Select Your Language

Notifications

webdunia
webdunia
webdunia
webdunia

ಉಗ್ರರ ಆತ್ಮಾಹುತಿ ದಾಳಿಗೆ 20 ಸಾವು

ಉಗ್ರರ ಆತ್ಮಾಹುತಿ ದಾಳಿಗೆ 20 ಸಾವು
ಕಾಬೂಲ್ , ಮಂಗಳವಾರ, 2 ಫೆಬ್ರವರಿ 2016 (09:21 IST)
ಕಾಬೂಲ್‌ನಲ್ಲಿ ಸೋಮವಾರ ನಡೆದ ಆತ್ಮಾಹುತಿ ದಾಳಿಯಲ್ಲಿ 20ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದು, 29 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. 

ಪೊಲೀಸ್ ಠಾಣೆಯೊಂದರ ಹೊರ ಭಾಗದಲ್ಲಿ ಈ ದಾಳಿ ನಡೆದಿದ್ದು ತಾಲಿಬಾನ್ ಭಯೋತ್ಪಾದಕ ಸಂಘಟನೆ ಈ ದಾಳಿ ಹೊಣೆಯನ್ನು ಹೊತ್ತುಕೊಂಡಿದೆ. 
 
ಸಾವನ್ನಪ್ಪಿದವರಲ್ಲಿ ಹೆಚ್ಚಿನವರು ಅಮಾಯಕ ನಾಗರಿಕರಾಗಿದ್ದು, ತಾಲಿಬಾನ್‌ ಸಂಘಟನೆಯೊಟ್ಟಿಗೆ ಅಂತರರಾಷ್ಟ್ರೀಯ ಮಟ್ಟದ ಮತ್ತೊಂದು ಸುತ್ತಿನ ಶಾಂತಿ ಮಾತುಕತೆ ನಡೆಯುವ ಕೆಲವು ದಿನಗಳ ಮುನ್ನವೇ ಈ ಘಟನೆ ನಡೆದಿದೆ.
 
ಅಪ್ಘನ್‌ನಲ್ಲಿ ಪೊಲೀಸರನ್ನು ಗುರಿಯಾಗಿಸಿಕೊಂಡು ಉಗ್ರರು ದಾಳಿ ನಡೆಸುತ್ತಿರುವುದು ಹೆಚ್ಚುತ್ತಲೇ ಇದೆ. 

Share this Story:

Follow Webdunia kannada