Webdunia - Bharat's app for daily news and videos

Install App

ಗೋರಿಪಾಳ್ಯವನ್ನು ಪಾಕ್‌ಗೆ ಹೋಲಿಸಿದ ನ್ಯಾಯಾಧೀಶ ವಿ ಶ್ರೀಶಾನಂದಗೆ ಸುಪ್ರೀಂ ತರಾಟೆ

Sampriya
ಬುಧವಾರ, 25 ಸೆಪ್ಟಂಬರ್ 2024 (15:06 IST)
Photo Courtesy X
ಬೆಂಗಳೂರು: ಗೋರಿಪಾಳ್ಯವನ್ನು ಪಾಕಿಸ್ತಾನಕ್ಕೆ ಹೋಲಿಕೆ ಮಾಡಿದ್ದ ಕರ್ನಾಟ ಹೈಕೋರ್ಟ್ ನ್ಯಾಯಾಧೀಶ ವಿ ಶ್ರೀಶಾನಂದ ಅವರನ್ನು ಸುಪ್ರಿಂಕೋರ್ಟ್  ತರಾಟೆಗೆ ತೆಗೆದುಕೊಂಡಿದೆ.

ಏನಿದು ವಿಚಾರ: ಪ್ರಕರಣ ವಿಚಾರಣೆ ವೇಳೆ  ಮೈಸೂರು ರಸ್ತೆ ಮೇಲ್ಸೇತುವೆ ಬಳಿ ಹೋಗಿ ನೋಡಿ, ಪ್ರತಿ ಆಟೊ ರಿಕ್ಷಾದಲ್ಲಿ 10 ಮಂದಿ ಇರುತ್ತಾರೆ. ಅಲ್ಲಿ ಯಾವುದೂ ಅನ್ವಯವಾಗುವುದಿಲ್ಲ. ಯಾಕೆಂದರೆ ಕೆಆರ್​​ ಮಾರುಕಟ್ಟೆ ಮತ್ತು ಗೋರಿಪಾಳ್ಯವರೆಗೆ ಮೈಸೂರು ರೋಡ್ ಫ್ಲೈಓವರ್ ಪಾಕಿಸ್ತಾನದಲ್ಲಿದೆ, ಭಾರತದಲ್ಲಿಲ್ಲ. ಇದು ವಾಸ್ತವ. ನೀವು ಎಂಥವನೇ ಸ್ಟ್ರಿಕ್ಟ್ ಅಧಿಕಾರಿಗಳನ್ನು ಅಲ್ಲಿಗೆ ಹಾಕಿ, ಹಿಡಿದರೆ ನೋಡ್ತೀನಿ ಎಂದು ನ್ಯಾಯಾಧೀಶರು ಹೇಳಿದ್ದರು.

ನ್ಯಾಯಾಧೀಶರು ಹೇಳಿಕೆ ನೀಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಯಿತು. ಈ ಸಂಬಂಧ ಸುಪ್ರೀಂಕೋರ್ಟ್‌ ಸ್ವಯಂಪ್ರೇರಿತವಾಗಿ ಪ್ರಕರಣ ಕೈಗೆತ್ತಿಕೊಳ್ಳುತ್ತಿದ್ದ ಹಾಗೇ ನ್ಯಾಯಾಧೀಶ ವಿ ಶ್ರೀಶಾನಂದ ಕ್ಷಮೆಯಾಚಿಸಿದರು.

ಈ ವಿಚಾರಣವನ್ನು ಕೈಗೆತ್ತಿಕೊಂಡ ಸುಪ್ರೀಂಕೋರ್ಟ್‌, ನೀವು ಭಾರತದ ಯಾವುದೇ ಭಾಗವನ್ನು 'ಪಾಕಿಸ್ತಾನ' ಅಂತ ಕರೆಯುವಂತಿಲ್ಲ. ಇದು ದೇಶದ ಪ್ರಾದೇಶಿಕ ಸಮಗ್ರತೆಗೆ ವಿರುದ್ಧವಾಗಿದೆ. ನಿಮ್ಮ ಹೇಳಿಕೆಯನ್ನು ಸಮ್ಮತಿಸುವುದಿಲ್ಲ. ನಿಮ್ಮ ಕ್ಷಮೆಯನ್ನು ಸುಪ್ರೀಂಕೋರ್ಟ್ ಪುರಸ್ಕರಿಸಿದೆ  ಎಂದು ಸುಪ್ರೀಂಕೋರ್ಟ್​ ಹೇಳಿದೆ.<>

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Mallikarjun Kharge: ನಾವೆಲ್ಲಾ ಇರ್ತೀವಿ, ಹೋಗ್ತೀವಿ ದೇಶದ ಭದ್ರತೆ ಎಲ್ಲಕ್ಕಿಂತ ಮುಖ್ಯ: ಮಲ್ಲಿಕಾರ್ಜುನ ಖರ್ಗೆ

Indian Navy: ನಾವು ರೆಡಿ ಎಂದು ಕ್ಷಿಪಿಣಿ ಹಾರಿಸಿ ಪಾಕಿಸ್ತಾನಕ್ಕೆ ಠಕ್ಕರ್ ಕೊಟ್ಟ ಭಾರತೀಯ ನೌಕಾ ಸೇನೆ

ಸಿದ್ದರಾಮಯ್ಯನವರ ಅಲ್ಪ ಸಂಖ್ಯಾತರ ಮೇಲಿನ ಪ್ರೀತಿ ಗೊತ್ತು ಬಿಡಿ: ಬಿವೈ ವಿಜಯೇಂದ್ರ

ಬಾಂಬ್ ಸುಮ್ನೇ ಇಟ್ಕೊಂಡಿಲ್ಲ, ನೀರು ಕೊಡದಿದ್ರೆ ಪರಮಾಣು ಬಾಂಬ್ ಹಾಕ್ತೀವಿ: ಭಾರತಕ್ಕೆ ಎಚ್ಚರಿಕೆ ನೀಡಿದ ಪಾಕಿಸ್ತಾನ

ಪಾಕಿಸ್ತಾನ ಜೊತೆ ಯುದ್ಧ ಬೇಡ ಅಂತ ಹೇಳಿಲ್ಲ: ವಿವಾದವಾಗುತ್ತಿದ್ದಂತೇ ಉಲ್ಟಾ ಹೊಡೆದ ಸಿಎಂ ಸಿದ್ದರಾಮಯ್ಯ

ಮುಂದಿನ ಸುದ್ದಿ
Show comments