Select Your Language

Notifications

webdunia
webdunia
webdunia
webdunia

ಹೊಲದಲ್ಲಿ ಅನುಮಾನಾಸ್ಪದ ವಸ್ತು ಪತ್ತೆ, ಆತಂಕದಲ್ಲಿ ಗ್ರಾಮಸ್ಥರು

ಹೊಲದಲ್ಲಿ ಅನುಮಾನಾಸ್ಪದ ವಸ್ತು ಪತ್ತೆ, ಆತಂಕದಲ್ಲಿ ಗ್ರಾಮಸ್ಥರು
ಬೆಳಗಾವಿ , ಭಾನುವಾರ, 15 ಮಾರ್ಚ್ 2015 (12:13 IST)
ಬೆಳಗಾವಿ ಹೊರವಲಯಲ್ಲಿರುವ ಸೋನೋಳಿ ಗ್ರಾಮದಲ್ಲಿ ಅನುಮಾನಾಸ್ಪದ ವಸ್ತು ಪತ್ತೆಯಾಗಿದೆ. 

ರೈತ ಅಶೋಕ್ ಪಾಟೀಲ್‌ಗೆ ಸೇರಿದ ಜಮೀನಿನಲ್ಲಿ ಇದು ಕಂಡು ಬಂದಿದೆ. ನಿನ್ನೆ ರಾತ್ರಿಯಿಂದ ಇದು ಕಾಣಿಸಿಕೊಂಡಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. 
 
ಕ್ಷಿಪಣಿ ರೀತಿಯಲ್ಲಿ ಇರುವ ಈ ವಸ್ತು ನೆಲದಡಿ ಹೂತುಕೊಂಡಿದ್ದು ಬಾಂಬ್ ಇರಬಹುದೆಂದು ಸ್ಥಳೀಯರು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಗ್ರಾಮದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದ್ದು ಬೆಳಗಾವಿ ಗ್ರಾಮಾಂತರ ಠಾಣಾ ಪೊಲೀಸರು  ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸುತ್ತಿದ್ದಾರೆ. 
 
ಜನರ ಭಯವನ್ನು ಹೋಗಲಾಡಿಸುವ ದೃಷ್ಟಿಯಿಂದ ಪೊಲೀಸರು ಕಾರ್ಯಪ್ರವೃತ್ತರಾಗಿದ್ದು ಸ್ಥಳಕ್ಕೆ ಬಾಂಬ್ ನಿಷ್ಕಿೃಯ ದಳವನ್ನು ಕರೆತರುವ ಕುರಿತು ಚಿಂತನೆ ನಡೆಯುತ್ತಿದೆ. 

Share this Story:

Follow Webdunia kannada