Daily Horoscope
✕

ಗಂಟುಮೂಟೆ ಕಟ್ಟಿ, ನುಸುಳುಕೋರರು ನಿರ್ಗಮಿಸುವ ಸಮಯ ಬಂದಿದೆ: ಮೋದಿ ಗುಡುಗು

Sampriya
ಶನಿವಾರ, 11 ಏಪ್ರಿಲ್ 2026 (16:00 IST)
ಬೆಂಗಳೂರು: ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಸರ್ಕಾರ ಬಂದರೆ, ‘ಸಬ್‌ಕಾ ಸಾಥ್, ಸಬ್‌ಕಾ ವಿಕಾಸ್’ ಮಾತ್ರವಲ್ಲ ‘ಸಬ್‌ ಕಾ ಹಿಸಾಬ್’ ಮಂತ್ರವನ್ನು ಪಾಲಿಸುತ್ತದೆ. ಅದಲ್ಲದೆ ಭಾರತಕ್ಕೆ ಒಳನುಸುಳಿದವರನ್ನು ಹೊರದಬ್ಬಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.  

ಪೂರ್ವ ವರ್ಧಮಾನ್ ಜಿಲ್ಲೆಯ ಕಟ್ವಾದಲ್ಲಿ ನಡೆದ ಚುನಾವಣಾ ಸಮಾವೇಶದಲ್ಲಿ ಮಾತನಾಡಿ ಎಚ್ಚರಿಕೆ ನೀಡಿದರು. 

ಬಂಗಾಳದಲ್ಲಿರುವ ಮತುವಾ, ನಮಸುದ್ರ ಹಾಗೂ ಎಲ್ಲಾ ನಿರಾಶ್ರಿತ ಸಮುದಾಯಗಳಿಗೆ ಗ್ಯಾರಂಟಿ ನೀಡಲು ನಾನು ಇಲ್ಲಿಗೆ
ಬಂದಿದ್ದೇನೆ. ಟಿಎಂಸಿಯ ಯಾವುದೇ ನಾಯಕನ ಕೃಪೆಯಿಂದ ನೀವು ಇಲ್ಲಿ ಇಲ್ಲ. ಸಂವಿಧಾನದ ರಕ್ಷಣೆಯಿಂದ ನೀವು ಇಲ್ಲಿ ಇದ್ದೀರಿ ಎಂದು ಹೇಳಿದರು.

ಈ ಸಮುದಾಯಗಳ ರಕ್ಷಣೆಗೆ, ನಿರಾಶ್ರಿತರಿಗೆ ಪೌರತ್ವ ಕಲ್ಪಿಸಲು ಮೋದಿ ಸಿಎಎ ಕಾನೂನು ತಂದಿದ್ದಾರೆ. ಬಂಗಾಳದಲ್ಲಿ ಬಿಜೆಪಿ ಸರ್ಕಾರ ರಚನೆಯಾದ ಕೂಡಲೇ ನಿರಾಶ್ರಿತರಿಗೆ ಸಿಎಎ ಅಡಿಯಲ್ಲಿ ಪೌರತ್ವ ನೀಡುವ ಕೆಲಸ ಮಾಡಲಾಗುವು ದು ಎಂದು ಭರವಸೆ ನೀಡಿದರು.

ಇನ್ನೂ ಬಿಜೆಪಿ ಸರ್ಕಾರ ಬಂಗಾಳವನ್ನು ಮತ್ತೊಂದು ದೊಡ್ಡ ಸಮಸ್ಯೆಯಿಂದ ಮುಕ್ತಿಗೊಳಿಸಲಿದೆ. ಭಾರತಕ್ಕೆ ಒಳನುಸುಳುವವರನ್ನು ಹೊರದಬ್ಬಲಾಗುವುದು ಎಂದು ಹೇಳಿದರು. 

‘ನಿಮಗೆ ಸೇರಿದ ಎಲ್ಲಾ ವಸ್ತುಗಳನ್ನು ಗಂಟು ಕಟ್ಟಿ ಎಂದು ನಾನು ನುಸುಳುಕೋರರಿಗೆ ಹೇಳುತ್ತೇನೆ. ನೀವು ನಿರ್ಗಮಿಸುವ ಸಮಯ ಬಂದಿದೆ’ ಎಂದು ಹೇಳಿದರು. ಈ ವೇಳೆ ಜನರಿಂದ ಹರ್ಷೋದ್ಗಾರ ಮೊಳಗಿತು.



<>

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

174 ಜನರ ಜೀವ ಉಳಿಸಿದ ಭಾರತೀಯ ಪೈಲಟ್ ಸ್ಮಿತ್‌ಗೆ ಇಸ್ರೇಲ್‌ನಿಂದ ಉನ್ನತ ಗೌರವ

ಫಾರಂ-7 ಹೆಸರಿನಲ್ಲಿ ಬಿಜೆಪಿ ಕಾರ್ಯಕರ್ತರ ವಿರುದ್ಧ ಎಫ್‌ಐಆರ್: ರಾಜ್ಯ ಸರ್ಕಾರದ ವಿರುದ್ಧ ವಿಜಯೇಂದ್ರ ವಾಗ್ದಾಳಿ

ಕೇತನ್ ಅಗರ್ವಾಲ್ ಮರ್ಡರ್ ಕೇಸ್ ಗೆ ಟ್ವಿಸ್ಟ್: ದೋಷಾರೋಪಪಟ್ಟಿಯಲ್ಲಿ ಬೆಚ್ಚಿ ಬೀಳಿಸುವ ಅಂಶ ಬಯಲು

ಎಲ್ಲರೆದುರೇ ಬ್ಯಾಂಕ್ ನಲ್ಲೇ ಮಹಿಳೆಯ ಲಕ್ಷ ಹಣ, ಪಾಸ್ ಬುಕ್ ಎಗರಿಸಿದ ಖತರ್ನಾಕ್ ಖದೀಮ: video

ಹರಿದ್ವಾರ ಹೆದ್ದಾರಿಯಲ್ಲಿ ಮಹಿಳೆಯರ ಕಾರು ಚೇಸ್ ಮಾಡಿ ಅಸಭ್ಯ ವರ್ತನೆ: Video

ಮುಂದಿನ ಸುದ್ದಿ
Show comments