ಪತ್ನಿ ಹತ್ಯೆ ಮಾಡಿ ಸೂಟ್ ಕೇಸ್ ನಲ್ಲಿ ತುಂಬಿದ್ದ ಪತಿ ಕೇಸ್: ಆತ ನೀಡಿದ ಕಾರಣ ಕೇಳಿದ್ರೆ ಶಾಕ್

Krishnaveni K
ಬುಧವಾರ, 2 ಏಪ್ರಿಲ್ 2025 (16:22 IST)
ಬೆಂಗಳೂರು: ಹುಳಿಮಾವಿನಲ್ಲಿ ಪತ್ನಿ ಹತ್ಯೆ ಮಾಡಿ ಸೂಟ್ ಕೇಸ್ ನಲ್ಲಿ ತುಂಬಿದ್ದ ಪತಿ ಕೇಸ್ ಗೆ ಟ್ವಿಸ್ಟ್ ಸಿಕ್ಕಿದೆ. ಪೊಲೀಸ್ ವಿಚಾರಣೆಯಲ್ಲಿ ಕೊಲೆಗೆ ಕಾರಣವೇನೆಂದು ಪತಿ ಶಾಕಿಂಗ್ ವಿಚಾರ ಬಾಯ್ಬಿಟ್ಟಿದ್ದಾನೆ.

ಹುಳಿಮಾವು ವ್ಯಾಪ್ತಿಯಲ್ಲಿ ಕಳೆದ ವಾರ ನಡೆದಿದ್ದ ಭೀಕರ ಕೊಲೆ ಇಡೀ ದೇಶವನ್ನೇ ಬೆಚ್ಚಿಬೀಳಿಸಿತ್ತು. ಪತ್ನಿಯನ್ನು ಕೊಲೆ ಮಾಡಿ ಪತಿ ಸೂಟ್ ಕೇಸ್ ನಲ್ಲಿ ಮೃತದೇಹ ತುಂಬಿ ತನ್ನ ತವರು ಮಹಾರಾಷ್ಟ್ರಕ್ಕೆ ಪರಾರಿಯಾಗಿದ್ದ. ಬಳಿಕ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದ.

ಇದೀಗ ಆರೋಪಿಯನ್ನು ಬೆಂಗಳೂರಿಗೆ ಕರೆತಂದು ಪೊಲೀಸರು ವಿಚಾರಣೆ ನಡೆಸುತ್ತಿದ್ದ ಪ್ರಕರಣದ ಹಿಂದಿನ ಕಾರಣವೇನೆಂದು ಆತ ಬಾಯ್ಬಿಟ್ಟಿದ್ದಾನೆ. ನನ್ನ ಪತ್ನಿ ವಿಪರೀತ ಜಗಳವಾಡುತ್ತಿದ್ದಳು. ಆ ದಿನವೂ ಜಗಳವಾಗಿ ಹತ್ಯೆ ಮಾಡಿದ್ದೇನೆ ಎಂದಿದ್ದಾನೆ.

‘ನನ್ನ ಪತ್ನಿ ನಮ್ಮ ಕುಟುಂಬದ ಯಾರ ಜೊತೆಗೂ ಹೊಂದಿಕೊಳ್ಳಲಿಲ್ಲ. ಎಲ್ಲಾ ಅವಳದ್ದೇ ನಡೆಯಬೇಕು ಎಂಬ ಹಠ. ಕೊನೆಗೆ ಬೆಂಗಳೂರಿಗೆ ಹೋಗೋಣ, ಅಲ್ಲಿಯೇ ಕೆಲಸ ಹುಡುಕಿಕೊಳ್ಳುತ್ತೇನೆ ಎಂದಳು. ಇಲ್ಲಿಗೆ ಬಂದ ಮೇಲೆ ಅವಳಿಗೆ ಕೆಲಸ ಹುಡುಕಲು ನಾನು ಸಹಾಯ ಮಾಡಿದರೂ ಮಾಡುತ್ತಿಲ್ಲ ಎಂದು ಗಲಾಟೆ ಮಾಡುತ್ತಿದ್ದಳು. ನಾನು ಮನೆಯಿಂದಲೇ ಕೆಲಸ ಮಾಡುತ್ತಿದ್ದುದಕ್ಕೂ ಆಕ್ಷೇಪಿಸುತ್ತಿದ್ದಳು. ಇದೇ ವಿಚಾರವಾಗಿ ಆಗಾಗ ನಮ್ಮ ನಡುವೆ ಜಗಳವಾಗುತ್ತಿತ್ತು.

ಆ ದಿನವೂ ಅದೇ ರೀತಿ ಜಗಳವಾಗಿತ್ತು. ಆಗ ಅವಳು ಚಾಕುವಿನಿಂದ ನನಗೆ ಹೊಡೆಯಲು ಬಂದಳು. ನನ್ನನ್ನು ನಾನು ರಕ್ಷಿಸಿಕೊಳ್ಳಲು ಚಾಕುವಿನಿಂದ ಅವಳ ಕುತ್ತಿಗೆಗೆ ಇರಿದೆ. ಅವಳು ಸಾವನಪ್ಪಿದ ನಂತರ ಏನು ಮಾಡಬೇಕೆಂದು ತೋಚಲಿಲ್ಲ. ಇದಕ್ಕೇ ಮೃತದೇಹವನ್ನು ಸೂಟ್ ಕೇಸ್ ಗೆ ತುಂಬಿ ಅಲ್ಲಿಂದ ತೆರಳಿದೆ’ ಎಂದು ಆರೋಪಿ ಪತಿ ರಾಕೇಶ್ ಹೇಳಿಕೆ ನೀಡಿದ್ದಾನೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಶಬರಿಮಲೆ ಸುತ್ತಲಿನ ವಿವಾದ ಭಕ್ತರಿಗೆ ಯಾವುದೇ ಪರಿಣಾಮ ಬೀರಿಲ್ಲ: ಟಿಡಿಬಿ

ಪಾಕ್‌ನ ಮೂಲೆ ಮೂಲೆಗೂ ನುಗ್ಗುವ ಸಾಮರ್ಥ್ಯ ಭಾರತದ ಬ್ರಹ್ಮೋಸ್ ಕ್ಷಿಪಣಿಗಿದೆ: ರಾಜನಾಥ ಸಿಂಗ್

ಆರ್ ಎಸ್ಎಸ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಕ್ಕೆ ಸಸ್ಪೆಂಡ್: ಅಧಿಕಾರಿ ಬಗ್ಗೆ ತೇಜಸ್ವಿ ಸೂರ್ಯ ಬಿಗ್ ನಿರ್ಧಾರ

ನೊಬೆಲ್ ಪ್ರಶಸ್ತಿ ವಿಜೇತ ಚೀನಾದ ಶತಾಯುಷಿ ಚೆನ್ ನಿಂಗ್ ಯಾಂಗ್ ಇನ್ನಿಲ್ಲ

ಮತಕ್ಕಾಗಿ ಮುಸ್ಲಿಮರನ್ನು ನಿಂದಿಸುವ ಬಿಜೆಪಿ ನಾಯಕರಿಗೆ ಮುಸ್ಲಿಂ ಅಳಿಯನಿದ್ದಾನೆ: ಭೂಪೇಶ್‌ ಬಾಘೇಲ್‌

ಮುಂದಿನ ಸುದ್ದಿ
Show comments