Webdunia - Bharat's app for daily news and videos

Install App

ಮರೆಮಾಚಿದ ಆಧಾರ್ ಕಾರ್ಡ್ ಹಂಚಿಕೊಳ್ಳಿ: ಮಾರ್ಗಸೂಚಿ ವಾಪಸ್ ಪಡೆದ ಕೇಂದ್ರ

Webdunia
ಭಾನುವಾರ, 29 ಮೇ 2022 (20:08 IST)
ಆಧಾರ್ ಕಾರ್ಡ್ ದುರುಪಯೋಗ ತಡೆಗಟ್ಟಲು ನಾಗರಿಕರು ಸಂಪೂರ್ಣ ಮಾಹಿತಿ ಇರುವ ಆಧಾರ್ ಕಾರ್ಡ್ ಕಾಪಿ ಹಂಚಿಕೊಳ್ಳುವ ಬದಲು ಮಸುಕು ಮಾಡಿದ ಆಧಾರ್ ಕಾರ್ಡ್ಗಳನ್ನು ಹಂಚಿಕೊಳ್ಳಿ ಎಂದು ಮಾರ್ಗಸೂಚಿ ಹೊರಡಿಸಿದ್ದ ಕೇಂದ್ರ ಸರಕಾರ ಇದೀಗ ತನ್ನ ಸಲಹೆಯನ್ನು ವಾಪಸ್ ಪಡೆದಿದೆ.
ಆಧಾರ್ ಕಾರ್ಡ್ ಗಳ ದುರ್ಬಳಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಆಧಾರ್ ಕಾರ್ಡ್ ಪ್ರಾಧಿಕಾರ ಸೂಚನೆ ನೀಡಿದ್ದು, ಆಧಾರ್ ಕಾರ್ಡ್ನ ಪ್ರತಿಗಳನ್ನು ಯಾವುದೇ ಸಂಸ್ಥೆಗಳೊಂದಿಗೆ ಹಂಚಿಕೊಳ್ಳಬೇಡಿ. ಏಕೆಂದರೆ ಅದು ದುರುಪಯೋಗವಾಗುವ ಸಾಧ್ಯತೆ ಇದೆ. ಅದರ ಬದಲು ಆಧಾರ್ ಕಾರ್ಡ್ನ ಕೊನೆಯ 4 ಅಂಕೆಗಳನ್ನು ಮಾತ್ರವೇ ಕಾಣುವಂತೆ ಪೂರ್ಣ ಮಾಹಿತಿ ಮರೆಮಾಚಿದ ಆಧಾರ್ ಅನ್ನು ಮಾತ್ರವೇ ಬಳಸಿ ಎಂದು ಕೇಂದ್ರ ಸರ್ಕಾರ ಭಾನುವಾರ ಸಲಹೆ ನೀಡಿದೆ.
ಕೇಂದ್ರ ಸರ್ಕಾರದ ಸಲಹೆಯೊಂದಿಗೆ, ಪರವಾನಗಿ ಪಡೆಯದ ಖಾಸಗಿ ಸಂಸ್ಥೆಗಳು, ಚಲನಚಿತ್ರ ಮಂದಿರಗಳು ಹಾಗೂ ಹೋಟೆಲ್ಗಳಲ್ಲಿ ಆಧಾರ್ ಕಾರ್ಡ್ ಪ್ರತಿಗಳನ್ನು ಸಂಗ್ರಹಿಸಲು ಹಾಗೂ ಇರಿಸಿಕೊಳ್ಳಲು ಅನುಮತಿ ಇಲ್ಲ ಎಂದು ಕೇಂದ್ರ ಎಲೆಕ್ಟ್ರಾನಿಕ್ಸ್ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವಾಲಯ ತಿಳಿಸಿದೆ.
ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ(ಯುಐಡಿಐಎಐ)ದಿಂದ ಪರವಾನಗಿ ಪಡೆದ ಸಂಸ್ಥೆಗಳು ಮಾತ್ರವೇ ಜನರ ಗುರುತನ್ನು ತಿಳಿಯಲು ಆಧಾರ್ ಬಳಸಬಹುದು. ಜನರು ತಮ್ಮ ಆಧಾರ್ ಕಾರ್ಡ್ ಪ್ರತಿಯನ್ನು ಹಂಚಿಕೊಳ್ಳುವ ಮೊದಲು ಆ ಸಂಸ್ಥೆ ಯುಐಡಿಐಎಐ ನಿಂದ ಪರವಾನಗಿ ಪಡೆದಿದೆಯೇ ಎಂಬುದನ್ನು ಪರಿಶೀಲಿಸಲು ಸರ್ಕಾರ ನಾಗರಿಕರಲ್ಲಿ ಕೇಳಿಕೊಂಡಿದೆ.
 ಜನರು ತಮ್ಮ ಆಧಾರ್ ಕಾರ್ಡ್ಗಳನ್ನು ಡೌನ್ಲೋಡ್ ಮಾಡಲು ಇಂಟರ್ನೆಟ್ ಕೆಫೆಗಳಲ್ಲಿ ಸಾರ್ವಜನಿಕ ಕಂಪ್ಯೂಟರ್ಗಳನ್ನು ಬಳಸದಂತೆ ಎಚ್ಚರಿಸಿದೆ. ಒಂದು ವೇಳೆ ಬಳಸಿದರೂ ಡೌನ್ಲೋಡ್ ಮಾಡಿದ ಎಲ್ಲಾ ಇ-ಆಧಾರ್ ಪ್ರತಿಗಳನ್ನು ಶಾಶ್ವತವಾಗಿ ಅಳಿಸಲು ಸೂಚನೆ ನೀಡಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಕೃಷ್ಣ ಪರಮಾತ್ಮ ಐದು ಗ್ರಾಮ ಕೇಳಿದಂತೆ ನಮ್ಮದು ಐದು ಬೇಡಿಕೆಗಾಗಿ ಪಾದಯಾತ್ರೆ: ಸಿಟಿ ರವಿ

ಕೆಪಿಎಸ್‌ಸಿ ಹಗರಣ: ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಸಲ್ಲಿಸಿದ್ದ ಜಾಮೀನು ಅರ್ಜಿ ವಜಾ

ನೈಸ್ ಪ್ರಾಜೆಕ್ಟ್‌ ವಿಚಾರ: ದೇವೇಗೌಡರು ಬೇಕಿದ್ರೆ ಕೋರ್ಟ್‌ ಹೋಗಲಿ, ಡಿಕೆ ಶಿವಕುಮಾರ್ ಸವಾಲು

ದುರ್ಗಾ ಪೂಜೆಯ ಸಮಯದಲ್ಲಿ ಮಾಂಸಾಹಾರ ಸೇವನೆ ವೈಯಕ್ತಿಕ ಆಯ್ಕೆ: ಬಿಜೆಪಿ

ರಷ್ಯಾದಲ್ಲಿ ಪತಿ ಅರೆಸ್ಟ್‌, ಬಿಡುಗಡೆಗಾಗಿ ಮೋದಿ ಸಹಾಯ ಕೋರಿದ ಪತ್ನಿ

ಮುಂದಿನ ಸುದ್ದಿ
Show comments