Select Your Language

Notifications

webdunia
webdunia
webdunia
webdunia

ಮಾಜಿ ಸೈನಿಕರ ಮೇಲೆ ಎಸ್ಐ ದೌರ್ಜನ್ಯ

ಮಾಜಿ ಸೈನಿಕರ ಮೇಲೆ ಎಸ್ಐ ದೌರ್ಜನ್ಯ
ಬೆಂಗಳೂರು , ಮಂಗಳವಾರ, 3 ಮಾರ್ಚ್ 2015 (13:49 IST)
ರಸ್ತೆಗೆ ಅಡ್ಡಲಾಗಿ ಕಟ್ಟಿದ್ದ ಹಗ್ಗವನ್ನು ಬಿಚ್ಚಿದ ಎಂಬ ಕಾರಣಕ್ಕೆ ಸಾರ್ವಜನಿಕರೋರ್ವರನ್ನು ಎಸ್ಐ ಮಹಾಶಯರೋರ್ವರು ಅವಾಚ್ಯ ಶಬ್ದಗಳಿಂದ ನಿಂದಿಸಿ, ಮನ ಬಂದಂತೆ ಥಳಿಸಿದ ಘಟನೆ ನಗರದ ಕಾವೇರಿ ಟಾಕಿಸ್‌ ಜಂಕ್ಷನ್ ಬಳಿ ನಡೆದಿದೆ.
 
ಇನ್ನು ಥಳಿಸಿದ ಪೊಲೀಸ್ ಅಧಿಕಾರಿಯನ್ನು ನಗರದ ಸದಾಶಿವನಗರ ವಿಭಾಗದ ಸಂಚಾರಿ ಪೊಲೀಸ್ ಠಾಣೆಯ ಎಸ್ಐ ರಂಗಪ್ಪ ಎನ್ನಲಾಗಿದ್ದು, ರಸ್ತೆಯಲ್ಲಿ ವಾಹನಗಳ ತಡೆಗಾಗಿ ಕಟ್ಟಿದ್ದ ಹಗ್ಗವನ್ನು ಬಿಚ್ಚಿ ಅಂಬುಲನ್ಸ್‌ವೊಂದನ್ನು ಅಪ್ಪಣೆ ಇಲ್ಲದೆ ಹೊರ ಬಿಟ್ಟರು ಎಂಬ ಕಾರಣಕ್ಕೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಮನಬಂದಂತೆ ಥಳಿಸಿದ್ದಾರೆ. ಅಲ್ಲದೆ ಅವರ ಸೈಕಲ್ಲನ್ನು ವಶಪಡಿಸಿಕೊಂಡಿದ್ದಾರೆ ಎನ್ನಲಾಗಿದೆ. 
 
ಇನ್ನು ಥಳಿಸಿಕೊಂಡ ಸಾರ್ವಜನಿಕ ವ್ಯಕ್ತಿಯು ಮಾಜಿ ಸೈನಿಕರಾಗಿದ್ದು, ಮಾಧ್ಯಮಗಳೊಂದಿಗೆ ಪ್ರತಿಕ್ರಿಯಿಸಿದ್ದಾರೆ. ಅಂಬುಲನ್ಸ್ ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಟ್ರಾಫಿಕ್‌ನಲ್ಲಿ ಬಂಧಿಯಾಗಿತ್ತು. ಆದರೆ ಅದು ಸೇವೆಗೆ ತೆರಳಿದರೆ ಹಲವರಿಗೆ ಉಪಯೋಗವಾಗಲಿದೆ. ಈ ಮೂಲಕ ಹಲವರ ಜೀವದಾನವಾಗಬಹುದು ಎಂಬ ಕಾರಣದಿಂದ ನಾನು ಹಗ್ಗವನ್ನು ಬಿಚ್ಚಿದೆ. ಇದಕ್ಕೆ ಟ್ರಾಫಿಕ್‌ನಲ್ಲಿದ್ದ ಇತರೆ ಖಾಸಗಿ ವಾಹನ ಸವಾರರೂ ಕೂಡ ಸಹಕರಿಸಿದರು. ಆದರೆ ಕರ್ತವ್ಯ ಪ್ರಜ್ಞೆಯನ್ನು ಮರೆತ ಎಸ್ಐ, ತಮ್ಮನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಥಳಿಸಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು. 
 
ಅಂಬುಲನ್ಸ್‌ಗೆ ತನ್ನ ಸೇವಾ ಕಾರ್ಯನಿರ್ವಹಣೆ ವೇಳೆ ಯಾವುದೇ ಕಾನೂನು ಕೂಡ ಅನ್ವಯವಾಗುವುದುದಿಲ್ಲ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯವೇ. ಆದರೆ ದೇಶ ಸೇವೆ ಮಾಡಿದ ಮಾಜಿ ಸೈನಿಕರಿಗೆ ಗೌರವ ನೀಡದೆ ವರ್ತಿಸಿರುವ ಎಸ್ಐ ವರ್ತನೆ ಖಂಡನೀಯ. 

Share this Story:

Follow Webdunia kannada