Webdunia - Bharat's app for daily news and videos

Install App

ಕಂಬಳ ’ಕ್ರೀಡೆ’ ಅಂತ ನಿರೂಪಿಸಲು ಹೊರಟ ರಾಜ್ಯ ಸರ್ಕಾರ

Webdunia
ಬುಧವಾರ, 30 ನವೆಂಬರ್ 2016 (09:34 IST)
ಸುಮಾರು 800 ವರ್ಷಗಳ ಇತಿಹಾಸ ಹೊಂದಿರುವ ಕಂಬಳ ಕ್ರೀಡೆಯು ಕರಾವಳಿ ಕರ್ನಾಟಕದ ಅವಿಭಾಜ್ಯ ಅಂಗವಾಗಿದೆ. ಇದರ ಹಿಂದ ತುಳುನಾಡಿನ ಹಲವು ಆರಾಧನಾತ್ಮಕ ಮತ್ತು ಆಚರಣಾತ್ಮಕ ನಂಬಿಕೆಗಳಿವೆ. ಕೋಣಗಳ ದೈಹಿಕ ರಚನೆ ಕಂಬಳದ ಓಟಕ್ಕೆ ಪೂರಕವಾಗಿಲ್ಲ ಎಂದು ಕೆಲವು ಪ್ರಾಣಿ ದಯಾ ಸಂಘದವರು ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದಾರೆ. ಪಶುವೈದ್ಯಕೀಯ ತಜ್ಞರು ಹಾಗೂ ಕಾನೂನು ತಜ್ಞರೊಂದಿಗೆ ಸಮಾಲೋಚಿಸಿ ನ್ಯಾಯಾಲಯದಲ್ಲಿ ಸಮರ್ಥ ವಾದ ಮಂಡಿಸಲಾಗುವುದು ಎಂದು ಸಭಾ ನಾಯಕ, ಗೃಹಸಚಿವ ಜಿ. ಪರಮೇಶ್ವರ ವಿಧಾನ ಪರಿಷತ್‍ನಲ್ಲಿ ತಿಳಿಸಿದರು.
 
ಶಾಸಕ ಐವಾನ್ ಡಿಸೋಜಾ ಅವರು ಶೂನ್ಯ ವೇಳೆಯಲ್ಲಿ ಪ್ರಸ್ತಾಪಿಸಿದ ವಿಷಯಕ್ಕೆ ಉತ್ತರಿಸಿದ ಸಚಿವರು ಪೀಪಲ್ ಫಾರ್ ಎಥಿಕಲ್ ಟ್ರೀಟ್‍ಮೆಂಟ್ ಆಫ್ ಎನಿಮಲ್ಸ್ ಎಂಬ ಸಂಸ್ಥೆಯು ಕರ್ನಾಟಕ ಉಚ್ಛ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದೆ. ನ್ಯಾಯಾಲಯವು ಕಳೆದ ನವೆಂಬರ್ 22 ರಂದು ಕಂಬಳ ಕ್ರೀಡೆ ಆಯೋಜನೆಗೆ ತಡೆಯಾಜ್ಞೆ ನೀಡಿದೆ. ಈ ವಿಷಯದ ಕುರಿತು ಕರಾವಳಿ ಭಾಗದ ಜನರ ಭಾವನೆಗಳನ್ನು ಗಮನದಲ್ಲಿಟ್ಟುಕೊಂಡು ನ್ಯಾಯಾಲಯದಲ್ಲಿ ಸಮರ್ಥವಾಗಿ ವಾದ ಮಂಡಿಸಲು ಸರ್ಕಾರ ಕ್ರಮಕೈಗೊಂಡಿದೆ ಎಂದು ತಿಳಿಸಿದರು.
 
ಕಪ್ಪತ್ತಗುಡ್ಡ ಸಂರಕ್ಷಿತ ಅರಣ್ಯಕ್ಕೆ ಜನಾಭಿಪ್ರಾಯ ಸಂಗ್ರಹ: ಗದಗ ಜಿಲ್ಲೆಯ ಕಪ್ಪತ್ತಗುಡ್ಡ ಪ್ರದೇಶವನ್ನು ಸಂರಕ್ಷಿತ ಅರಣ್ಯ ಪ್ರದೇಶವೆಂದು ಘೋಷಿಸಲು ಸಾರ್ವಜನಿಕ ವಿಚಾರಣೆ ಮತ್ತು ಅಭಿಪ್ರಾಯ ಸಂಗ್ರಹಣೆ ಬಳಿಕ ನಿರ್ಣಯ ಕೈಗೊಳ್ಳಲಾಗುವುದು ಎಂದು ಅರಣ್ಯ, ವನ್ಯಜೀವಿ ಪರಿಸ್ಥಿತಿ ಮತ್ತು ಪರಿಸರ ಸಚಿವ ಬಿ. ರಮಾನಾಥ ರೈ ಹೇಳಿದರು. 
 
ವಿಧಾನ ಪರಿಷತ್ತಿನಲ್ಲಿ ಶಾಸಕ ಬಸವರಾಜ ಹೊರಟ್ಟಿ ಅವರು ಶೂನ್ಯ ವೇಳೆಯಲ್ಲಿ ಪ್ರಸ್ತಾಪಿಸಿದ ಸೂಚನೆಗೆ ಉತ್ತರಿಸುತ್ತ ಕಪ್ಪತ್ತಗುಡ್ಡವನ್ನು ವನ್ಯಜೀವಿ ಧಾಮ ಎಂದು ಘೋಷಿಸಲು 2011-12 ರಲ್ಲಿ ನಡೆಸಿದ ಸಾರ್ವಜನಿಕ ವಿಚಾರಣೆ ಪೂರಕವಾಗಿರಲಿಲ್ಲ ಎಂಬ ಅಭಿಪ್ರಾಯವಿತ್ತು. ಇದನ್ನು ಸಂರಕ್ಷಿತ ಅರಣ್ಯ ಪ್ರದೇಶ ಎಂದು ಘೋಷಿಸಲು ಮತ್ತೊಮ್ಮೆ ಜನಾಭಿಪ್ರಾಯ ವಿಚಾರಣೆ ನಡೆಸಲಾಗುವುದು ಎಂದರು. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Gold price: ಇಂದಿನ ಚಿನ್ನ,ಬೆಳ್ಳಿ ದರ ವಿವರ ಇಲ್ಲಿದೆ

ಹೃದಯಾಘಾತ ಇಫೆಕ್ಟ್: ಜಯದೇವ ಆಸ್ಪತ್ರೆಯಲ್ಲಿ ರೋಗಿಗಳ ದಂಡು

ನಮ್ಮ ಜಿಹಾದಿಗಳ ಮುಂದೆ ಎದುರಾಳಿಯ ಕ್ಷಿಪಣಿಗಳು ಲೆಕ್ಕಕ್ಕೇ ಇಲ್ಲ: ಉಗ್ರ ಮಸೂದ್ ಅಜರ್

ರಾಷ್ಟ್ರಪತಿಗೆ ಮುರ್ಮಾಜಿ, ಮಾಜಿ ರಾಷ್ಟ್ರಪತಿಗೆ ಕೊವಿಡ್ ಜೀ ಎಂದ ಮಲ್ಲಿಕಾರ್ಜುನ ಖರ್ಗೆ

ಜಿಮ್ ಮಾಡುವವರು ಡಾ ಸಿಎನ್ ಮಂಜುನಾಥ್ ಅವರ ಈ ಸಲಹೆಯನ್ನು ತಪ್ಪದೇ ಗಮನಿಸಿ

ಮುಂದಿನ ಸುದ್ದಿ
Show comments