ಬಿಜೆಪಿಯವರಿಗೆ ಅಂಟು ರೋಗ ಬಂದಿದೆ ಸಿದ್ದರಾಮಯ್ಯ ಕಾಲದಲ್ಲಿ ಆಗ್ಲಿಲ್ವಾ ಅಂತ ಎಲ್ಲದಕ್ಕೂ ಪ್ರಶ್ನೆ ಮಾಡ್ತಾರೆ ಎಂದು ವಿರೋಧ ಪಕ್ಷ ನಾಯಕ ಸಿದ್ದರಾಮಯ್ಯ ಕಿಡಿ ಕಾರಿದ್ದಾರೆ. ಬಿಜೆಪಿ ಕೇಂದ್ರ ಚುನಾವಣಾ ಆಯೋಗಕ್ಕೆ ತಡ ರಾತ್ರಿ ದೂರು ಸಲ್ಲಿಕೆ ವಿಚಾರವಾಗಿ ಮಾತನಾಡಿ ನಾವು ದೂರು ಕೊಟ್ಟಿದ್ದೀವಿ ಅಂತ ಬಿಜೆಪಿಯವರೂ ದೂರು ಕೊಟ್ಟಿದ್ದಾರೆ.ಅದಕ್ಕೆ ಅರ್ಥ ಇದೆಯಾ? ಅರ್ಥ ಇಲ್ಲ,ಚುನಾವಣಾ ಆಯೋಗದವರು ಮತದಾರ ಪಟ್ಟಿ ರಿವಿಷನ್ ಮಾಡಬೇಕು.ಇವರಿಂದ ನ್ಯಾಯ ಸಮ್ಮತ ಚುನಾವಣೆ ನಡೆಯುತ್ತದೇಯಾ?ಇವರು ಹೀಗೆ ಮಾಡಿದರೆ ಆತಂಕ ಆಗುವುದಿಲ್ವಾ? ಮುಕ್ತ ನ್ಯಾಯ ಸಮ್ಮತ ಚುನಾವಣೆ ನಡೆಯಬೇಕಾದರೆ ಸರಿಯಾದ ತನಿಖೆ ಆಗಬೇಕು. ಬಿಜೆಪಿಯವರಿಗೆ ಅಂಟು ರೋಗ ಬಂದಿದೆ.ಸಿದ್ದರಾಮಯ್ಯ ಕಾಲದಲ್ಲಿ ಆಗ್ಲಿಲ್ವಾ ಅಂತ ಎಲ್ಲದಕ್ಕೂ ಪ್ರಶ್ನೆ ಮಾಡ್ತಾರೆ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.