Select Your Language

Notifications

webdunia
webdunia
webdunia
webdunia

ಮಾಜಿ ಸೈನಕನ ಮೇಲೆ ದೌರ್ಜನ್ಯ ಎಸಗಿದ್ದ ಎಸ್ಐ ಅಮಾನತು

ಮಾಜಿ ಸೈನಕನ ಮೇಲೆ ದೌರ್ಜನ್ಯ ಎಸಗಿದ್ದ ಎಸ್ಐ ಅಮಾನತು
ಬೆಂಗಳೂರು , ಮಂಗಳವಾರ, 3 ಮಾರ್ಚ್ 2015 (16:44 IST)
ಮಾಜಿ ಸೈನಿಕರೋರ್ವರ ಮೇಲೆ ಹಲ್ಲೆಗೈಯ್ಯುವ ಮೂಲಕ ದೌರ್ಜನ್ಯ ಎಸಗಿದ್ದಾರೆ ಎಂಬ ಆರೋಪ ಹಿನ್ನೆಲೆಯಲ್ಲಿ ನಗರದ ಸದಾಶಿನಗರ ಠಾಣೆಯ ಸಂಚಾರ ವಿಭಾಗದ ಎಸ್ಐ ಗಂಗಣ್ಣ ಅವರನ್ನು ನಗರದ ಸಂಚಾರ ಪೊಲೀಸ್ ಇಲಾಖೆಯ ಪೂರ್ವ ವಿಭಾಗದ ಆಯುಕ್ತ ಎಂ.ಎನ್.ಬಿ.ಆರ್.ಪ್ರಸಾದ್ ಅವರು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ. 
 
ಪ್ರಕರಣದ ಹಿನ್ನೆಲೆ, ಇಂದು ಬೆಳಗ್ಗೆ ನಗರದಲ್ಲಿ ಧಾರಾಕಾರವಾಗಿ ಮಳೆ ಬಿದ್ದಿದ್ದ ಹಿನ್ನೆಲೆಯಲ್ಲಿ ವಾಹನ ಸಂಚಾರಕ್ಕೆ ತೊಂದರೆಯುಂಟಾಗಿತ್ತು. ಈ ಹಿನ್ನೆಲೆಯಲ್ಲಿ ಬ್ಯಾರಿಕೇಡ್‌ಗಳನ್ನು ನಿರ್ಮಿಸಿದ್ದ ಪೊಲೀಸರು,ಒಂದು ಬ್ಯಾರಿಕೇಡ್ ನಿಂದ ಮತ್ತೊಂದು ಬ್ಯಾರಿಕೇಡ್‌ಗೆ ಹಗ್ಗವನ್ನು ಕಟ್ಟಿ ವಾಹನಗಳನ್ನು ತಡೆಹಿಡಿದ್ದರು. ಆದರೆ ಹಲವು ವಾಹನಗಳ ಮಧ್ಯೆ ಇದ್ದ ಅಂಬುಲನ್ಸ್‌ನ್ನು ಅಲ್ಲಿಯೇ ಪಕ್ಕದಲ್ಲಿ ಸಂಚರಿಸುತ್ತಿದ್ದ ಮಾಜಿ ಸೈನಿಕರೋರ್ವರು ಹಗ್ಗವನ್ನು ತೆರವುಗೊಳಿಸುವ ಮೂಲಕ ಸೇವೆಗೆ ಅನುಮಾಡಿಕೊಟ್ಟಿದ್ದರು. ಆಗ ಪೊಲೀಸರ ನಿಯಮವನ್ನು ಗಾಳಿಗೆ ತೂರಿ ಹಗ್ಗ ಬಿಚ್ಚಿದ್ದಾರೆ ಎಂಬ ಕಾರಣದಿಂದ ಮಾಜಿ ಸೈನಿಕ ನಾಗಪ್ಪ ಅವರನ್ನು ಎಸ್ಐ ಗಂಗಪ್ಪ ಅವರು ಮನಸೋ ಇಚ್ಛೆಯಿಂದ ನಿಂದಿಸಿ ಥಳಿಸಿದ್ದರು. 
 
ಈ ಎಲ್ಲಾ ದೃಶ್ಯಾವಳಿಗಳೂ ಕೂಡ ವಿಡಿಯೋ ಕ್ಯಾಮರಾಗಳಲ್ಲಿ ದಾಖಲಾಗಿದ್ದವು. ಅಲ್ಲದೆ ಈ ವಿಷಯವು ಮಾಧ್ಯಮಗಳಲ್ಲಿಯೂ ಕೂಡ ಬಿತ್ತರವಾಗಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸ್ ಅಧಿಕಾರಿ ತಪ್ಪೆಸಗಿರುವುದು ಸಾಬೀತಾಗಿದ್ದು, ಆಯುಕ್ತರು ಅಮಾನತು ಮಾಡಿದ್ದಾರೆ. 
 
ಪ್ರಕರಣವು ಮಾಧ್ಯಮಗಳಲ್ಲಿ ಬಿತ್ತರವಾಗುತ್ತಿದ್ದಂತೆ ದೌರ್ಜನ್ಯ ಎಸಗಿದ್ದ ಪೊಲೀಸ್ ಅಧಿಕಾರಿಯೂ ಕೂಡ ಸೈನಿಕನಲ್ಲಿ ಕ್ಷಮೆ ಯಾಚಿಸಿದ್ದಾರೆ ಎಂದು ತಿಳಿದು ಬಂದಿದೆ. 

Share this Story:

Follow Webdunia kannada