ಎಸ್.ಎಂ.ಕೃಷ್ಣ ಬರ್ತಡೇ; ಬಿಜೆಪಿ, ಕೈ ಪಡೆಯಿಂದ ಶುಭಾಶಯ

Webdunia
ಬುಧವಾರ, 1 ಮೇ 2019 (19:10 IST)
ಮಾಜಿ ಮುಖ್ಯಮಂತ್ರಿ ಬಿಜೆಪಿಯ ಹಿರಿಯ ನಾಯಕ ಎಸ್.ಎಂ.ಕೃಷ್ಣ ಅವರಿಗಿಂದು ಹುಟ್ಟುಹಬ್ಬದ ಸಂಭ್ರಮ. 88ನೇ  ವರ್ಷಕ್ಕೆ ಪಾದಾರ್ಪಣೆ ಮಾಡಿರುವ ಕೃಷ್ಣಾ ಅವರ ಜನುಮ ದಿನದ‌ ಪ್ರಯುಕ್ತ ಕೃಷ್ಣಾ ಅವರನ್ನು  ಬಿಜೆಪಿ ನಾಯಕರು ಹಾಗೂ ಕೆಲ ಕಾಂಗ್ರೆಸ್ ಮುಖಂಡರು ಭೇಟಿಯಾಗಿ ಶುಭಕೋರಿದರು.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಮಾತನಾಡಿ, ಕೃಷ್ಣಾ ಅವರ 88 ನೇ ಜನ್ಮದಿನವನ್ನು ಸಂಭ್ರಮದಿಂದ ಆಚರಿಸಿದ್ದೇವೆ. ಅವರು‌ 100 ವರ್ಷ ಬಾಳಿ ಬದುಕಿ ನಮಗೆಲ್ಲ ಹರಸಬೇಕು. ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಕೃಷ್ಣಾ ಅವರು ರಾಜ್ಯದ 22 ಜಿಲ್ಲೆಗಳಲ್ಲಿ ಸುತ್ತಾಡಿ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ಮಾಡಿ ನಮಗೆಲ್ಲ ಬಲ ತಂದಿದ್ದಾರೆ ಎಂದರು.

ಎಸ್.ಎಂ.ಕೃಷ್ಣಾ ಮಾತನಾಡಿ, ಪಕ್ಷದ ನಾಯಕರು ತಮ್ಮ ಹುಟ್ಟುಹಬ್ಬವನ್ನು ಇಷ್ಟೊಂದು ಸಂಭ್ರಮವಾಗಿ ಆಚರಿಸುತ್ತಾರೆ ಎಂದು ತಾವು ನಿರೀಕ್ಷೆ ಮಾಡಿರಲಿಲ್ಲ. ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಸೇರಿದಂತೆ ಪಕ್ಷದ  ನಾಯಕರು‌ ಆಶೀರ್ವಾದ ಮಾಡುವ ಬಗ್ಗೆ ನಿರೀಕ್ಷೆ ಮಾಡಿರಲಿಲ್ಲ. ಸಾಮಾನ್ಯವಾಗಿ ಜನ್ಮದಿನದ ದಿನ ಬೆಂಗಳೂರಿನಲ್ಲಿ ಇರುತ್ತಿರಲ್ಲ. ಈ ಬಾರಿ ಇದ್ದೇನೆ‌.

ಜನ್ಮದಿನ ಬಹಿರಂಗವಾಗಿ ಆಚರಿಸಿದ್ದು ಎಲ್ಲರ ಆಶೀರ್ವಾದದಿಂದ ಸಾರ್ವಜನಿಕ ಜೀವನದಲ್ಲಿ ಕೆಲ ಕಾಲ‌ ಇನ್ನೂ ಉತ್ಸಾಹದಿಂದ ಬಿಜೆಪಿಯಲ್ಲಿ‌ ಕೆಲಸ ಮಾಡುವುದಾಗಿ ಸಂತಸ ವ್ಯಕ್ತಪಡಿಸಿದರು. ಮೇ 23 ರಂದು ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ. ಲೋಕಸಭೆ ಫಲಿತಾಂಶ ಬಂದ ಬಳಿಕ ರಾಜ್ಯದಲ್ಲಿ ಆಗಬಹುದಾದ ರಾಜಕೀಯ ಬದಲಾವಣೆಯ ಪ್ರಕ್ರಿಯೆಗಳನ್ನು ತಾವು  ಕುತೂಹಲದಿಂದ ನಿರೀಕ್ಷಿಸುತ್ತಿರುವುದಾಗಿ ತಿಳಿಸಿದರು.


ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಮುಖ್ಯಮಂತ್ರಿಗಳೇ ನಿಮ್ಮ ಪಕ್ಷದ ಪ್ರಚಾರದ ಗೀಳಿಗೆ ಇನ್ನೆಷ್ಟು ದುರ್ಘಟನೆ ಬೇಕು

ಸ್ವೀಟ್ ಖರೀದಿಸಿದ ರಾಹುಲ್ ಗಾಂಧಿಗೆ ಶಾಕಿಂಗ್ ಬೇಡಿಕೆಯಿಟ್ಟ ಅಂಗಡಿ ಮಾಲೀಕ

ನಕ್ಸಲಿಸಂ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ದಿಟ್ಟ ಉತ್ತರ

ಪತ್ನಿ ಕೃತಿಕಾ ರೆಡ್ಡಿ ಹತ್ಯೆ ಬಗ್ಗೆ ಕೊನೆಗೂ ಸ್ಪೋಟಕ ಸತ್ಯ ಬಾಯ್ಬಿಟ್ಟ ಡಾ ಮಹೇಂದ್ರ ರೆಡ್ಡಿ

ಓಲಾ ಕಂಪೆನಿ ಎಂಜಿನಿಯರ್ ಅನುಮಾನಸ್ಪದ ಸಾವು, 28ಪುಟಗಳ ಡೆತ್‌ನೋಟ್‌ನಲ್ಲಿತ್ತು ಶಾಕಿಂಗ್ ಸಂಗತಿ

ಮುಂದಿನ ಸುದ್ದಿ
Show comments