Select Your Language

Notifications

webdunia
webdunia
webdunia
webdunia

ಮಲಮಗಳ ಮೇಲೆ ಮಲತಂದೆಯ ನಿರಂತರ ಅತ್ಯಾಚಾರ

ಮಲಮಗಳ ಮೇಲೆ ಮಲತಂದೆಯ ನಿರಂತರ ಅತ್ಯಾಚಾರ
ಕೊಪ್ಪಳ , ಬುಧವಾರ, 23 ಜುಲೈ 2014 (15:33 IST)
ಮಲತಂದೆಯಿಂದಲೇ ಅಪ್ರಾಪ್ತ ಮಗಳ ಮೇಲೆ ಅತ್ಯಾಚಾರ ಘಟನೆ ಕೊಪ್ಪಳ ಭಾಗ್ಯನಗರದಲ್ಲಿ ನಡೆದಿದೆ. ಕಳೆದ 2 ವರ್ಷಗಳಿಂದ 17 ವರ್ಷದ ಮಲಮಗಳ ಮೇಲೆ ನಿರಂತರವಾಗಿ ಅತ್ಯಾಚಾರ ಮಾಡುತ್ತಿದ್ದ ರಾಜಪ್ಪನನ್ನು  ಕೊಪ್ಪಳ ಪೊಲೀಸರು ಬಂಧಿಸಿದ್ದಾರೆ.

ಅಪ್ರಾಪ್ತ ಬಾಲಕಿ ತಂದೆಯ ಕಾಮುಕತನದಿಂದ ಪಾರಾಗಲು ಮನೆಯಿಂದ ತಪ್ಪಿಸಿಕೊಳ್ಳಲು ಬಾಲಮಂದಿರಕ್ಕೆ ಬಂದು ಸೇರಿದ್ದಳು. ಕಳೆದ ನಾಲ್ಕು ತಿಂಗಳ ಹಿಂದೆ ಮಲಮಗಳ ಮೇಲೆ ದೌರ್ಜನ್ಯ ನಡೆಸಿದ ಕಾರಣ ಸ್ಥಳೀಯರು ಅವನನ್ನು ಪೊಲೀಸರಿಗೆ ಒಪ್ಪಿಸಿದ್ದರು.

ಜೈಲಿನಿಂದ ಬಿಡುಗಡೆಯಾಗಿ ಬಂದ ಮೇಲೆಯೂ ತನ್ನ ಹಳೆಯ ಚಾಳಿಯನ್ನು ಮತ್ತೆ ಮುಂದುವರಿಸಿದ. ಇದನ್ನು ಪ್ರಶ್ನಿಸಿದ ಬಾಲಕಿ ತಾಯಿ ಮೇಲೆ  ದೈಹಿಕ ಹಲ್ಲೆ ಮಾಡುತ್ತಿದ್ದ. ನೊಂದ ಬಾಲಕಿ ಪೊಲೀಸ್ ಠಾಣೆಗೆ ದೂರು ನೀಡಿದಾಗ ಈ ಘಟನೆ ಬೆಳಕಿಗೆ ಬಂದಿದೆ. 

Share this Story:

Follow Webdunia kannada