Select Your Language

Notifications

webdunia
webdunia
webdunia
webdunia

ತಂದೆಯನ್ನೇ ಹತ್ಯೆಗೈದು ಪೊಲೀಸ್ ಠಾಣೆಗೆ ದೂರು ನೀಡಿದ್ದ ಆರೋಪಿ ಪುತ್ರನ ಬಂಧನ

ತಂದೆಯನ್ನೇ ಹತ್ಯೆಗೈದು ಪೊಲೀಸ್ ಠಾಣೆಗೆ ದೂರು ನೀಡಿದ್ದ ಆರೋಪಿ ಪುತ್ರನ ಬಂಧನ
ಬೆಂಗಳೂರು , ಶನಿವಾರ, 27 ಫೆಬ್ರವರಿ 2016 (16:11 IST)
ತಂದೆ ಮಹಿಳೆಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಾರೆ ಎಂದು ಶಂಕಿಸಿದ ಪುತ್ರನೊಬ್ಬ ತಂದೆಯನ್ನೇ ಹತ್ಯೆಗೈದ ದಾರುಣ ಘಟನೆ ವರದಿಯಾಗಿದೆ.
 
71 ವರ್ಷ ವಯಸ್ಸಿನ ತಂದೆ ಗಿಲ್ಬರ್ಟ್ ಕೊಲಾರಿಯಾ ಮೊಬೈಲ್‌ನಲ್ಲಿ ಮಹಿಳೆಯೊಂದಿಗೆ ಮಾತನಾಡುತ್ತಿರುವುದನ್ನು ಪುತ್ರ ಪ್ರಶ್ನಿಸಿದಾಗ ಇಬ್ಬರು ನಡುವಿನ ವಾಗ್ವಾದ ವಿಕೋಪಕ್ಕೆ ತೆರಳಿದಾಗ ಪುತ್ರ ಮೊಬೈಲ್ ಚಾರ್ಜರ್ ವೈರ್‌ನಿಂದ ತಂದೆಯ ಕತ್ತು ಹಿಸುಕಿ ಹತ್ಯೆಗೈದಿದ್ದ. ನಂತರ ಪೊಲೀಸ್ ಠಾಣೆಗೆ ತೆರಳಿ ನನ್ನ ತಂದೆಗೆ ಅಕ್ರಮ ಸಂಬಂಧವಿತ್ತು. ಮಹಿಳೆಯ ಕಡೆಯವರು ನನ್ನ ತಂದೆಯನ್ನು ಹತ್ಯೆ ಮಾಡಿದ್ದಾರೆ ಎಂದು ದೂರು ನೀಡಿದ್ದ.
 
41 ವರ್ಷ ವಯಸ್ಸಿನ ಪುತ್ರ ಜೆನ್ಸೆನ್ ಕೊಲರಿಯಾ ನೀಡಿದ ದೂರಿನ ವಿಚಾರಣೆ ನಡೆಸಿದಾಗ, ಆತನ ಮೊಬೈಲ್ ಕರೆಗಳು ಚಾಲ ಪತ್ತಹಚ್ಚಿದಾಗ ಪುತ್ರನೇ ತಂದೆಯನ್ನು ಹತ್ಯೆ ಮಾಡಿದ್ದಾನೆ ಎನ್ನುವುದಕ್ಕೆ ಹಲವು ಸಾಕ್ಷ್ಯಗಳು ಪೊಲೀಸರಿಗೆ ದೊರೆತಿವೆ.
 
ಪೊಲೀಸರು ಜೆನ್ಸನ್‌ನನ್ನು ತೀವ್ರ ವಿಚಾರಣೆಗೊಳಪಡಿಸಿದಾಗ ತಾನೇ ತಂದೆಯನ್ನು ಹತ್ಯೆ ಮಾಡಿರುವುದನ್ನು ಒಪ್ಪಿಕೊಂಡಿದ್ದಾಗಿ ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. 

Share this Story:

Follow Webdunia kannada