ಮೊಬೈಲ್‌ ಫೋನ್‌ ಕೊಡಿಸಲಿಲ್ಲ ಅಂತ ತಾಯಿಯನ್ನೇ ಕೊಂದ ಮಗ!

Webdunia
ಶನಿವಾರ, 4 ಜೂನ್ 2022 (14:29 IST)
ಮೊಬೈಲ್ ಫೋನ್ ಕೊಡಸಲಿಲ್ಲವೆಂದು ತಾಯಿಯನ್ನೇ ಮಗ ಕೊಂದ ಆಘಾತಕಾರಿ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಬೇಗೂರು ಪೊಲೀಸ್ ಠಾಣಾ ವ್ಯಾಪ್ತಿಯ ಮೈಲಸಂದ್ರದ ಲುಕಾಸ್ ಲೇಔಟ್ ನಿವಾಸಿ ಫಾತಿಮಾ ಮೇರಿ (46) ಮೃತ ದುರ್ದೈವಿ ತಾಯಿ. ದೀಪಕ್ (26) ತಾಯಿಯನ್ನೇ ಕೊಂದು ಜೈಲು ಸೇರಿದ ಪಾಪಿ ಮಗ.
ಕೊಲೆಯಾದ ಫಾತಿಮಾ ಮೇರಿ ಮೈಲಸಂದ್ರ ವ್ಯಾಪ್ತಿಯ ಜಮೀನುಗಳಲ್ಲಿ ಸೊಪ್ಪು ಕುಯ್ಡು ಸಂಗ್ರಹಿಸಿ ಮಾರಾಟ ಮಾಡಿ ಜೀವನ ನಡೆಸುತ್ತಿದ್ದರು. ಜೂನ್‌ ೧ರಂದು ಬೆಳಿಗ್ಗೆ ೧೦ ಗಂಟೆಗೆ ನೈಸ್ ರಸ್ತೆಯ ಬಳಿ ಜಮೀನಿನಲ್ಲಿ ಸೊಪ್ಪು ಕೊಯ್ಯಲು ತೆರಳಿದ್ದರು.
ಈ ವೇಳೆ ಇನ್ನೂ ಮಲಗಿದ್ದ ಪುತ್ರ ದೀಪಕ್ ಹಾಗೂ ಪತಿ ಎದ್ದ ತಕ್ಷಣ ಕಳುಹಿಸು ಎಂದು ಪುತ್ರಿ ಜಾಯ್ಸ್ ಮೇರಿಗೆ ಹೇಳಿದ್ದರು. ಇದರಂತೆ ದೀಪಕ್ ಎದ್ದ ಕೂಡಲೇ ನೈಸ್ ರಸ್ತೆಗೆ ತೆರಳುವಂತೆ ಹೇಳಿದ್ದಾಳೆ.
ಮಧ್ಯಾಹ್ನ 2 ಗಂಟೆಗೆ ಸುಮಾರಿಗೆ ಸ್ಥಳೀಯರಿಂದ ಫೋನ್ ತೆಗೆದುಕೊಂದು ತಂದೆಗೆ ದೂರವಾಣಿ ಕರೆ ಮಾಡಿರುವ ದೀಪಕ್, ನೈಸ್ ರಸ್ತೆಯಲ್ಲಿ ತಾಯಿಯ ಮೃತದೇಹ ಪತ್ತೆಯಾಗಿರುವುದಾಗಿ ತಿಳಿಸಿದ್ದಾರೆ.
ಫಾತಿಮಾ ಅವರ ಸೀರೆಯನ್ನೇ ಬಳಸಿ ಕುತ್ತಿಗೆಗೆ ಸುತ್ತಿ ಆಕೆಯನ್ನು ಹತ್ಯೆ ಮಾಡಲಾಗಿದ್ದನ್ನು ಕಂಡ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ. ಈ ವೇಳೆ ಪುತ್ರನೇ ಹಂತಕನೆಂದು ತಿಳಿದುಬಂದಿದೆ.
ಮೊಬೈಲ್ ಫೋನ್ ಕೊಡಿಸುವುದಾಗಿ ಅಮ್ಮನನ್ನು ಕೇಳಿದ್ದೆ. ಆದರೆ, ಆಕೆ ನಿರಾಕರಿಸಿದ್ದಳು. ಇದರಿಂದ ಸಿಟ್ಟಿನಿಂದ ಆಕೆಯನ್ನು ಹತ್ಯೆ ಮಾಡಿದೆ ಎಂದು ವಿಚಾರಣೆ ವೇಳೆ ದೀಪಕ್ ಸತ್ಯ ಒಪ್ಪಿಕೊಂಡಿದ್ದಾನೆಂದು ಪೊಲೀಸರು ಹೇಳಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

194 ಪ್ರಯಾಣಿಕರಿದ್ದ ಇಂಡಿಗೋ ವಿಮಾನದಲ್ಲಿ ಹೀಗಾಗುವುದಾ

ಕರೂರ್‌ನಲ್ಲಿ ಮೃತಪಟ್ಟ ಕುಟುಂಬದವರಿಗೆ ಕೆಲಸ ಕೊಟ್ಟ ತಮಿಳು ಸಿಎಂ ವಿಜಯ್‌ಗೆ ಬಿಗ್ ಶಾಕ್

ಆನೆಗೆ ಬೆಲ್ಲ ತಿನ್ನಿಸಲು ಹೋಗಿ ಪ್ರಾಣ ಕಳೆದುಕೊಂಡ ರಿಕ್ಷಾ ಚಾಲಕ, ಭಯಾನಕ ವಿಡಿಯೋ

ವಿಮಾನ ಹಾರಾಟ ನಡೆಸುತ್ತಿರುವಾಗಲೇ ಕಾಣಿಸಿಕೊಂಡ ಹಾವು, Viral Video

ಕೇಂದ್ರ ಸರ್ಕಾರ ಸಕ್ಕರೆನಾಡಿನ ಜನತೆಯ ದೀರ್ಘ ಕಾಲದ ಬೇಡಿಕೆ ಈಡೇರಿಸಿದ ಬಗ್ಗೆ ಎಚ್ ಕುಮಾರಸ್ವಾಮಿ ಫೋಸ್ಟ್‌, ಏನಿದು ವಿಷಯ

ಮುಂದಿನ ಸುದ್ದಿ
Show comments