Select Your Language

Notifications

webdunia
webdunia
webdunia
webdunia

ಶೆಟ್ಟರ್ ಸಿಎಂ ಆಗಿದ್ದಾಗಲೂ ಕೂಡ ಲ್ಯಾಬ್ ತೆರೆದಿರಲಿಲ್ಲ: ಖಾತೆ

ಶೆಟ್ಟರ್ ಸಿಎಂ ಆಗಿದ್ದಾಗಲೂ ಕೂಡ ಲ್ಯಾಬ್ ತೆರೆದಿರಲಿಲ್ಲ: ಖಾತೆ
ಬೆಂಗಳೂರು , ಬುಧವಾರ, 4 ಮಾರ್ಚ್ 2015 (19:13 IST)
ಹೆಚ್1ಎನ್1 ರೋಗಕ್ಕೆ ಸಂಬಂಧಿಸಿದಂತೆ ಮಾತನಾಡುತ್ತಿದ್ದ ರಾಜ್ಯದ ಆರೋಗ್ಯ ಸಚಿವ ಯು.ಟಿ ಖಾದರ್, ಶೆಟ್ಟರ್ 2009-10ರಲ್ಲಿ ರಾಜ್ಯದ ಮುಖ್ಯಮಂತ್ರಿಯಾಗಿದ್ದರು. ಆ ಅವಧಿಯಲ್ಲಿಯೂ ಹೆಚ್1ಎನ್1 ಇತ್ತು. ಆದರೆ ಆಗ ಒಂದೇ ಒಂದು ಲ್ಯಾಬ್‌ನ್ನೂ ಕೂಡ ತೆರೆದಿರಲಿಲ್ಲ ಎಂದು ವಿಧಾನಸಭಾ ವಿರೋಧ ಪಕ್ಷ ನಾಯಕ ಜಗದೀಶ್ ಶೆಟ್ಟರ್ ವಿರುದ್ಧ ವಾಗ್ದಾಳಿ ನಡೆಸಿದರು. 
 
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯದ ವಿರೋಧ ಪಕ್ಷದ ನಾಯಕರಾಗಿರುವ ಶೆಟ್ಟರ್, ಕಳೆದ 2009-10ನೇ ಸಾಲಿನಲ್ಲಿ ರಾಜ್ಯದ ಮುಖ್ಯಮಂತ್ರಿಯಾಗಿದ್ದರು. ರಾಜ್ಯದಲ್ಲಿ ಆಗಲೂ ಕೂಡ ಹೆಚ್1ಎನ್1 ಇತ್ತು. ಆದರೆ ಅವರ ಕಾಲಾವಧಿಯಲ್ಲಿ ಮುಖ್ಯಮಂತ್ರಿಯಾಗಿದ್ದರೂ ಕೂಡ ರೋಗ ತಪಾಸಣೆಗಾಗಿ ಒಂದೇ ಒಂದು ಪರೀಕ್ಷಾ ಕೊಠಡಿಯನ್ನೂ ಕೂಡ ತೆರೆದಿರಲಿಲ್ಲ. ಆಧರೆ ಪ್ರಸ್ತುತ ಸರ್ಕಾರದ ಕಾರ್ಯ ವೈಖರಿ ಬಗ್ಗೆ ಸುಮ್ಮ ಸುಮ್ಮನೆ ಕ್ಯಾತೆ ತೆಗೆಯುತ್ತಿದ್ದಾರೆ ಎಂದು ಶೆಟ್ಟರ್ ವಿರುದ್ಧ ವಾಗ್ದಾಳಿ ನಡೆಸಿದರು. 
 
ಬಳಿಕ, ಹೆಚ್1ಎನ್1 ರೋಗದ ಬಗ್ಗೆ ಮುಂದಿನ ನವಂಬರ್‌ ತಿಂಗಳಿನಲ್ಲಿ ಜಾಗೃತಿ ಆಂದೋಲನವನ್ನು ಹಮ್ಮಿಕೊಂಡಿದ್ದು, ರೋಗದ ತಡೆ ಹಾಗೂ ಚಿಕಿತ್ಸೆ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಗುವುದು. ಅಲ್ಲದೆ ರೋಗದ ತಪಾಸಣೆಗಾಗಿ ನಿರಂತರವಾಗಿ ಕಾರ್ಯ ನಿರ್ವಹಿಸುವಂತಹ 5 ಲ್ಯಾಬ್‌ಗಳನ್ನು ಆರಂಭಿಸಲಾಗುವುದು ಎಂದರು. 
 
ಇನ್ನು ಈ ರೋಗದ ಚಿಕಿತ್ಸೆಗಾಗಿ ಪ್ರಸ್ತುತ 2500 ರೂ. ಗಳನ್ನು ನಿಗಧಿಪಡಿಸಲಾಗಿತ್ತು. ಆದರೆ ಮುಂದಿನ ದಿನಗಳಲ್ಲಿ ಉಚಿತ ಚಿಕಿತ್ಸೆ ನೀಡುವ ಬಗ್ಗೆಯೂ ಕೂಡ ಚಿಂತನೆ ನಡೆಸಲಾಗುತ್ತಿದೆ ಎಂದರು. 
 
ಇನ್ನು ಚಿಕಿತ್ಸೆಗಾಗಿ ಸಾರ್ವಜನಿಕರಿಂದ ಸರ್ಕಾರ ನಿಗಧಿಪಡಿಸಿರುವ ಹಣಕ್ಕಿಂತಲೂ ಹೆಚ್ಚಿನ ಫೀಸ್‌ನ್ನು ಪಡೆಯುತ್ತಿರುವ ಹಿನ್ನೆಲೆಯಲ್ಲಿ ನಗರದ ಕ್ಲುಮ್ಯಾಕ್ಸ್ ಮತ್ತು ಪೋರ್ಟಿಸ್ ಆಸ್ಪತ್ರೆಗೆ ನೋಟಿಸ್ ನೀಡಲಾಗಿದ್ದು, ಸೂಕ್ತವಾಗಿ ಉತ್ತರಿಸುವಂತೆ ಸೂಚಿಸಲಾಗಿದೆ ಎಂದರು. 

Share this Story:

Follow Webdunia kannada