Select Your Language

Notifications

webdunia
webdunia
webdunia
webdunia

ಎಸ್‌ಎಸ್‌ಎಲ್‌ಸಿ ಫಲಿತಾಂಶ: ಮೇ 15 ರ ಬದಲು 12 ಕ್ಕೆ

ಎಸ್‌ಎಸ್‌ಎಲ್‌ಸಿ ಫಲಿತಾಂಶ: ಮೇ 15 ರ ಬದಲು 12 ಕ್ಕೆ
ಬೆಂಗಳೂರು , ಶನಿವಾರ, 10 ಮೇ 2014 (15:34 IST)
ಈ ಹಿಂದೆ  ಮೇ 15ಕ್ಕೆ ಎಸ್‌ಎಸ್‌ಎಲ್‌ಸಿ ರಿಸಲ್ಟ್‌ನ್ನು ಪ್ರಕಟಿಸಲಾಗುತ್ತದೆ ಎಂದಿದ್ದ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಹಠಾತ್ ಫಲಿತಾಂಶದ ದಿನವನ್ನು ಬದಲಾಯಿಸಿದ್ದು, 3 ದಿನ ಮುಂಚಿತವಾಗಿ ಅಂದರೆ ಮೇ 12 ಸೋಮವಾರದಂದು ರಿಸಲ್ಟ್ ಪ್ರಕಟವಾಗಲಿದೆ ಎಂದು ಮಾಹಿತಿ ನೀಡಿದೆ. 
 
ತನ್ನ ಈ ನಿರ್ಧಾರಕ್ಕೆ  ಕಾರಣವನ್ನು ಶಿಕ್ಷಣ ಇಲಾಖೆ ಸ್ಪಷ್ಟ ಪಡಿಸಿಲ್ಲ. ಆದರೆ ಮೇ 16 ಕ್ಕೆ ಮತಗಣನೆ ಇರುವುದರಿಂದ ಮಾಧ್ಯಮಗಳಲ್ಲಿ ಮಕ್ಕಳ ಸಾಧನೆಯನ್ನು ಪ್ರಕಟಿಸಲು ಮತ್ತು ಪ್ರಸಾರ ಮಾಡಲು ಹೆಚ್ಚಿನ ಅವಕಾಶ ಸಿಗದೇ ಇರಬಹುದು ಎನ್ನುವ ಕಾರಣಕ್ಕೆ ಈ ನಿರ್ಧಾರವನ್ನು ತಳೆಯಲಾಗಿದೆ ಎನ್ನಲಾಗುತ್ತಿದೆ. 
 
ಇಲಾಖೆಯ ಅಧಿಕೃತ ವೆಬ್ಸೈಟ್ http://karresults.nic.in/ ನಲ್ಲಿ ಸೋಮವಾರ ಫಲಿತಾಂಶವನ್ನು ಪಡೆಯಬಹುದು.
 
ರಾಜ್ಯದ ಎಸ್ಸೆಸ್ಸೆಲ್ಸಿ ಪರೀಕ್ಷೆ ಮಾರ್ಚ್ 28, 2014 ರಿಂದ ಏಪ್ರಿಲ್ 9 ರವರೆಗೆ ನಡೆದಿತ್ತು.
 
ಪಿಯುಸಿ 2 ಫಲಿತಾಂಶ ಮೇ 8 ರಂದು ಘೋಷಿಸಲ್ಪಟ್ಟಿದ್ದು ಹಿಂದಿನ ವರ್ಷಕ್ಕಿಂತ ಪ್ರತಿಶತ 10 ರಷ್ಟು ಉತ್ತಮ ರಿಸಲ್ಟ್(60.47) ದಾಖಲಾಗಿದೆ. 

Share this Story:

Follow Webdunia kannada