Webdunia - Bharat's app for daily news and videos

Install App

ಪೊಲೀಸರ ಭರ್ಜರಿ ಬೇಟೆ: ಕುಖ್ಯಾತ ಅಂತಾರಾಜ್ಯ ಕಳ್ಳರು ಅಂದರ್​

Webdunia
ಬುಧವಾರ, 19 ಡಿಸೆಂಬರ್ 2018 (11:28 IST)
ಹಲವೆಡೆ ವಿವಿಧ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿರುವ ಕುಖ್ಯಾತ ಅಂತಾರಾಜ್ಯ ಕಳ್ಳರನ್ನು ಹೆಡೆಮುರಿ ಕಟ್ಟಿ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ರಾಯಚೂರು ಗ್ರಾಮೀಣ ಪೊಲೀಸರು ಕುಖ್ಯಾತ ಅಂತಾರಾಜ್ಯ ಕಳ್ಳರನ್ನು ಹೆಡೆಮುರಿ ಕಟ್ಟಿದ್ದಾರೆ. ಸೊಲ್ಲಾಪುರದ ಬಾಲು ದೇವಿದಾಸ್ (38), ಸಾಗರ್ ಭಾರತ್ ಪವಾರ್ (24) ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಂದ 64 ಗ್ರಾಂ ಬಂಗಾರದ ಆಭರಣಗಳು, 250 ಗ್ರಾಂ ಬೆಳ್ಳಿ, 1 ಲಕ್ಷದ 70 ಸಾವಿರ ರೂ. ನಗದು ವಶಪಡಿಸಿಕೊಂಡಿದ್ದಾರೆ.

ರಾಯಚೂರಿನ ಯರಮರಸ್ ಕ್ಯಾಂಪ್‍ನ ಮನೆಗಳಲ್ಲಿ ಇತ್ತೀಚೆಗೆ, ಮನ್ಸಲಾಪುರದ ರಸ್ತೆಯಲ್ಲಿನ ಫ್ಯಾಕ್ಟರಿಯಲ್ಲಿ, ಹೈದ್ರಾಬಾದ್ ರಸ್ತೆಯ ಕಾರ್ ಶೋರೂಮ್ ಹಾಗೂ ಗ್ರಾನೈಟ್ ಅಂಗಡಿಯಲ್ಲಿ ನಡೆದ ಕಳ್ಳತನ ಸೇರಿ ಒಟ್ಟು 13 ಕಳ್ಳತನ ಪ್ರಕರಣಗಳಲ್ಲಿ ಈ ಆರೋಪಿಗಳು ಭಾಗಿಯಾಗಿದ್ದಾರೆ ಎನ್ನಲಾಗಿದೆ. 

ಸರಣಿ ಕಳ್ಳತನ ನಡೆದ ಹಿನ್ನೆಲೆಯಲ್ಲಿ ಕಳ್ಳರ ಪತ್ತೆಗಾಗಿ ಎಸ್‍ಪಿ ಡಿ. ಕಿಶೋರ್​ಬಾಬು, ಎಎಸ್‍ಪಿ ಎಸ್.ಬಿ.ಪಾಟೀಲ್ ನೇತೃತ್ವದ ತನಿಖಾ ತಂಡ ರಚಿಸಲಾಗಿತ್ತು. ಗ್ರಾಮೀಣ ಠಾಣೆಯ ಸಿಪಿಐ ಹನುಮಂತರಡ್ಡೆಪ್ಪ ನೇತೃತ್ವದ ರವಿರಾಜ್, ಗೋಪಾಲ್ ವಿಜಯೇಂದ್ರ ರೆಡ್ಡಿ ಅವರ ತಂಡ ಕಳ್ಳರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.

 

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments