Select Your Language

Notifications

webdunia
webdunia
webdunia
webdunia

ವಾಹನ ಅಪಘಾತದಲ್ಲಿ ಟೆಕ್ಕಿ ಯುವತಿ ಬಲಿ

ವಾಹನ ಅಪಘಾತದಲ್ಲಿ ಟೆಕ್ಕಿ ಯುವತಿ ಬಲಿ
ಬೆಂಗಳೂರು , ಗುರುವಾರ, 28 ಜನವರಿ 2016 (19:13 IST)
ನಗರದ ಕಬ್ಬನ್ ರೋಡ್ ಜಂಕ್ಷನ್‌ನಲ್ಲಿ ಹೋಂಡಾ ಆಕ್ಟಿವಾ ಬೈಕ್‌ಗೆ ಹಾಲಿನ ವಾಹನ ಡಿಕ್ಕಿ ಹೊಡೆದು ಹಿಂಬದಿ ಕುಳಿತಿದ್ದ ಟೆಕ್ಕಿ ಯುವತಿ ಸಾವನ್ನಪ್ಪಿದ ದಾರುಣ ಘಟನೆ ಸಂಭವಿಸಿದೆ. 25 ವರ್ಷದ   ಮಧುರಾ ಸಾಫ್ಟವೇರ್ ಕಂಪನಿಯೊಂದರಲ್ಲಿ ಟೆಕ್ಕಿಯಾಗಿದ್ದು ತಮ್ಮ ಸ್ನೇಹಿತೆಯೊಂದಿಗೆ ಆಕ್ಟಿವಾ ಹೋಂಡಾದಲ್ಲಿ ಹಿಂಬದಿ ಕುಳಿತು ಪ್ರಯಾಣಿಸುತ್ತಿದ್ದರು.

 ವಾಹನ ಹಿಂಬದಿ ಕುಳಿತಿದ್ದ ಮಧುರಾಗೆ ಡಿಕ್ಕಿ ಹೊಡೆದಿದ್ದರಿಂದ ಕೆಳಕ್ಕೆ ಬಿದ್ದ ಮಧುರಾ ಮೇಲೆ ವಾಹನ ಹರಿದ ಪರಿಣಾಮವಾಗಿ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇಬ್ಬರೂ ಹೆಲ್ಮೆಟ್ ಧರಿಸಿದ್ದರೂ ಪ್ರಾಣವನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ.

ಶುಭಾರಾವ್ ಕೂಡ ತೀವ್ರವಾಗಿ ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಕಬ್ಬನ್ ಪಾರ್ಕ್ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Share this Story:

Follow Webdunia kannada