Daily Horoscope
✕

ಎಸ್‌ಐಆರ್‌ ಪ್ರಕ್ರಿಯೆಯನ್ನು ಎರಡನೇ ಸಂಗ್ರಾಮದಂತೆ ಹೋರಾಟ ಮಾಡಬೇಕು: ಬಿಕೆ ಹರಿಪ್ರಸಾದ್

ಸಂಪ್ರಿಯ
ಭಾನುವಾರ, 28 ಜೂನ್ 2026 (16:44 IST)
ಮೈಸೂರು: ಕಾಂಗ್ರೆಸ್ ಕಾರ್ಯಕರ್ತರು ಎಸ್‌ಐಆರ್ ಪ್ರಕ್ರಿಯೆಯನ್ನು ಎರಡನೇ ಸ್ವಾತಂತ್ರ್ಯ ಹೋರಾಟ ಎಂದು ಭಾವಿಸಿ ಯಾರೊಬ್ಬ ಮತದಾರರ ಹೆಸರನ್ನು ಕೈಬಿಡದಂತೆ ನೋಡಿಕೊಳ್ಳಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಬಿಕೆ ಹರಿಪ್ರಸಾದ್ ಹೇಳಿದರು. 

ಇಲ್ಲಿನ ಜೆ.ಕೆ.‌ಮೈದಾನದಲ್ಲಿ ಭಾನುವಾರ ಕಾಂಗ್ರೆಸ್ ಆಯೋಜಿಸಿದ್ದ ಮೈಸೂರು ವಿಭಾಗೀಯ ಮಟ್ಟದ ಎಸ್ ಐಆರ್ ಜಾಗೃತಿ ಸಮಾವೇಶದಲ್ಲಿ ಪ್ರತಿಕ್ರಿಯಿಸಿದ ಅವರು,  ಮತದಾನದ ಹಕ್ಕೇ ನಮಗೆ ಎ.ಕೆ. 47. ಈ ಅಸ್ತ್ರವನ್ನು ಉಳಿಸಿಕೊಳ್ಳಲು ನಾವೆಲ್ಲ ಹೋರಾಟ ಮಾಡಬೇಕು. ಇಲ್ಲವಾದರೆ ದೇಶ ಮತ್ತೆ ಗುಲಾಮಗಿರಿಗೆ ಹೋಗುತ್ತದೆ ಎಂದು ಹೇಳಿದರು. 

ಬಿಜೆಪಿ ಹಾಗೂ ಆರ್ ಎಸ್ ಎಸ್ ಪ್ರೇರಿತ ಎಸ್ ಐಆರ್ ಇದಾಗಿದೆ. ಪರಿಷ್ಕರಣೆಗೆ ನಮ್ಮ‌ ವಿರೋಧ ಇಲ್ಲ. ಸತ್ತವರು, ಎರಡೆರಡು ಕಡೆ ಇರುವವರ ಹೆಸರು ಕೈಬಿಡಿ. ಆದರೆ ಅರ್ಹರನ್ನು ಜಾತಿ ಆಧಾರದಲ್ಲಿ ಕೈಬಿಡಲು ಅವಕಾಶ ನೀಡುವುದಿಲ್ಲ. ಇದು ಪ್ರಜಾಪ್ರಭುತ್ವಕ್ಕೆ ಆಘಾತಕಾರಿ ವಿಷಯ ಎಂದು ಹೇಳಿದರು.

ಬಿಜೆಪಿ ಕೇವಲ ಧರ್ಮಾಧಾರಿತ, ಶ್ರೇಣಿಕೃತ ರಾಜಕಾರಣದಲ್ಲಿ ನಂಬಿಕೆ ಇಟ್ಟಿರುವ ಪಕ್ಷ. ಅವರಿಗೆ ಸಂವಿಧಾನ, ತ್ರಿವರ್ಣ ಧ್ವಜ, ಜಾತ್ಯತೀತತೆ ಮೇಲೆ ನಂಬಿಕೆ ಇಲ್ಲ. ನಾವೆಲ್ಲರೂ ಜೊತೆಗೂಡಿ ಸಂವಿಧಾನ ಉಳಿಸಬೇಕಿದೆ' ಎಂದರು.<>

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಪ್ರಧಾನಿ ಮೋದಿ ಹುಟ್ಟುಹಬ್ಬವನ್ನು ವಿಶಿಷ್ಟವಾಗಿ ಆಚರಿಸಿದ ಬಿಜೆಪಿ ನಾಯಕರು

ಮುಸ್ಲಿಮರೇ ಫಸ್ಟ್ ಎಂದಿದ್ದ ಅರವಿಂದ ಬೋಳಾರ್ ಈಗ ಕೈ ಮುಗಿದು ಹೀಗೆ ಬೇಡಿಕೊಂಡ್ರು

ದೇಶಸೇವೆಗೆ ಸಮರ್ಪಿಸಿಕೊಂಡ ಪ್ರಧಾನಿ ನರೇಂದ್ರ ಮೋದಿ ಜೀ: ವಿಜಯೇಂದ್ರ

Gold Price: ಚಿನ್ನದ ದರ ಇಂದು ಎಷ್ಟಾಗಿದೆ ನೋಡಿ

ಏಯ್ ನೀನೂ ಸ್ವಲ್ಪ ತಿನ್ನೋ… ನಂದಿ ತಿನ್ನಲಿಲ್ಲವೆಂದು ಕೋತಿ ಏನು ಮಾಡ್ತು ನೋಡಿ Video

ಮುಂದಿನ ಸುದ್ದಿ
Show comments