Select Your Language

Notifications

webdunia
webdunia
webdunia
webdunia

ವಿದ್ಯಾರ್ಥಿನಿ ಶೂಟೌಟ್ ಪ್ರಕರಣ: 2 ದಿನದಲ್ಲಿ ತನಿಖೆ ಪೂರ್ಣಗೊಳ್ಳಲಿ ಎಂದ ಜೆಡಿಎಸ್ ಮುಖಂಡ

ವಿದ್ಯಾರ್ಥಿನಿ ಶೂಟೌಟ್ ಪ್ರಕರಣ: 2 ದಿನದಲ್ಲಿ ತನಿಖೆ ಪೂರ್ಣಗೊಳ್ಳಲಿ ಎಂದ ಜೆಡಿಎಸ್ ಮುಖಂಡ
ತುಮಕೂರು , ಗುರುವಾರ, 2 ಏಪ್ರಿಲ್ 2015 (13:45 IST)
ಕಾಲೇಜಿನ ಅಟೆಂಡರ್ ಗುಂಡಿಗೆ ಪಾವಗಡದ ವಿದ್ಯಾರ್ಥಿನಿಯೋರ್ವಳು ಬಲಿಯಾಗಿರುವ ಹಿನ್ನೆಲೆಯಲ್ಲಿ ವಿಧಾನ ಪರಿಷತ್ ಜೆಡಿಎಸ್ ಸದಸ್ಯ ಟಿ.ಎ.ಶರವಣ ಪ್ರತಿಕ್ರಿಯಿಸಿದ್ದು, ಸರ್ಕಾರವು ಪ್ರಕರಣದ ತನಿಖೆಯನ್ನು ಕೇವಲ ಎರಡು ದಿನಗಳೊಳಗೆ ಮುಗಿಸಿ ಸತ್ಯಾಸತ್ಯತೆಯನ್ನು ಹೊರ ಹಾಕಲಿ ಎಂದು ಆಗ್ರಹಿಸಿದ್ದಾರೆ. 
 
ವಿದ್ಯಾರ್ಥಿನಿಯ ಹುಟ್ಟೂರು ಪಾವಗಡದಲ್ಲಿ ಮೃತ ವಿದ್ಯಾರ್ಥಿನಿಯ ಅಂತಿ ದರ್ಶನ ಪಡೆದ ಬಳಿಕ ಮಾತನಾಡಿದ ಅವರು, ಸರ್ಕಾರ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ರೀತಿಯ ನಿಸ್ಪಕ್ಷಪಾತವಾಗಿ ತನಿಖೆ ನಡೆಸಲಿ. ಆ ಮೂಲಕ ಮೃತ ವಿದ್ಯಾರ್ಥಿನಿ ಕುಟುಂಬಕ್ಕೆ ಸರ್ಕಾರ ನ್ಯಾಯ ಒದಗಿಸಬೇಕಿದೆ. ಆದ್ದರಿಂದ ಪ್ರಕರಣವನ್ನು ಕೇವಲ ಎರಡೇ ದಿನದಲ್ಲಿ ತ್ವರಿತ ತನಿಖೆ ನಡೆಸಿ ಸತ್ಯಾಸತ್ಯತೆಯನ್ನು ಹೊರ ಹಾಕಲಿ ಎಂದು ಆಗ್ರಹಿಸಿದ ಅವರು, ಮೃತಳ ಕುಟುಂಬಕ್ಕೆ ನನ್ನ ಪರವಾದ ವೈಯಕ್ತಿಕ ಬೆಂಬಲವಿದೆ ಎಂದರು. 
 
ಈ ಸಂಬಂಧ ಪ್ರತಿಕ್ರಿಯಿಸಿರುವ ಮಾಜಿ ಸಚಿವ ವೆಂಕಟರಮಣಪ್ಪ ಅವರೂ ಕೂಡ ಪ್ರತಿಕ್ರಿಯಿಸಿದ್ದು, ಪ್ರಕರಣದ ಸತ್ಯಾಸತ್ಯತೆಯನ್ನು ನಿಸ್ಪಕ್ಷಪಾತ ತನಿಖೆ ಮೂಲಕ ಹೊರ ತರಲಿ, ಅಲ್ಲದೆ ಕಾಲೇಜನ್ನು ಈ ಕೂಡಲೇ ಮುಚ್ಚಿಸಲಿ ಎಂದು ತಮ್ಮ ಆಕ್ರೋಶ ವ್ಯಕ್ತಪಡಿಸಿದರು. 
 
ಪ್ರಕರಣ ಹಿನ್ನೆಲೆಯಲ್ಲಿ ವಿದ್ಯಾರ್ಥಿನಿಯ ತವರೂರು ಪಾವಗಡ ಪಟ್ಟಣದಲ್ಲಿ ಅಘೋಷಣಾ ಬಂದ್ ನಡೆಸಲಾಗುತ್ತಿದ್ದು, ಪ್ರತಿಭಟನೆ ನಡೆಸುತ್ತಿದ್ದಾರೆ. ಅಲ್ಲದೆ ವಿದ್ಯಾರ್ಥಿನಿ ಕುಟುಂಬಕ್ಕೆ ಸರ್ಕಾರ ಸೂಕ್ತ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸುತ್ತಿದ್ದಾರೆ. 

Share this Story:

Follow Webdunia kannada