Select Your Language

Notifications

webdunia
webdunia
webdunia
webdunia

ಸಿದ್ದರಾಮಯ್ಯ ಸರ್ಕಾರದ ವಿರುದ್ದ ಸ್ಪೀಕರ್ ಕಾಗೋಡು ಗರಂ

ಸಿದ್ದರಾಮಯ್ಯ ಸರ್ಕಾರದ ವಿರುದ್ದ ಸ್ಪೀಕರ್ ಕಾಗೋಡು ಗರಂ
ಬೆಂಗಳೂರು , ಮಂಗಳವಾರ, 19 ಆಗಸ್ಟ್ 2014 (18:09 IST)
ವಿಧಾನಸಭೆಯಲ್ಲಿ ಹಲವು ಬಾರಿ ಸರ್ಕಾರದ ಲೋಪದೋಷಗಳ ಬಗ್ಗೆ ಗಮನಸೆಳೆದಿದ್ದ ಸ್ಪೀಕರ್ ಕಾಗೋಡು ತಿಮ್ಮಪ್ಪ ಇಂದು ನೇರವಾಗಿ ಸರ್ಕಾರದ ಕಾರ್ಯವೈಖರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. "ಜನರ ಸಮಸ್ಯೆಗಳಿಗೆ ಆಡಳಿತ ಯಂತ್ರ ಸ್ಪಂದಿಸುತ್ತಿಲ್ಲ. ಹಿಂದಿನ ಸರ್ಕಾರಕ್ಕೂ ಈಗಿನ ಸರ್ಕಾರಕ್ಕೂ ವ್ಯತ್ಯಾಸವಿಲ್ಲ. ರಾಜ್ಯ ಸರ್ಕಾರ ನಿಧಾನಗತಿಯಲ್ಲಿ ಸಾಗಿದೆ.

ರಾಜ್ಯಸರ್ಕಾರದಲ್ಲಿ ಸರಿಯಾಗಿ ಪಾರದರ್ಶಕತೆ ಕಂಡುಬರುತ್ತಿಲ್ಲ" ಎಂದು ಸ್ಪೀಕರ್ ಕಾಗೋಡು ವಿಧಾನಸೌಧದಲ್ಲಿ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಗರಂ ಆಗಿರುವ ಪ್ರಸಂಗ ಇಂದು ನಡೆಯಿತು.  6 ತಿಂಗಳ ಹಿಂದೆ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದೆ. ಅವರಿಂದ ಸ್ವೀಕೃತಿ ಪತ್ರ ಮಾತ್ರ ಬಂದಿದೆ, ಆದರೆ ಉತ್ತರ ಬಂದಿಲ್ಲ ಎಂದು ಕಾಗೋಡು ಹೇಳಿದರು.  ಸಿದ್ದರಾಮಯ್ಯ ಪರಮಾಧಿಕಾರ ಚಲಾಯಿಸಬೇಕು ಎಂದು ಅವರು ಹಿತವಚನ ಹೇಳಿದರು.

 ಶಾಸಕರ ವಿದೇಶ ಪ್ರವಾಸ ವಿಚಾರವಾಗಿ ಮಾತನಾಡಿದ ಅವರು ಸೂಕ್ತ ಸಲಹೆಗಳು ಬಂದಿವೆ. ಇನ್ಮುಂದೆ ನಿರ್ದಿಷ್ಟ ವಿಚಾರಗಳ ಬಗ್ಗೆ ಮಾತ್ರ ಪ್ರವಾಸ ಎಂದು ಕಾಗೋಡು ಹೇಳಿದರು. ಶಾಸಕ ರಮೇಶ್ ಕುಮಾರ್ ವಿರುದ್ದವೂ ಸ್ಪೀಕರ್ ಕಿಡಿ ಕಾರಿದರು. ರಮೇಶ್ ಕುಮಾರ್ ನೇತೃತ್ವದಲ್ಲಿ ವಿದೇಶ ಪ್ರವಾಸಕ್ಕೆ ಹೋಗಿದ್ದರು.ಆದರೆ ರಮೇಶ್ ಕುಮಾರ್ ಸೂಕ್ತ ವರದಿ ನೀಡಿಲ್ಲ ಎಂದು ಕಾಗೋಡು ಹೇಳಿದರು. 

Share this Story:

Follow Webdunia kannada