Select Your Language

Notifications

webdunia
webdunia
webdunia
webdunia

ಕಚೇರಿಗಾಗಿ ಸೈಟು ವಿಚಾರ: ಡಿಕೆಶಿಗೆ ತಿರುಗೇಟು ನೀಡಿದ ಕುಮಾರಸ್ವಾಮಿ

ಕಚೇರಿಗಾಗಿ ಸೈಟು ವಿಚಾರ: ಡಿಕೆಶಿಗೆ ತಿರುಗೇಟು ನೀಡಿದ ಕುಮಾರಸ್ವಾಮಿ
ಬೆಂಗಳೂರು , ಶನಿವಾರ, 24 ಜನವರಿ 2015 (18:13 IST)
ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ಅವರು ಇಂಧನ ಸಚಿವ ಡಿ.ಕೆ.ಶಿವಕುಮಾರ್ ಅವರ ವಿರುದ್ಧ ಕಾರವಾಗಿ ಪ್ರತಿಕ್ರಿಯಿಸಿದ್ದು, ನಮಗೆ ಡಿಕೆಶಿ ಅವರ ಉಚಿತ ಸಲಹೆ ಬೇಕಾಗಿಲ್ಲ. ಅವರು ನುಂಗಿದಷ್ಟು ಭೂಮಿಯನ್ನು ನಾವು ನುಂಗಿಲ್ಲ. ಅವರ ಅಕ್ರಮವನ್ನು ಶಾಂತಿ ನಗರ ಹೌಸಿಂಗ್ ಪ್ರಕರಣವೇ ಹೇಳುತ್ತದೆ ಅವರು ಎಷ್ಟು ಭೂಮಿಯನ್ನು ನುಂಗಿದ್ದಾರೆ ಎಂಬುದನ್ನು ಎನ್ನುವ ಮೂಲಕ ಸಚಿವ ಡಿಕೆಶಿ ವಿರುದ್ಧ ಹರಿಹಾಯ್ದಿದ್ದಾರೆ. 
 
ಡಿಕೆಶಿ ತಮ್ಮ ಕಚೇರಿಯ ಬಗ್ಗೆ ಸರ್ಕಾರಕ್ಕೆ ಅರ್ಜಿ ಸಲ್ಲಿಸಲಿ, ಸೈಟ್ ನೀಡಲಿದ್ದೇವೆ ಎಂದಿದ್ದಾರಲ್ಲ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಡಿ.ಕೆ. ಶಿವಕುಮಾರ್ ಬಗ್ಗೆ ನಾನು ಇದೇ ಮೊದಲು ಪ್ರತಿಕ್ರಿಯಿಸುತ್ತಿದ್ದು, ಹಿಂದೆ ಎಂದೂ ಪ್ರತಿಕ್ರಿಯಿಸಿಲ್ಲ. ಅವರು ಬೆನ್ನಿಗಾನಹಳ್ಳಿಯಲ್ಲಿ ಸಾರ್ವಜನಿಕರ ಸಾಕಷ್ಟು ಭೂಮಿಯನ್ನು ನುಂಗಿದ್ದಾರೆ. ಅಲ್ಲದೆ ಆ ಭೂ ಕಬಳಿಕೆ ಪ್ರಕರಣದಿಂದ ಹೊರಬರಲು ನಮ್ಮದೇ ಪಕ್ಷದ ಕಾರ್ಯಕರ್ತರೋರ್ವರನ್ನು ಬಳಸಿಳ್ಳುತ್ತಿದ್ದಾರೆ. ಅಂತಹ ಯಾವುದೇ ಅಕ್ರಮವನ್ನು ನಾವು ಎಸಗಿಲ್ಲ. ಅವರಿಗೆ ಕಾನೂನಿನ ಕಟಕಟೆಯಲ್ಲಿ ನಿಂತು ಕಾನೂನನ್ನು ಎದುರಿಸುವ ಧೈರ್ಯವಿಲ್ಲ. ಆದರೂ ಹೀಗೆ ವ್ಯಂಗ್ಯವಾಗಿ ಮಾತನಾಡುತ್ತಾರೆ. ನಾನೆಂದೂ ಕೂಡ ಅವರ ಪ್ರಕರಣಕ್ಕೆ ಅಥವಾ ವೈಯಕ್ತಿಕತೆ ಬಗ್ಗೆ ಪ್ರತಿಕ್ರಿಯಿಸಿದವನಲ್ಲ. ಆದರೂ ಅವರು ನಮ್ಮ ಕಚೇರಿ ವಿಷಯದ ಬಗ್ಗೆ ಅವಹೇಳನವಾಗಿ ಮಾತನಾಡುತ್ತಿದ್ದಾರೆ. ನಮ್ಮ ಸುದ್ದಿಗಾಗಲಿ ಅಥವಾ ಪಕ್ಷದ ಸುದ್ದಿಗಾಗಲಿ ಅವರು ಬರುವುದು ಒಳಿತಲ್ಲ. ಅವರಿಂದ ಕಲಿಯುವ ಅಗತ್ಯ ನಮಗಿಲ್ಲ. ನಮಗೆ ಅವರ ಉಚಿತ ಸಲಹೆ ಬೇಕಾಗಿಲ್ಲ, ನಮ್ಮ ಬಗ್ಗೆ ಮಾತನಾಡುವ ನೈತಿಕತೆ ಅವರಿಗಿಲ್ಲ ಎಂದು ಕಾರವಾಗಿ ಪ್ರತಿಕ್ರಿಯಿಸಿದರು. 
 
ಜೆಡಿಎಸ್ ಪಕ್ಷವು ತನ್ನ ಪ್ರಾದೇಶಿಕ ಕಚೇರಿಗಾಗಿ ಶೆಡ್‌ನ್ನು ನಿರ್ಮಿಸಿದ್ದು, ಈ ಬಗ್ಗೆ ಪ್ರತಿಕ್ರಿಯಿಸಿದ್ದ ಸಚಿವರು, ಇಡೀ ಬೆಂಗಳೂರಿನಲ್ಲಿ ಗೌಡರು ಅಪಾರ ಆಸ್ತಿ ಹೊಂದಿದ್ದಾರೆ. ಸಂಪೂರ್ಣ ಬೇಂಗಳೂರೇ ಗೌಡರಿಗೆ ಸೇರಿದ್ದಾಗಿದೆ. ಹಾಗಿರುವಾಗ ಕಚೇರಿ ನಿರ್ಮಾಣಕ್ಕೆ ದೇವೇಗೌಡರಿಗೆ ಬೇರೆ ಜಾಗ ಸಿಗಲಿಲ್ಲವೇ ಎಂದು ಮಾಧ್ಯಮಗಳನ್ನು ಪ್ರಶ್ನಿಸಿದ್ದ ಸಚಿವರು, ಒಂದು ವೇಳೆ ಅವರಿಗೆ ಕಚೇರಿ ನಿರ್ಮಾಣಕ್ಕೆ ಜಾಗವೇ ಇಲ್ಲ ಎಂದಾದರೆ ಸರ್ಕಾರಕ್ಕೆ ಅರ್ಜಿ ಸಲ್ಲಿಸಲಿ. ನಮ್ಮ ಸರ್ಕಾರ ಅಗತ್ಯವಾದಷ್ಟು ಸೈಟನ್ನು ತ್ವರಿತವಾಗಿ ಮಂಜೂರು ಮಾಡಲಿದೆ ಎಂದು ವ್ಯಂಗ್ಯವಾಡಿದ್ದರು. 

Share this Story:

Follow Webdunia kannada