ಅಚ್ಚೇದಿನ್‌ ಬಂದಿದ್ದು ಬಡವರಿಗಲ್ಲ, ಅಂಬಾನಿ, ಅದಾನಿ, ಚೋಕ್ಸಿ, ನೀರವ್‌ ಮೋದಿಗೆ ಮಾತ್ರ- ಪ್ರಧಾನಿ ಮೋದಿ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ

Webdunia
ಗುರುವಾರ, 4 ಏಪ್ರಿಲ್ 2019 (16:36 IST)
ಬೆಂಗಳೂರು : 380 ರೂಪಾಯಿ ಇದ್ದ ಗ್ಯಾಸ್ ಬೆಲೆ ಈಗ ಒಂಬೈನೂರು  ಆಗಿದೆ. ಆದ್ದರಿಂದ ಬಡವರು, ಮಹಿಳೆಯರು, ಅಲ್ಪಸಂಖ್ಯಾತರಿಗೆ ಅಚ್ಚೇದಿನ್‌ ಬರಲಿಲ್ಲ. ಅಚ್ಚೇದಿನ್‌ ಬಂದಿದ್ದು ಅಂಬಾನಿ, ಅದಾನಿ, ಚೋಕ್ಸಿ, ನೀರವ್‌ ಮೋದಿಗೆ ಮಾತ್ರ ಎಂದು  ಸಿದ್ದರಾಮಯ್ಯ ಅವರು ಪ್ರಧಾನಿ ಮೋದಿ ವಿರುದ್ಧ ಕಿಡಿಕಾರಿದ್ದಾರೆ.


ಕಾಂಗ್ರೆಸ್ ಅಭ್ಯರ್ಥಿ ಡಿ.ಆರ್.ಪಾಟೀಲ ಪರವಾಗಿ ಏರ್ಪಡಿಸಿದ್ದ ಪ್ರಚಾರ ಸಭೆಯಲ್ಲಿ ಮಾತನಾಡಿದ ಸಿದ್ದರಾಮಯ್ಯ ಅವರು,’ ಬಿಜೆಪಿ ಎಂಪಿಗಳು ಏನೂ ಮಾಡಿಲ್ಲ. ನಮಗೆ ವೋಟು ಕೊಡಿ ಅಂತಾ ಕೇಳ್ತಿಲ್ಲ, ಮೋದಿಗೆ ವೋಟು ಕೊಡಿ ಅಂತಿದ್ದಾರೆ. ಜನರು ಈಗಾಗಲೆ ಭ್ರಮನಿರಸನ ಆಗಿದ್ದಾರೆ. ಜನರ ಖಾತೆಗೆ ಹದಿನೈದು ಲಕ್ಷ ಅಂದ್ರು, ಹದಿನೈದು ಪೈಸೆನೂ ಬರಲಿಲ್ಲ. ಅಂತಹದರಲ್ಲಿ  ನಿಮ್ಮ ಮುಖ ನೋಡಿ ವೋಟು ಹಾಕಬೇಕಾ ಮೋದಿಯವರೇ? ಎಂದು ಪ್ರಶ್ನಸಿದ್ದಾರೆ.


ರಾಜ್ಯದಲ್ಲಿ ಬರಗಾಲ ಇದ್ದಾಗ ಮೋದಿಯವರನ್ನು ಭೇಟಿ ಮಾಡಿದ್ದೆ. ವಿಶೇಷ ಅನುದಾನ ಕೊಡಿ ಅಂತಾ ಕೇಳಿದ್ದೆ. ನರೇಂದ್ರ ಮೋದಿ ಒಂದೇ ಒಂದು ರೂಪಾಯಿ ಅನುದಾನ ಕೊಡಲಿಲ್ಲ ಎಂದು ಪ್ರಧಾನಿ ಮೋದಿ ವಿರುದ್ಧ ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ದಿತ್ವಾ ಚಂಡಮಾರುತ, ದೇಶದ ಈ ಪ್ರದೇಶದಲ್ಲಿ ರೆಡ್ ಅಲರ್ಟ್ ಘೋಷಣೆ

ಸಿದ್ದರಾಮಯ್ಯ, ಶಿವಕುಮಾರ್ ಬ್ರೇಕ್‌ಫಾಸ್ಟ್ ಭೇಟಿ ಬಗ್ಗೆ ಡಿಕೆ ಸುರೇಶ್ ಸ್ಪೋಟಕ ಹೇಳಿಕೆ

ಭ್ರಾತೃತ್ವ ಬೇರೂರಿರುವ ಭಾರತದಲ್ಲಿ ವಿವಾದ ತರವಲ್ಲ: ಮೋಹನ್ ಭಾಗವತ್

ಇವಳೆಂಥಾ ಮಗಳು, ಹೊತ್ತು ಹೆತ್ತು ಸಾಕಿದ ತಾಯಿ ಮೇಲೆಯೇ ಮಗಳ ದರ್ಪ

ದಿತ್ವಾ ಚಂಡಮಾರುತ, ಲಕ್ಷ ಮಂದಿಗೆ ಊಟ, ವಸತಿ ವ್ಯವಸ್ಥೆ ಮಾಡಿದ ತಮಿಳುನಾಡು ಸರ್ಕಾರ

ಮುಂದಿನ ಸುದ್ದಿ
Show comments