Webdunia - Bharat's app for daily news and videos

Install App

ಕೀಳು ಪ್ರಚಾರಕ್ಕಾಗಿ ಶೋಭಾ ಕರಂದ್ಲಾಜೆ ಆರೋಪ: ಸಚಿವ ರೋಶನ್ ಬೇಗ್

Webdunia
ಶುಕ್ರವಾರ, 4 ನವೆಂಬರ್ 2016 (15:52 IST)
ರುದ್ರೇಶ್ ಹತ್ಯೆಯಲ್ಲಿ ತಮ್ಮ ಕೈವಾಡವಿದೆ ಎಂದು ಆರೋಪಿಸಿ ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ಕೀಳು ರಾಜಕೀಯ ಮಾಡುತ್ತಿದ್ದಾರೆ. ಹತ್ಯೆಯಲ್ಲಿ ಯಾವುದೇ ರೀತಿಯ ತಮ್ಮ ಕೈವಾಡವಿಲ್ಲ ಎಂದು ಸಚಿವ ರೋಷನ್ ಬೇಗ್ ಹೇಳಿದ್ದಾರೆ.
 
ಶಿವಾಜಿ ನಗರ ವಿಧಾನಸಭೆ ಕ್ಷೇತ್ರದಲ್ಲಿ ನನಗೆ ಎಲ್ಲಾ ಸಮುದಾಯದ ಜನರೊಂದಿಗೆ ಸಂಪರ್ಕವಿದೆ. ರುದ್ರೇಶ್ ಸಣ್ಣಮಟ್ಟದ ಆರೆಸ್ಸೆಸ್ ಕಾರ್ಯಕರ್ತನಾಗಿದ್ದ. ಆತನ ಹತ್ಯೆಯ ಹಿಂದಿರುವ ಆರೋಪಿಗಳನ್ನು ಈಗಾಗಲೇ ಬಂಧಿಸಲಾಗಿದೆ ಎಂದರು.
 
ಸಿಬಿಐ, ಎನ್‌ಐಎ ಸೇರಿದಂತೆ ಯಾವುದೇ ಉನ್ನತ ಮಟ್ಟದ ರೀತಿಯ ತನಿಖೆಗೆ ಸಿದ್ದನಾಗಿದ್ದೇನೆ. ಶಿವಾಜಿ ನಗರದಲ್ಲಿ ಕೋಮುಗಲಭೆ ಸೃಷ್ಟಿಸಲು ಬಿಜೆಪಿ ಸ್ಕೇಚ್ ಹಾಕಿರುವುದು ನಮಗೆ ಗೊತ್ತಿದೆ. ಮುಂಬರುವ ಚುನಾವಣೆಯಲ್ಲಿ ಬಿಜೆಪಿಗೆ ಜನತೆ ತಕ್ಕ ಪಾಠ ಕಲಿಸಲಿದ್ದಾರೆ ಎಂದರು.

ಶೋಭಾ ಕರಂದ್ಲಾಜೆ ಕೇವಲ ಪೊಳ್ಳು ಪ್ರಚಾರಕ್ಕಾಗಿ ಆರೋಪಗಳನ್ನು ಮಾಡುತ್ತಿದ್ದಾರೆ. ಶಿವಾಜಿ ನಗರ ಕ್ಷೇತ್ರದಲ್ಲಿ ಮುಸ್ಲಿಂ ಸಮುದಾಯ ಮತ್ತು ಹಿಂದೂ ಸಮುದಾಯ ಸಹೋದರತೆಯಿಂದ ಬಾಳುತ್ತಿದೆ. ಅದನ್ನು ಸಹಿಸಲು ಬಿಜೆಪಿ ಮುಖಂಡರಿಗೆ ಸಾಧ್ಯವಾಗುತ್ತಿಲ್ಲ ಎಂದು ಸಚಿವ ರೋಷನ್ ಬೇಗ್ ತಿರುಗೇಟು ನೀಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಪುರಿ ದೇವಸ್ಥಾನ ಕಾಲ್ತುಳಿತ: ಜಿಲ್ಲಾಧಿಕಾರಿ ಎಸ್‌ಪಿಯನ್ನೇ ವರ್ಗಾವಣೆ ಮಾಡಿದ ಸರ್ಕಾರ

88ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷರಾಗಿ ಬಾನು ಪುಪ್ತಾಕ್‌

ಜೂನ್ 23ರಂದು ಇರಾನ್ ಜೈಲಿನ ಮೇಲೆ ಇಸ್ರೇಲ್ ದಾಳಿಯಲ್ಲಿ ಅಧಿಕಾರಿಗಳು ಸೇರಿ 71ಮಂದಿ ಸಾವು

ಅಶೋಕ್ ಜ್ಯೋತಿಷ್ಯ ಕಲಿತಿದ್ದರೆ ನನ್ನ ಭವಿಷ್ಯ ಕೇಳಬೇಕಿತ್ತು: ಡಿಕೆ ಶಿವಕುಮಾರ್‌

ಪುರಿ ಕಾಲ್ತುಳಿತ ದುರಂತ, ದೊಡ್ಡ ಎಚ್ಚರಿಕೆ: ರಾಹುಲ್ ಗಾಂಧಿ ಸಂತಾಪ

ಮುಂದಿನ ಸುದ್ದಿ
Show comments