Select Your Language

Notifications

webdunia
webdunia
webdunia
webdunia

ಬೆತ್ತಲೆಯಾಗಿ ಸಿಕ್ಕಿ ಬಿದ್ದ ಪ್ರಶ್ನೆಪತ್ರಿಕೆ ಸೋರಿಕೆ ಕಿಂಗ್‌ಪಿನ್ ಶಿವಕುಮಾರ್

ಬೆತ್ತಲೆಯಾಗಿ ಸಿಕ್ಕಿ ಬಿದ್ದ ಪ್ರಶ್ನೆಪತ್ರಿಕೆ ಸೋರಿಕೆ ಕಿಂಗ್‌ಪಿನ್ ಶಿವಕುಮಾರ್
ಬೆಂಗಳೂರು , ಮಂಗಳವಾರ, 3 ಮೇ 2016 (16:18 IST)
ಹಲವು ದಿನಗಳಿಂದ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ತಲೆ ಮರೆಸಿಕೊಂಡಿದ್ದ ಪಿಯುಸಿ ಪ್ರಶ್ನೆ ಪತ್ರಿಕೆ ಸೋರಿಕೆ ಕಿಂಗ್‌ಪಿನ್ ಶಿವಕುಮಾರ್‌ಗಿದ್ದ ಹೆಣ್ಣುಮಕ್ಕಳ ಚಾಳಿಯೇ ಆತನನ್ನು ಬಂಧಿಸಲು ನೆರವಾಯಿತು ಎಂದು ತಿಳಿದು ಬಂದಿದೆ. ಆತನ ಗರ್ಲ್ ಫ್ರೆಂಡ್ ನೀಡಿದ ಮಾಹಿತಿಯಿಂದಲೇ ಆತನ ಬಂಧನವಾಗಿದೆ ಎಂದು ಮೂಲಗಳು ತಿಳಿಸಿವೆ. 

ಬನ್ನೇರುಘಟ್ಟ ರಸ್ತೆಯ ಗಾರೇಪಾಳ್ಯದಲ್ಲಿನ ನಿರ್ಮಾಣ ಹಂತದ ಕಟ್ಟಡದಲ್ಲಿ ನಿನ್ನೆ ರಾತ್ರಿ ಆತ ಸಿಬಿಐ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದ ಸಮಯದಲ್ಲಿ ಆತ ಬೆತ್ತಲಾಗಿ ಇದ್ದ. ತನ್ನ ಗರ್ಲ್‌ಫ್ರೆಂಡ್ ಜತೆಗಿದ್ದ ಆತನ ಮೈಮೇಲೆ ತುಂಡು ಬಟ್ಟೆ ಕೂಡ ಇರಲಿಲ್ಲ ಎಂದು ತಿಳಿದು ಬಂದಿದೆ.
 
ಟೊಮೇಟೋ ಟೋಎಂಬ ಕೋಡ್ ವರ್ಡ್‌ನಿಂದ ಗುರುತಿಸಿಕೊಳ್ಳುತ್ತಿದ್ದ ಆತನಿಗೆ 10ರಿಂದ 12 ಗರ್ಲ್‍ಫ್ರೆಂಡ್‌ಗಳಿದ್ದು ಪ್ರತಿದಿನ ಎರಡರಿಂದ ಮೂರು ಕಡೆ ಜಾಗ ಬದಲಾಯಿಸುತ್ತಿದ್ದ. 66 ವರ್ಷದ ವೃದ್ಧನಾದರೂ ಹೆಣ್ಣುಮಕ್ಕಳ ಚಾಳಿಯನ್ನು ಬಿಡದ ಆತ ಗರ್ಲ್‌ಫ್ರೆಂಡ್‌ಗಳ ಮನೆಯಲ್ಲಿಯೇ ತಂಗುತ್ತಿದ್ದ. ಅವರ ಮೊಬೈಲ್ ಬಳಸುತ್ತಿದ್ದ ಮತ್ತು ಅವರಿಂದಲೇ ಹಣವನ್ನು ತರಿಸಿಕೊಳ್ಳುತ್ತಿದ್ದ ಎಂದು ತಿಳಿದು ಬಂದಿದೆ. ಅವನ ಈ ಚಾಳಿಯ ಬಗ್ಗೆ ತಿಳಿದುಕೊಂಡ ಸಿಬಿಐ ಅಧಿಕಾರಿಗಳು ಆತನನ್ನು ಪತ್ತೆ ಹಚ್ಚುವಲ್ಲಿ ಸಫಲರಾಗಿದ್ದಾರೆ.
 
ಪೊಲೀಸರು ಬಂಧಿಸಿದಾಗ ಆತನ ಜತೆ ಒಂದು ಬ್ಯಾಗ್ ಇದ್ದು ಅದರಲ್ಲಿ ಕೇವಲ 50,000 ರೂಪಾಯಿ, 2 ಜತೆ ಬಟ್ಟೆಗಳಿದ್ದವು ಎಂದು ತಿಳಿದು ಬಂದಿದೆ. 

Share this Story:

Follow Webdunia kannada

ಮುಂದಿನ ಸುದ್ದಿ

ಸಚಿವ ಚಿಂಚನಸೂರ್ ಮೇಲೆ ಹಲ್ಲೆ ಯತ್ನ