Webdunia - Bharat's app for daily news and videos

Install App

ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಫ್ರೀ ಟಿಕೆಟ್ ನದ್ದೇ ಹಾರ ಮಾಡಿ ಅರ್ಪಿಸಿದ ವಿದ್ಯಾರ್ಥಿನಿ

Krishnaveni K
ಮಂಗಳವಾರ, 23 ಏಪ್ರಿಲ್ 2024 (09:46 IST)
ಅರಸೀಕೆರೆ: ಸಿಎಂ ಸಿದ್ದರಾಮಯ್ಯ ಸರ್ಕಾರದ ಮಹಿಳೆಯರಿಗೆ ಉಚಿತ ಬಸ್ ಟಿಕೆಟ್ ಘೋಷಣೆ ಕೆಲವರಿಗೆ ಅನುಕೂಲವಾದರೆ ಮತ್ತೆ ಕೆಲವರು ಅದನ್ನು ಟೀಕಿಸಿದ್ದೂ ಇದೆ. ಇದೀಗ ವಿದ್ಯಾರ್ಥಿನಿಯೊಬ್ಬರು ಸಿದ್ದರಾಮಯ್ಯಗೆ ವಿಶಿಷ್ಟವಾಗಿ ಈ ಕೊಡುಗೆ ನೀಡಿದ್ದಕ್ಕೆ ಧನ್ಯವಾದ ಸಲ್ಲಿಸಿದ್ದಾರೆ.


ಅರಸೀಕೆರೆಯ ಮೊದಲ ವರ್ಷದ ಕಾನೂನು ವಿದ್ಯಾರ್ಥಿನಿಯೊಬ್ಬರು ತಾವು ಉಚಿತವಾಗಿ ಪ್ರಯಾಣಿಸಿದ ಫ್ರೀ ಬಸ್ ಟಿಕೆಟ್ ಗಳಿಂದ ಮಾಡಿದ್ದ ಹಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಹಾಕಿದರು. 
 
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶ್ರೇಯಸ್ ಪರ ಪ್ರಚಾರಕ್ಕೆ ಆಗಮಿಸಿದ ಸಂದರ್ಭದಲ್ಲಿ ವಿದ್ಯಾರ್ಥಿನಿ ಎಂ.ಎ.ಜಯಶ್ರೀ ಅವರು ಫ್ರೀ ಟಿಕೆಟ್ ಹಾರವನ್ನು ಅರ್ಪಿಸಿದರು. 
 
ಮುಖ್ಯಮಂತ್ರಿಗಳಿಗೆ ಹಾರ ಅರ್ಪಿಸುತ್ತಾ ಜಯಶ್ರೀ ಅವರು, "ನೀವು ಮುಖ್ಯಮಂತ್ರಿಯಾಗಿ ಕಾಂಗ್ರೆಸ್ ಸರ್ಕಾರ ಕೊಟ್ಟ ಉಚಿತ ಪ್ರಯಾಣದ ಫಲವಾಗಿ ನಾನು ಕಾನೂನು ವಿದ್ಯಾಭ್ಯಾಸವನ್ನು ನಿರಾತಂಕವಾಗಿ ಮಾಡಲು ಸಾಧ್ಯವಾಗಿದೆ. ಹೀಗಾಗಿ ಎಲ್ಲಾ ಫ್ರೀ ಟಿಕೆಟ್ ಗಳನ್ನು ಜೋಡಿಸಿಟ್ಟುಕೊಂಡು ಹಾರ ಮಾಡಿದ್ದೆ. ನಿಮಗೆ ಅರ್ಪಿಸುವುದಕ್ಕೆ ತಿಂಗಳುಗಳಿಂದ ಅವಕಾಶಕ್ಕಾಗಿ ಕಾಯುತ್ತಿದ್ದೆ. ಇವತ್ತು ಅರಸೀಕೆರೆಗೆ ಬರ್ತಾ ಇದ್ದೀರಿ ಅಂತ ಗೊತ್ತಾಯ್ತು. ಒಂದೇ ಉಸಿರಲ್ಲಿ ಹಾರ ಹಿಡ್ಕೊಂಡು ಓಡಿ ಬಂದಿದ್ದೇನೆ" ಎನ್ನುತ್ತಾ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಧನ್ಯತೆ ಅರ್ಪಿಸಿ ಆಶೀರ್ವಾದ ಪಡೆದಕೊಂಡರು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Tiger Attack: ಕೇರಳದಂತೆ ಚಾಮರಾಜನಗರದಲ್ಲೂ ನಡೆಯಿತು ದುರ್ಘಟನೆ

Rajastan: ಜೈಪುರದಿಂದ ಪ್ರವಾಸಕ್ಕೆ ಬಂದಿದ್ದ ಎಂಟು ಯುವಕರು ಬನಾಸ್‌ ನದಿಯಲ್ಲಿ ಮುಳುಗಿ ದಾರುಣ ಸಾವು

Cabinet reshuffle: ಸಿದ್ದರಾಮಯ್ಯ ಸಂಪುಟದಲ್ಲಿ ಇಷ್ಟು ಸಚಿವರಿಗೆ ಕೊಕ್, ಲಿಸ್ಟ್ ನಲ್ಲಿ ಯಾರೆಲ್ಲಾ ಇದ್ದಾರೆ

Indore Raja Raguvamshi Case: ಸೊಸೆಯ ಬಗ್ಗೆ ಇಂಚಿಂಚು ಮಾಹಿತಿ ಬಿಚ್ಚಿಟ್ಟ ರಾಜ ರಘುವಂಶಿ ತಾಯಿ

Coastal Karnataka: ಕರಾವಳಿಯ ಮಳೆಗಾಲದ ಅತಿಥಿ ಕಲ್ಲಣಬೆಗೆ ಭಾರೀ ಡಿಮ್ಯಾಂಡ್‌

ಮುಂದಿನ ಸುದ್ದಿ
Show comments