ತಮಿಳು ಸಿನೆಮಾ ಚಿತ್ರಗಳನ್ನು ಪ್ರದರ್ಶಿಸುತ್ತಿದ್ದ ಥಿಯೇಟರ್‌ಗಳಿಗೆ ನುಗ್ಗಿದ ಪ್ರತಿಭಟನಾಕಾರರು ಸಿನೆಮಾ ಪ್ರದರ್ಶನವನ್ನು ನಿಲ್ಲಿಸಿದ ಘಟನೆ ವರದಿಯಾಗಿದೆ.
ತಮಿಳು ಸಿನೆಮಾ ಚಿತ್ರಗಳನ್ನು ಪ್ರದರ್ಶಿಸುತ್ತಿದ್ದ ಥಿಯೇಟರ್‌ಗಳಿಗೆ ಪ್ರತಿಭಟನಾಕಾರರು ನುಗ್ಗುತ್ತಿದ್ದಂತೆ ಸಿನೆಮಾ ವೀಕ್ಷಣೆಯಲ್ಲಿ ತೊಡಗಿದ್ದವರು ಭಯದಿಂದ ಓಡಿಹೋಗಲು ಯತ್ನಿಸಿದಾಗ ಹಲವರು ಕಾಲ್ತುಳಿತಕ್ಕೊಳಗಾದರು ಎಂದು ಮೂಲಗಳು ತಿಳಿಸಿವೆ.
ಸುಪ್ರೀಂಕೋರ್ಟ್ ತೀರ್ಪು ವಿರೋಧಿಸಿ ನಡೆಯುತ್ತಿರುವ ಹೋರಾಟ ಉಭಯ ರಾಜ್ಯಗಳ ಗಡಿಗಳಲ್ಲಿ ತೀವ್ರ ಉದ್ರಿಕ್ತ ವಾತಾವರಣ ಸೃಷ್ಟಿಸಿದೆ. ರಾಜ್ಯದಿಂದ ತಮಿಳುನಾಡಿಗೆ ಮತ್ತು ತಮಿಳುನಾಡಿನಿಂದ ರಾಜ್ಯಕ್ಕೆ ಬಸ್ ಸಂಚಾರವನ್ನು ರದ್ದುಗೊಳಿಸಲಾಗಿದೆ.
ರಾಜ್ಯದಿಂದ ತಮಿಳುನಾಡಿಗೆ ಹೊರಟಿದ್ದ ರಾಜಹಂಸ ಬಸ್‌ಮೇಲೆ ಕೆಲ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ ನಂತರ ಬಸ್ ಸಂಚಾರವನ್ನು ರದ್ದುಗೊಳಿಸಲಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ