ಗಿಫ್ಟ್ ಕೊಡುವವರನ್ನ ಕಂಡರೆ ಬೇಸ್ತು ಬೀಳುವ ಸಿಎಂ.. ವೇದಿಕೆಯಲ್ಲಿ ಗುಲ್ಬರ್ಗಾ ವಿವಿ ಬಂಗಾರದ ಪದಕ ವಾಪಸ್

Webdunia
ಭಾನುವಾರ, 19 ಮಾರ್ಚ್ 2017 (09:37 IST)
ದುಬಾರಿ ವಾಚ್ ಪ್ರಕರಣದಿಂದ ಸಿಎಂ ಸಿದ್ದರಾಮಯ್ಯ ಅಕ್ಷರಶಃ ಹೈರಾಣಾಗಿದ್ದಾರೆ. ಯಾರಾದರೂ ಗಿಫ್ಟ್ ಕೊಡೋಕೆ ಬಂದರೆ ಬೇಡಪ್ಪಾ ಗಿಫ್ಟ್ ಸಹವಾಸ ಅನ್ನುತ್ತಿದ್ದಾರೆ. ಕಲಬುರಗಿಯಲ್ಲಿ ಇದೇ ರೀತಿಯ ಪ್ರಸಂಗ ನಡೆದಿದೆ. ಉತ್ತಮ ಬಜೆಟ್ ಮಂಡಿಸಿದ್ದಕ್ಕಾಗಿ ಬಂಗಾರದ ಪದಕ ನೀಡಲು ಮುಂದಾಗಿದ್ದ ಗುಲ್ಬರ್ಗಾ ವಿವಿಗೆ ಸಿದ್ದರಾಮಯ್ಯ ನೋ ಎಂದಿದ್ದಾರೆ.

ಸಚಿವ ಬಸವರಾಜ ರಾಯರೆಡ್ಡಿ ಸಿಎಂಗೆ ಬಂಗಾರದ ಪದಕ ಮತ್ತು ಬೆಳ್ಳಿಯ ಆಕಳು ನೀಡಲು ಮುಂದಾದಾಗ ಅವರನ್ನ ತಡೆದ ಸಿಎಂ, ಇದನ್ನ ನೆನಪಿಗಾಗಿ ವಿಶ್ವವಿದ್ಯಾಲಯದಲ್ಲೇ ಇಟ್ಟುಕೊಳ್ಳಲು ತಿಳಿಸಿದ್ದಾರೆ.

ಈ ಹಿಂದೆ ಸಿಎಂ ಕೈಯಲ್ಲಿದ್ದ ಹ್ಯೂಬ್ಲೋಟ್ ಎನ್ನಲಾದ ವಾಚ್ ಬಗ್ಗೆ ಭಾರೀ ವಿವಾದ ಸೃಷ್ಟಿಸಿತ್ತು. ಸಮಾಜವಾದಿ ಹಿನ್ನೆಲೆಯುಳ್ಳ ಸಿಎಂ ಸಿದ್ದರಾಮಯ್ಯ ಮಜವಾದಿಯಾಗಿದ್ದಾರೆ ಎಂದು ಪ್ರತಿಪಕ್ಷಗಳು ಟೀಕಾಪ್ರಹಾರ ಮಾಡಿದ್ದವು. ಇದಾದ ಬಳಿಕ ೆಲ್ಲಿಯೂ ಸಿಎಂ ಗಿಫ್ಟ್ ಪಡೆಯುವ ಗೋಜಿಗೇ ಹೋಗುತ್ತಿಲ್ಲ.

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಇಂದಿರಾ, ಸೋನಿಯಾ, ಪ್ರಿಯಾಂಕಾರನ್ನು ಎಂಥವಳೋ ಎಂದು ಸಂಬೋಧನೆ ಮಾಡೋ ತಾಕತ್ತಿದೆಯಾ

ಸಂಕಷ್ಟಕ್ಕೆ ಕೈಜೋಡಿಸಿದ ಭಾರತಕ್ಕೆ ಶ್ರೀಲಂಕಾ ಧನ್ಯವಾದ

ದಿತ್ವಾ ಚಂಡಮಾರುತಕ್ಕೆ ಶ್ರೀಲಂಕಾದಲ್ಲಿ ಮೃತರ ಸಂಖ್ಯೆ 627ಕ್ಕೆ ಏರಿಕೆ, ಇನ್ನೂ ಹಲವು ಮಂದಿ ನಾಪತ್ತೆ

ನಾಳೆಯಿಂದ ಬೆಳಗಾವಿ ಅಧಿವೇಶನ, ಖಾಕಿ ಪಡೆ ಹೈ ಅಲರ್ಟ್‌

ವಿದ್ಯಾರ್ಥಿಗಳಿಗೆ ಗುಡ್‌ನ್ಯೂಸ್ ಕೊಟ್ಟ ಶಿಕ್ಷಣ ಸಚಿವ ಮಧು ಬಂಗಾರಪ್ಪ

ಮುಂದಿನ ಸುದ್ದಿ