟಅಪ್ ಗಳಿವೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments