ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದ ಶಿರೂರು ಭೂ ಕುಸಿತದ ವೇಳೆ ಗಂಗಾವಳಿ ನದಿಯಲ್ಲಿ ಮುಳುಗಡೆಯಾದ ಕೇರಳ ಮೂಲದ ಅರ್ಜುನನ ಲಾರಿ ಕೊನೆಗೂ ಪತ್ತೆಯಾಗಿದೆ.
ಜುಲೈ 16 ರಂದು ಭೂ ಕುಸಿತ ಸಂಭವಿಸಿದ ಬಳಿಕ ಕೇರಳದ ಅರ್ಜುನ್ ಚಲಾಯಿಸುತ್ತಿದ್ದ ಟ್ರಕ್ ಗಂಗಾವಳಿ ನದಿಯಲ್ಲಿ ಮುಳುಗಡೆಯಾಗಿದೆ. ಸತತ 2 ತಿಂಗಳಿನಲ್ಲಿ ಅರ್ಜುನನ ಪತ್ತೆಗೆ ಮೂರನೇ ಹಂತದ ಕಾರ್ಯಚರಣೆ ನಡೆಸಲಾಗುತ್ತಿದೆ.
ಲಾರಿ ಚಾಲಕ ಅರ್ಜುನ ಪತ್ತೆಗೆ ಮುಳುಗು ತಜ್ಞ ಈಶ್ವರ ಮಲ್ಪೆ ಶೋಧ ಕಾರ್ಯ ನಡೆಸುತ್ತಿದ್ದಾಗ ಲಾರಿ ಪತ್ತೆಯಾಗಿದೆ. ಅದಲ್ಲದೆ ಲಾರಿಯಲ್ಲಿದ್ದ ಮರದ ತುಂಡುಗಳು ಕೂಡಾ ಪತ್ತೆಯಾಗಿದೆ. ಆದರೆ ಅರ್ಜುನನ ಪತ್ತೆಯಾಗಿಲ್ಲ.
ಈಗ ಟ್ರಕ್ ಗುಡ್ಡ ಕುಸಿತಗೊಂಡ ಜಾಗದ ಬಳಿಯೇ ಸಿಕ್ಕಿ ಬಿದ್ದಿದೆ. ಟ್ರಕ್ ಮೇಲೆ ಸಾಕಷ್ಟು ಕಲ್ಲು ಮತ್ತು ಮಣ್ಣುಗಳಿವೆ. ಹೀಗಾಗಿ ಮಣ್ಣು ಮತ್ತು ಕಲ್ಲುಗಳನ್ನು ತೆಗೆದು ಟ್ರಕ್ ಮೇಲಕ್ಕೆ ಎತ್ತಲು ಸಿದ್ಧತೆ ನಡೆಯುತ್ತಿದೆ.<>