Select Your Language

Notifications

webdunia
webdunia
webdunia
webdunia

ಶಾಲಾ ಕೊಠಡಿಯಲ್ಲಿ 12 ವರ್ಷದ ಬಾಲಕ ಆತ್ಮಹತ್ಯೆ

ಶಾಲಾ ಕೊಠಡಿಯಲ್ಲಿ 12 ವರ್ಷದ ಬಾಲಕ ಆತ್ಮಹತ್ಯೆ
ವಿಜಯಪುರ , ಭಾನುವಾರ, 22 ಜನವರಿ 2017 (10:34 IST)
13 ವರ್ಷದ ಬಾಲಕನೋರ್ವ ಶಾಲಾ ಕೊಠಡಿಯಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಹೇಯ ಘಟನೆ ಇಂಡಿ ತಾಲ್ಲೂಕಿನ ತಾಂಬಾ ಗ್ರಾಮದಲ್ಲಿ ನಡೆದಿದೆ. 

ಮೃತನನ್ನು ಬಾಗೇಶ್ ನಿಂಗಪ್ಪ ಹೂಗಾರ್ ಎಂದು ಗುರುತಿಸಲಾಗಿದ್ದು, ಮಹಾಲಕ್ಷ್ಮಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ಮಧ್ಯಾಹ್ನ ಈ ಹೃದಯವಿದ್ರಾವಕ ಘಟನೆ ನಡೆದಿದೆ. 
 
ಪೋಷಕರು ಬುದ್ಧಿಮಾತು ಹೇಳಿದ್ದಕ್ಕೆ ನೊಂದು ಈತ ಸಾವಿಗೆ ಶರಣಾಗಿದ್ದಾನೆ ಎಂದು ಹೇಳಲಾಗುತ್ತಿದೆ.
 
ಇಂಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಮೃತದೇಹವನ್ನು ಮರಣೋತ್ತರ ಪರೀಕ್ಷೆಗಳೊಳಪಡಿಸಲಾಗಿದೆ. 
 
ಸಾವೆಂದರೇನು ಎಂಬುದರ ಕಲ್ಪನೆ ಕೂಡ ಇರದ ಮಕ್ಕಳು ಆತ್ಮಹತ್ಯೆಗೆ ಶರಣಾಗುತ್ತಿರುವ ಘಟನೆಗಳು ಇತ್ತೀಚಿಗೆ ಪದೇ ಪದೇ ವರದಿಯಾಗುತ್ತಿರುವುದು ಖೇದನೀಯ ವಿಚಾರ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಹೆಣ್ಣಾಗಲಿ, ಗಂಡಾಗಲಿ ನಿಗದಿ ಮಾಡಿರುವ ವಯಸ್ಸಿನಲ್ಲೇ ಮದುವೆ