ಕುರುಬ ಸಮಾಜವನ್ನು ರಾಜಕೀಯಕ್ಕೆ ಸಿದ್ದು ಬಳಸಿಕೊಂಡಿದ್ದಾರೆ ಎಂದ ಸ್ವಾಮೀಜಿ..!

Webdunia
ಮಂಗಳವಾರ, 1 ಜನವರಿ 2019 (17:12 IST)
ಕುರುಬ ಸಮಾಜವನ್ನು ಮಾಜಿ ಸಿಎಮ್ ಸಿದ್ದರಾಮಯ್ಯನವರು ರಾಜಕೀಯ ಲಾಭಕ್ಕೆ ಬಳಸಿಕೊಂಡಿದ್ದಾರೆ. ಆದರೆ ಕುರುಬ ಸಮಾಜದ ಸಮಸ್ಯೆಗಳನ್ನು ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡಿಲ್ಲ ಎಂದು ಸ್ವಾಮೀಜಿ ಗಂಭೀರ ಆರೋಪ ಮಾಡಿದ್ದಾರೆ.

ಹುಬ್ಬಳ್ಳಿಯಲ್ಲಿ ಬಸವರಾಜ್ ದೇವರು ಸ್ವಾಮೀಜಿ ಈ ಆರೋಪ ಮಾಡಿದ್ದಾರೆ. ಮನಸೂರು ರೇವಣಸಿದ್ದೇಶ್ವರ ಮಠದ ಪೀಠಾಧ್ಯಕ್ಷ ಬಸವರಾಜ ದೇವರು ಮಾತನಾಡಿ, ಸಿದ್ದರಾಮಯ್ಯನವರು ನನ್ನಿಂದಲೇ ಸಮಾಜ ಎನ್ನುವ ಭಾವನೆ ಕೈಬಿಡಬೇಕು. ಪ್ರಸ್ತುತ ಸರ್ಕಾರದಲ್ಲಿ ಹಲವು ಕುರುಬ ಸಮಾಜದ ಸಚಿವರಿದ್ದಾರೆ. ಅಧಿಕಾರಕ್ಕೆ ಬರಲು ಮಾತ್ರ ಸಮಾಜ ಬಳಸಿಕೊಂಡು ನಂತರ ಕಡೆಗಣಿಸುತ್ತಾರೆ ಎಂದು ದೂರಿದರು.

ಸಂಗೊಳ್ಳಿ ರಾಯಣ್ಣನನ್ನು ಬ್ರಿಟೀಷರಿಗೆ ಹಿಡಿದು ಕೊಟ್ಟದ್ದು ಇನಾಂದಾರ್ ಕುಟುಂಬ. ಸರ್ಕಾರ ಇನಾಂದಾರ್ ಕುಟುಂಬಕ್ಕೆ ಜಮೀನು ಕೊಟ್ಟಿದೆ‌ ಆದರೆ ಸಂಗೊಳ್ಳಿ ರಾಯಣ್ಣ ಕುಟುಂಬಕ್ಕೆ ಯಾವುದೇ ಆರ್ಥಿಕ ನೆರವು ನೀಡಿಲ್ಲ ಎಂದು ಅಸಮಧಾನ ವ್ಯಕ್ತಪಡಿಸಿದರು.



ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ದುಬೈಯಂತಹ ದೇಶ ನಿರ್ಮಿಸಿರುವ ಬಿಹಾರಿಗಳು ಇಂದು ನಿರುದ್ಯೋಗಿಗಳು: ರಾಹುಲ್ ಗಾಂಧಿ

ಮತಕ್ಕಾಗಿ ಮೋದಿ ನೃತ್ಯ ಮಾಡಕ್ಕೂ ಸೈ ಎಂದ ರಾಹುಲ್ ಗಾಂಧಿ ವಿರುದ್ಧ ದೂರು

ಕನ್ನಡ ರಾಜ್ಯೋತ್ಸವ ಪ್ರಶಸ್ತಿ 2025: ವಿಜೇತರ ಪಟ್ಟಿ, ಪ್ರಶಸ್ತಿ ವಿವರ ಇಲ್ಲಿದೆ

ಬಿಹಾರ ವಿಧಾನಸಭೆ ಚುನಾವಣೆ, ನಾಳೆ ಎನ್‌ಡಿಎ ಪ್ರಣಾಳಿಕೆ ಬಿಡುಗಡೆ

ಮಕ್ಕಳು ಸೇರಿದಂತೆ 17ಮಂದಿಯನ್ನು ಒತ್ತೆಯಾಳಾಗಿ ಇರಿಸಿಕೊಂಡಿದ್ದ ಆರ್ಯ ಗುಂಡೇಟಿಗೆ ಬಲಿ

ಮುಂದಿನ ಸುದ್ದಿ
Show comments