Select Your Language

Notifications

webdunia
webdunia
webdunia
webdunia

'ಬಿಸಿಲು ಕುದುರೆ' ಸಹನಟಿಗೆ ಲೈಂಗಿಕ ಕಿರುಕುಳ: ದೂರು ದಾಖಲು

'ಬಿಸಿಲು ಕುದುರೆ' ಸಹನಟಿಗೆ ಲೈಂಗಿಕ ಕಿರುಕುಳ: ದೂರು ದಾಖಲು
ಶಿವಮೊಗ್ಗ , ಬುಧವಾರ, 27 ಮೇ 2015 (12:45 IST)
ಕನ್ನಡ ಚಲನಚಿತ್ರ ರಂಗದಲ್ಲಿ ಮತ್ತೊಂದು ಅಸಭ್ಯ ಸುದ್ದಿ ಹಬ್ಬುತ್ತಿದ್ದು, ಬಿಸಿಲು ಕುದುರೆ ಚಿತ್ರದ ಸಹನಟಿಯೋರ್ವರು ಚಿತ್ರ ನಿರ್ಮಾಪಕರೋರ್ವರು ನನ್ನೊಂದಿಗೆ ಅಸಭ್ಯವಾಗಿ ನಡೆದುಕೊಂಡು ಅತ್ಯಾಚಾರಕ್ಕೆ ಯತ್ನಿಸಿದ್ದಾರೆ ಎಂದು ಆರೋಪಿಸಿ ಇಲ್ಲಿನ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. 
 
ದೂರು ದಾಖಲಿಸಿರುವ ಸಹನಟಿ ಹಾಸನ ಮೂಲದವರಾಗಿದ್ದು, ಇದೇ ಮೊದಲ ಬಾರಿಗೆ ಚಿತ್ರದಲ್ಲಿ ನಟಿಸುವ ಅವಕಾಶ ಪಡೆದ್ದರು ಎನ್ನಲಾಗಿದೆ. ಇನ್ನು ಈ ಘಟನೆಯು ಕಳೆದ ಮೇ 2ರ ರಾತ್ರಿ ನಡೆದಿದ್ದು, ಮೇ 22ರಂದು ದೂರು ದಾಖಲಿಸಿರುವುದಾಗಿ ಸಂತ್ರಸ್ತೆ ತಿಳಿಸಿದ್ದಾಳೆ. 
 
ಸಂತ್ರಸ್ತ ಮಹಿಳೆಯು ಪೊಲೀಸರಿಗೆ ನೀಡಿರುವ ದೂರಿನಲ್ಲಿ ನಮ್ಮ ಚಿತ್ರ(ಬಿಸಿಲು ಕುದುರೆ)ದ ನಿರ್ಮಾಪಕರು ಮೇ 2ರಂದು ನನ್ನ ಬಳಿ ಸುಳಿದು ಕೈ ಎಳೆಯುವ ಮೂಲಕ ಅಸಭ್ಯವಾಗಿ ವರ್ತಿಸಿದ್ದಲ್ಲದೆ, ಲೈಂಗಕ ತೃಷೆಗೆ ಸಹಕರಿಸುವಂತೆ ಪುಸಲಾಯಿಸಿ ಮಾನಸಿಕ ಹಿಂಸೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಅವರ ವಿರುದ್ಧ ಎಫ್ಐಆರ್ ದಾಖಲಿಸದೆ ಕೇವಲ ಕರೆಸಿ ವಿಚಾರಣೆ ನಡೆಸಿ ಎಂದು ಪೊಲೀಸರಲ್ಲಿ ಮನವಿ ಮಾಡಿದ್ದಾಳೆ. 
 
ಇನ್ನು ಈ ಸಂಬಂಧ ಪ್ರತಿಕ್ರಿಯಿಸಿರುವ ಆರೋಪಿ ನಿರ್ಮಾಪಕ ಕುಮಾರ್, ನನಗೆ ಅವರು ಯಾರೆಂಬುದು ತಿಳಿದೇ ಇಲ್ಲ. ಅವರನ್ನು ನೋಡಿಯೇ ಇಲ್ಲ. ನಾನು ಹಾಗೆ ಮಾಡಿಯೂ ಇಲ್ಲ. ಅಲ್ಲದೆ ಚಿತ್ರದ ನಿರ್ಮಾಪಕ ಕೂಡ ನಾನಲ್ಲ. ಚಿತ್ರಕ್ಕೆ ನನ್ನ ಸ್ನೇಹಿತ ಮಂಜುನಾಥ್ ನಿರ್ಮಾಪಕರಾಗಿದ್ದಾರೆ. ಅವರು ಮಾಡಿತ್ತಿರುವ ಆರೋಪಗಳೆಲ್ಲವೂ ಶುದ್ಧ ಸುಳ್ಳು. ನಾನು ನಿರ್ಮಾಪಕರ ಸ್ನೇಹಿತ ಎಂಬ ಕಾರಣಕ್ಕೆ ಸುಳ್ಳು ಆರೋಪ ಮಾಡಿದ್ದಾರೆ. ಅವರು ಯಾರೆಂದು ನನಗೆ ಗೊತ್ತೇ ಇಲ್ಲ ಎಂದು ಆರೋಪವನ್ನು ಅಲ್ಲಗಳೆದಿದ್ದಾರೆ.  
 
ಇನ್ನು ಈ ಸಂಬಂಧ ಸಂತ್ರಸ್ತ ಮಹಿಳೆಯ ಪತಿ ಕೂಡ ಪ್ರತಿಕ್ರಿಯಿಸಿದ್ದು, ನಮ್ಮ ಪರಿಚಯಸ್ಥರು ನಿರ್ಮಾಪಕರೆಂದು ಆರೋಪಿ ಕುಮಾರ್ ಅವರನ್ನು ಭೇಟಿ ಮಾಡಿಸಿದ್ದರು. ಆಗ ಚಿತ್ರದ ನಿರ್ಮಾಪಕರು ನಾನೇ ಎಂಬುದಾಗಿ ಕುಮಾರ್ ಅವರೇ ಪರಿಚಯ ಮಾಡಿಕೊಂಡಿದ್ದರು. ಆದರೆ ಪ್ರಸ್ತುತ ನನಗೆ ನೀವು ಯಾರೆಂದು ತಿಳಿದೇ ಇಲ್ಲ ಎನ್ನುತ್ತಿದ್ದಾರೆ. ಆದರೂ ಮತ್ತೊಬ್ಬ ಹೆಣ್ಣು ಮಗಳಿಗೆ ಈ ರೀತಿ ಆಗಬಾರದು ಎಂಬ ಕಾರಣಕ್ಕೆ ದೂರು ದಾಖಲಿಸಿದ್ದೇವೆ ಎಂದಿದ್ದಾರೆ.
 
ಇನ್ನು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೂ ಕೂಡ ದೂರು ನೀಡಲಾಗಿದ್ದು, ಇಂದು ಮಧ್ಯಾಹ್ನ 12 ಗಂಟೆಗೆ ಸಭೆ ಕರೆಯಲಾಗಿದೆ. ಅಲ್ಲಿ ಈ ಸಂಬಂಧ ಚರ್ಚಿಸಲಿದ್ದಾರೆ ಎಂದು ತಿಳಿದು ಬಂದಿದೆ.    
 
ಇತ್ತೀಚೆಗೆ ನಿರ್ಮಾಪಕರ ಹೆಸರಿನಲ್ಲಿ ಪರಿಚಯ ಮಾಡಿಕೊಂಡು ಸಿನಿಮಾದಲ್ಲಿ ಅವಕಾಶ ಕೊಡುವುದಾಗಿ ಕರೆಸಿಕೊಂಡಿದ್ದ ಬೆಂಗಳೂರಿನ ಕೋರಮಂಗಲ ಮೂಲದ ಇಬ್ಬರು ವ್ಯಕ್ತಿಗಳು ಮುಂಬೈ ಮೂಲದ ಕಿರುತೆರೆ ನಟಿಯೋರ್ವಳ ಮೇಲೆ ಅತ್ಯಾಚಾರ ಎಸಗಿದ್ದರು. ಇದು ಚಿತ್ರರಂಗಕ್ಕೆ ಕಪ್ಪು ಚುಕ್ಕೆಯಾಗಿ ಪರಿಣಮಿಸಿತ್ತು. ಆದರೆ ಈ ಕಲೆ ಮಾಸುವ ಮುನ್ನವೇ ನಡೆದಿರುವ ಈ ಘಟನೆ ಹೇಯ ಎನಿಸುವಂತಿದೆ.

Share this Story:

Follow Webdunia kannada