ಮನುಷ್ಯರು ಕಲ್ಪಿಸಿಕೊಳ್ಳಲೂ ಆಗದಷ್ಟು ಸುಳ್ಳುಗಳನ್ನು ಮೋದಿ-ಅಮಿತ್ ಶಾ ಹೇಳ್ತಾರೆ: ಸಿದ್ದರಾಮಯ್ಯ

Krishnaveni K
ಬುಧವಾರ, 1 ಮೇ 2024 (16:27 IST)
ಸುರಪುರ: BJP ಯ ರಾಜುಗೌಡನನ್ನು ಸೋಲಿಸುವುದೇ ನನ್ನ ಗುರಿ. ಸುರಪುರ ವಿಧಾನಸಭೆ ಮತ್ತು ರಾಯಚೂರು ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು  ಭರ್ಜರಿ ಬಹುಮತದಿಂದ ಗೆಲ್ಲಿಸಿ ಎಂದು ಸಿ.ಎಂ ಸಿದ್ದರಾಮಯ್ಯ ಕರೆ ನೀಡಿದರು. 
 
ಸುರಪುರ ವಿಧಾನಸಭೆ ಮತ್ತು ರಾಯಚೂರು ಲೋಕಸಭಾ ಚುನಾವಣೆ ಪ್ರಯುಕ್ತ ನಡೆದ ಪ್ರಜಾಧ್ವನಿ-2 ಜನ ಸಮಾವೇಶವನ್ನು ಉದ್ಘಾಟಿಸಿ ಎರಡೂ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಭರ್ಜರಿ ಗೆಲುವು ನೀಡುವಂತೆ ಕರೆ ನೀಡಿ ಮಾತನಾಡಿದರು. 
 
ಸುರಪುರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ರಾಜೂಗೌಡ ನನ್ನ ಬೆಂಬಲ ಇದೆ ಎಂದು ಸುಳ್ಳು ಹೇಳಿ ಅವರಿಗೆ ಮತ ಕೇಳುತ್ತಿದ್ದಾರೆ ಎನ್ನುವ ಸಂಗತಿ ನನ್ನ ಕಿವಿಗೆ ಬಿದ್ದಿದೆ. ಇದು ಅಪ್ಪಟ ಸುಳ್ಳು. ಮೋದಿಯಿಂದ ಹಿಡಿದು ಅಮಿತ್ ಶಾ ಮತ್ತು ರಾಜೂಗೌಡನವರೆಗೂ ಸುಳ್ಳುಗಳ ಸರದಾರರು. ಮನುಷ್ಯರು ಕಲ್ಪಿಸಿಕೊಳ್ಳುವುದಕ್ಕೂ ಸಾಧ್ಯವಿಲ್ಲದ ಸುಳ್ಳುಗಳನ್ನು ಇವರು ನೀರು ಕುಡಿದಷ್ಟೆ ಸಲೀಸಾಗಿ ಹೇಳುತ್ತಾರೆ. ಇವರ ಸುಳ್ಳುಗಳನ್ನು ನಂಬಿ ಹತ್ತತ್ತು ವರ್ಷ ಮೋಸ ಹೋಗಿದ್ದು ಸಾಕು. ಇನ್ನೂ ಎಷ್ಟು ವರ್ಷ ಬಿಜೆಪಿಯ ಸುಳ್ಳುಗಳಿಗೆ ಮೋಸ ಹೋಗ್ತೀರಿ ಎಂದು ಪ್ರಶ್ನಿಸಿದರು. 
 
ಮೊದಲ ಮತ್ತು ಎರಡನೆ ಹಂತದ ಚುನಾವಣೆಗಳಲ್ಲಿ ಬಿಜೆಪಿ ಸೋಲುತ್ತದೆ ಎನ್ನುವುದು ಮೋದಿಗೆ ಸ್ಪಷ್ಟವಾಗಿ ಗೊತ್ತಾಗಿದೆ. ಬಿಜೆಪಿಯವರೇ ಮಾಡಿಸಿರುವ ಸಮೀಕ್ಷೆಯಲ್ಲೇ ಅವರಿಗೆ ಸೋಲು ಕಟ್ಟಿಟ್ಟ ಬುತ್ತಿ. ರಾಷ್ಟ್ರ ಮಟ್ಟದಲ್ಲಿ ಬಿಜೆಪಿ 200 ಸೀಟು ಗೆದ್ದರೆ ಹೆಚ್ಚು ಎನ್ನುವಂತಹ ಸ್ಥಿತಿ ಇದೆ. ಹೀಗಾಗಿ ಸೋಲಿಗೆ ಹೆದರಿ ಮೋದಿ, ಶಾ, ರಾಜುಗೌಡ ಭರ್ಜರಿ ಸುಳ್ಳುಗಳನ್ನು ಹೇಳುತ್ತಿದ್ದಾರೆ. ಈ ಸುಳ್ಳುಗಳಿಗೆ ಮರುಳಾಗಬೇಡಿ ಎಂದರು. 
 
ರಾಯಚೂರು ಲೋಕಸಭೆ ಮತ್ತು ಸುರಪುರ ವಿಧಾನಸಭೆ ಎರಡೂ ಕ್ಷೇತ್ರಗಳಲ್ಲೂ ಬಿಜೆಪಿಯನ್ನು ಸೋಲಿಸಿ ಕಾಂಗ್ರೆಸ್ ಅಭ್ಯರ್ಥಿಯನ್ನು ಭರ್ಜರಿ ಬಹುಮತದಿಂದ ಗೆಲ್ಲಿಸಬೇಕು ಎನ್ನುವುದು ನನ್ನ ಗುರಿ. ನನ್ನ ಗುರಿಯನ್ನು ನೀವೆಲ್ಲಾ ಗೆಲ್ಲಿಸಿಕೊಂಡು ಬನ್ನಿ ಎಂದು ಕೈ ಮುಗಿದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದರು.‌ 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ದುಬೈಯಂತಹ ದೇಶ ನಿರ್ಮಿಸಿರುವ ಬಿಹಾರಿಗಳು ಇಂದು ನಿರುದ್ಯೋಗಿಗಳು: ರಾಹುಲ್ ಗಾಂಧಿ

ಮತಕ್ಕಾಗಿ ಮೋದಿ ನೃತ್ಯ ಮಾಡಕ್ಕೂ ಸೈ ಎಂದ ರಾಹುಲ್ ಗಾಂಧಿ ವಿರುದ್ಧ ದೂರು

ಕನ್ನಡ ರಾಜ್ಯೋತ್ಸವ ಪ್ರಶಸ್ತಿ 2025: ವಿಜೇತರ ಪಟ್ಟಿ, ಪ್ರಶಸ್ತಿ ವಿವರ ಇಲ್ಲಿದೆ

ಬಿಹಾರ ವಿಧಾನಸಭೆ ಚುನಾವಣೆ, ನಾಳೆ ಎನ್‌ಡಿಎ ಪ್ರಣಾಳಿಕೆ ಬಿಡುಗಡೆ

ಮಕ್ಕಳು ಸೇರಿದಂತೆ 17ಮಂದಿಯನ್ನು ಒತ್ತೆಯಾಳಾಗಿ ಇರಿಸಿಕೊಂಡಿದ್ದ ಆರ್ಯ ಗುಂಡೇಟಿಗೆ ಬಲಿ

ಮುಂದಿನ ಸುದ್ದಿ
Show comments