ರಾಪಿಡೋ ಕಡಿವಾಣ ಹಾಕುವಂತೆ ಪ್ರತಿಭಟನೆ

Webdunia
ಗುರುವಾರ, 17 ಫೆಬ್ರವರಿ 2022 (19:24 IST)
ರ‍್ಯಾಪಿಡೋ, ಪೋರ್ಟರ್‌ ಸೇವೆಯಿಂದ ಆಟೋ ಚಾಲಕರಿಗೆ ಆಗುತ್ತಿರುವ ತೊಂದರೆಯನ್ನು ಖಂಡಿಸಿ, ಬೆಂಗಳೂರಿನ ಮೌರ್ಯ ವೃತ್ತದಲ್ಲಿ, ಆಮ್‌ ಆದ್ಮಿ ಪಾರ್ಟಿಯ ಆಟೋ ಚಾಲಕರ ಘಟಕದ ವತಿಯಿಂದ ಬೃಹತ್‌ ಪ್ರತಿಭಟನೆ ನಡೆಯಿತು. ಪ್ರತಿಭಟನೆಯಲ್ಲಿ ಮಾತನಾಡಿದ ಎಎಪಿ ಆಟೋ ಚಾಲಕರ ಘಟಕದ ರಾಜ್ಯ ಅಧ್ಯಕ್ಷರಾದ ಆಯೂಬ್‌ ಖಾನ್, ಲಾಕ್‌ಡೌನ್‌ ಹಾಗೂ ಕರ್ಫ್ಯೂಗಳಿಂದ ಆಟೋ ಚಾಲಕರು ಕಳೆದ ಎರಡು ವರ್ಷಗಳಿಂದ ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ.
ಕುಟುಂಬ ನಿರ್ವಹಣೆ, ಮಕ್ಕಳ ವಿದ್ಯಾಭ್ಯಾಸಕ್ಕೆ ಪರದಾಡುವಂತಾಗಿದೆ.ಈಗ ರ‍್ಯಾಪಿಡೋ ಬೈಕ್‌ಗಳು ಕಾನೂನುಬಾಹಿರವಾಗಿ ಕಾರ್ಯ ನಿರ್ವಹಿಸುತ್ತಿರುವುದು ಆಟೋ ಚಾಲಕರಿಗೆ ಶಾಪವಾಗಿದೆ. ಸರ್ಕಾರದಿಂದ ಪರವಾನಗಿ ಪಡೆಯದೇ ಪ್ರಯಾಣಿಕರನ್ನು ಕರೆದೊಯ್ಯುತ್ತಿರುವ ರ‍್ಯಾಪಿಡೋ ಸೇವೆಗೆ ಕಡಿವಾಣ ಹಾಕಬೇಕು. ಗೂಡ್ಸ್‌ ಆಟೋಗಳಿಗೆ ತೊಂದರೆ ನೀಡುತ್ತಿರುವ ಪೋರ್ಟರ್‌ ಕಂಪನಿಯ ಸೇವೆಗೆ ನಿಯಂತ್ರಣ ಹೇರಬೇಕು ಎಂದು ಆಗ್ರಹಿಸಿದರು. ಪ್ರತಿಭಟನೆಯಲ್ಲಿ ಕರ್ನಾಟಕ ಆಟೋ ಮತ್ತು ಟ್ಯಾಕ್ಸಿ ಚಾಲಕರ ಸಂಘದ ಹರೀಶ್, ದಲಿತ ಸಂಘರ್ಷ ಸಮಿತಿಯ ಪದಾಧಿಕಾರಿಗಳು ಹಾಗೂ ನೂರಾರು ಆಟೋ ಚಾಲಕರು ಭಾಗವಹಿಸಿದ್ದರು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ವಲಸಿಗರಿಗೆ ಮನೆ ಕಟ್ಟಿಕೊಡುತ್ತೀರಿ ಎಂದರೆ ನಮಗೂ ಕೊಡಿ: ಡಿಕೆ ಶಿವಕುಮಾರ್ ಗೆ ಕನ್ನಡಿಗರ ಆಗ್ರಹ

ಕೋಗಿಲು ಲೇಔಟ್ ನಿವಾಸಿಗಳಿಗೆ ಒಂದೇ ದಿನದಲ್ಲಿ ಮನೆ, ಕೊಡಗು ಸಂತ್ರಸ್ತರಿಗೆ ವರ್ಷ ಕಳೆದರೂ ಮನೆಯಿಲ್ಲ

ಬಾಂಗ್ಲಾದೇಶದ ಮೊದಲ ಮಹಿಳಾ ಪ್ರಧಾನಿ ಖಲೀದಾ ಜಿಯಾ ನಿಧನ

ಹೊಸ ವರ್ಷದ ಪಾರ್ಟಿ ಮಾಡುವವರಿಗೆ ನಮ್ಮ ಮೆಟ್ರೋ ಗುಡ್ ನ್ಯೂಸ್

2026ರ ಹೊಸ ವರ್ಷದಂದು ಸಂಭ್ರಮಕ್ಕೆ ನಮ್ಮ ಮೆಟ್ರೋ ಸೇವೆ ವಿಸ್ತರಣೆ

ಮುಂದಿನ ಸುದ್ದಿ
Show comments