Select Your Language

Notifications

webdunia
webdunia
webdunia
webdunia

ಮನನೊಂದ ಕುಟುಂಬಸ್ಥರ ಆತ್ಮಹತ್ಯೆ ಪ್ರಯತ್ನ:3 ಸಾವು, ನಾಲ್ವರ ಸ್ಥಿತಿ ಗಂಭೀರ

ಮನನೊಂದ ಕುಟುಂಬಸ್ಥರ ಆತ್ಮಹತ್ಯೆ ಪ್ರಯತ್ನ:3 ಸಾವು, ನಾಲ್ವರ ಸ್ಥಿತಿ ಗಂಭೀರ
ಪುದುಚೇರಿ , ಗುರುವಾರ, 18 ಡಿಸೆಂಬರ್ 2014 (13:50 IST)
ಪುದುಚೇರಿಯ ಅರಬಿಂದೊ ಆಶ್ರಮದಿಂದ ಹೊರ ಹಾಕಿದ್ದರಿಂದ ಮನನೊಂದ ಕುಟುಂಬವೊಂದು ಬಂಗಾಳಕೊಲ್ಲಿಯ ಮೊದಲಯಾರ್ ಚಾವಡಿ ಕಡಲ ತೀರದ ಸಮುದ್ರಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದು, ಈ ಪರಿಣಾಮ ಮೂವರು ಸಾವನ್ನಪ್ಪಿದ್ದು, ನಾಲ್ವರು ಗಂಭೀರ ಸ್ಥಿತಿಯನ್ನು ಎದುರಿಸುತ್ತಿದ್ದಾರೆ. 
 
ಘಟನೆಯಲ್ಲಿ ಮೃತಪಟ್ಟವರನ್ನು ಶಾಂತಿದೇವಿ, ರಾಜಶ್ರೀ ಹಾಗೂ ಅರುಣಶ್ರೀ ಎಂದು ತಿಳಿದು ಬಂದಿದ್ದು, ಉಳಿದವರ ಸ್ಥಿತಿ ಗಂಭೀರವಾಗಿದೆ. ವಿಷಯ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಧಾವಿಸಿದ್ದು, ದೇಹಗಳನ್ನು ಮೇಲೆತ್ತುವಲ್ಲಿ ನಿರತರಾಗಿದೆ. 
 
ಈ ವೇಳೆ ಪ್ರತಿಕ್ರಿಯಿಸಿರುವ ಸಿಬ್ಬಂದಿ, ಘಟನೆಯಲ್ಲಿ ಮೂವರು ಮೇಲೆತ್ತುವ ಮುನ್ನವೇ ಸಾವನ್ನಪ್ಪಿದ್ದರು. ಇನ್ನು ನಾಲ್ವರ ಸ್ಥಿತಿ ಗಂಭೀರವಾಗಿದ್ದು, ಇಲ್ಲಿನ ಜಿಪ್ ಮರ್ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಲ್ಲದೆ  ಈ ಕುಟುಂಬ ಅಂತಾರಾಷ್ಟ್ರೀಯ ಖ್ಯಾತಿ ಗಳಿಸಿರುವ ಅರಬಿಂದೊ ಆಶ್ರಮದಲ್ಲಿ ಕಳೆದ 30 ವರ್ಷಗಳಿಂದಲೂ ಕೂಡ ನೆಲೆಸಿದ್ದರು ಎಂದಿದ್ದಾರೆ.  
 
ಕುಟುಂಬದ ಓರ್ವ ಸದಸ್ಯೆಯಾಗಿರುವ ಹೇಮಲತಾ ಎಂಬುವವರು ನಿನ್ನೆಯಷ್ಟೇ ನಮ್ಮ ಕುಟುಂಬದಲ್ಲಿ ಕೇವಲ ಹೆಣ್ಣು ಮಕ್ಕಳು ಮಾತ್ರವೇ ಇದ್ದು, ಆಶ್ರಮದಲ್ಲಿ ನಮ್ಮ ಮೇಲೆ ಲೈಂಗಿಕ ದೌರ್ಜನ್ಯ ನಡೆಯುತ್ತಿದೆ ಎಂದು ಆರೋಪಿಸಿ ಆಶ್ರಮದ 5ನೇ ಮಹಡಿ ಮೇಲಿನಿಂದ ಬಿದ್ದು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಮಾಧ್ಯಮಗಳ ಗಮನ ಸೆಳೆದಿದ್ದರು. ಆಗ ಆಕೆಯನ್ನು ಕೆಳಗಿಳಿಸಿ ರಕ್ಷಿಸುವಲ್ಲಿ ಇಲ್ಲಿನ ಪೊಲೀಸರು ಸಫಲರಾಗಿದ್ದರು. ಆದರೆ, ನಿನ್ನೆಯ ಘಟನೆಯಿಂದ ಬೇಸರ ಮಾಡಿಕೊಂಡಿದ್ದ ಕುಟುಂಬಸ್ಥರು ಇಂದು ಸಮುದ್ರಕ್ಕೆ ಹಾರುವ ಮೂಲಕ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದಾರೆ ಎನ್ನಲಾಗಿದೆ. 
 
ಇನ್ನು ಲೈಂಗಿಕ ಆರೋಪ ಹೊರಿಸಿ ಆಶ್ರಮಕ್ಕೆ ಮಸಿ ಬಳಿಯಲೆತ್ನಿಸುತ್ತಿದ್ದಾರೆ ಎಂಬ ವಿಷಯದಿಂದ ಕುಪಿತಗೊಂಡ ಆಶ್ರಮದ ಆಡಳಿತ ಸಿಬ್ಬಂದಿ ಕಳೆದ ಮೂರು ದಿನಗಳ ಹಿಂದೆ ಕುಟುಂಬವನ್ನು ಹೊರ ಹಾಕಿತ್ತು ಎಂದು ತಿಳಿದು ಬಂದಿದೆ. 

Share this Story:

Follow Webdunia kannada