Webdunia - Bharat's app for daily news and videos

Install App

ರಾಮಚಂದ್ರಾಪುರ ಮಠದ ಶ್ರೀಗಳ ವಿರುದ್ಧ ಎಫ್‌ಐಆರ್ ದಾಖಲು

Webdunia
ಬುಧವಾರ, 27 ಆಗಸ್ಟ್ 2014 (18:42 IST)
ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀಯ ಸ್ವಾಮೀಜಿಯ ವಿರುದ್ಧ ಬುಧವಾರ ಎಫ್‌ಐಆರ್ ದಾಖಲಿಸಲಾಗಿದೆ.
 
ಶ್ರೀಗಳ ವಿರುದ್ಧ ಐಪಿಸಿ ಸೆಕ್ಷನ್ 506, 354ಎ ಅಡಿಯಲ್ಲಿ ಎಫ್‌ಐರ್ ದಾಖಲಿಸಿಲಾಗಿದ್ದು, ಈ ಎರಡು ಸೆಕ್ಷನ್‌ಗಳು ಜಾಮೀನು ರಹಿತವಾಗಿವೆ. ಪ್ರಕರಣವನ್ನು ದಾಖಲಿಸಿಕೊಂಡಿರುವ ಬನಶಂಕರಿ ಠಾಣಾ ಪೊಲೀಸರು ತನಿಖೆ ಆರಂಭಿಸಿದ್ದಾರೆ.
 
ಶ್ರೀ ರಾಘವೇಶ್ವರ ಭಾರತೀಯ ಸ್ವಾಮೀಜಿಯ ವಿರುದ್ಧ ಇಂದು ಲೈಂಗಿಕ ಕಿರುಕುಳ ಪ್ರಕರಣ ದಾಖಲಾಗಿದೆ.
 
ಶ್ರೀಗಳು ಲೈಂಗಿಕ ಕಿರುಕುಳ ನೀಡಿದ್ದಾರೆಂದು ಆರೋಪಿಸಿ ಬೆದರಿಕೆ ಪ್ರಕರಣ ಸಂಬಂಧ ಬಂಧನಕ್ಕೊಳಗಾಗಿರುವ ಗಾಯಕಿ ಪ್ರೇಮಲತಾ ದಿವಾಕರ್ ಪರವಾಗಿ ಪುತ್ರಿ ಅಂಶುಮತಿ ಶಾಸ್ತ್ರಿ ಬನಶಂಕರಿ ಪೊಲೀಸ್ ಠಾಣೆಯಲ್ಲಿ ಪ್ರತಿದೂರು ದಾಖಲಿಸಿದ್ದಾರೆ.
 
ರಾಘವೇಶ್ವರ ಸ್ವಾಮೀಜಿಗಳು ಪ್ರೇಮಲತಾ ಅವರಿಗೆ ಲೈಂಗಿಕ ಕಿರುಕುಳ ನೀಡಿದ್ದರು. ಈ ಬಗ್ಗೆ ದೂರು ನೀಡಲು ಪ್ರೇಮಲತಾ ನಿರ್ಧರಿಸಿದ್ದರು ಇದರಿಂದ ಸಿಟ್ಟಿಗೆದ್ದ ಸ್ವಾಮೀಜಿಗಳು ಸೇಡಿನ ಉದ್ದೇಶದಿಂದಾಗಿ ನಮ್ಮ ವಿರುದ್ಧ ದೂರು ನೀಡಿದ್ದಾರೆ ಎಂದು ಪ್ರೇಮಲತಾ ಪುತ್ರಿ ದೂರು ನೀಡಿದ್ದಾರೆ.
 
ರಾಮಚಂದ್ರಾಪುರ ಮಠದ ರಾಮಕಥಾ ಕಾರ್ಯಕ್ರಮಕ್ಕೆ ಹಾಜರಾಗದಂತೆ ಕಲಾವಿದರನ್ನು ಬೆದರಿಸಿ ರಾಮಕಥಾ ಮತ್ತು ಶ್ರೀಗಳ ಚಾತುರ್ಮಾಸ್ಯದಲ್ಲಿ ಗೊಂದಲ ನಿರ್ಮಾಣ ಮಾಡಿದ್ದ ದಂಪತಿಗಳನ್ನು ಪೊಲೀಸರು ಬುಧವಾರ ಬಂಧಿಸಿದ್ದರು.
ಬೆಂಗಳೂರು ಮೂಲದ ದಂಪತಿಗಳಾದ ದಿವಾಕರ ಶಾಸ್ತ್ರೀ ಮತ್ತು ಪ್ರೇಮಲತಾ ಅವರನ್ನು ಹೊನ್ನಾವರದ ಪೊಲೀಸರು ಬಂಧಿಸಿದ್ದಾರೆ. ಇಂದು ಮಧ್ಯಾಹ್ನ ಜಿಲ್ಲಾ ನ್ಯಾಯಾಲಕ್ಕೆ ಹಾಜರು ಪಡಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
 
ರಾಮಚಂದ್ರಾಪುರ ಮಠದ ರಾಮಕಥಾ ಕಾರ್ಯಕ್ರಮಕ್ಕೆ ಹಾಜರಾಗದಂತೆ ಕಲಾವಿದರನ್ನು ಬೆದರಿಸಿ ರಾಮಕಥಾ ಮತ್ತು ಶ್ರೀಗಳ ಚಾತುರ್ಮಾಸ್ಯದಲ್ಲಿ ಗೊಂದಲು ನಿರ್ಮಾಣ ಮಾಡಿದವರ ಮೇಲೆ ಪೊಲೀಸ್ ಠಾಣೆಯಲ್ಲಿ ಆಗಸ್ಟ್ 17ರಂದು ಚಂದ್ರಶೇಖರ್ ಎಂಬುವವರು ದಾಖಲಿಸಿದ್ದರು. ದೂರಿನ ಮೇರೆಗೆ ಪೊಲೀಸರು ದಂಪತಿಗಳನ್ನು ಬಂಧಿಸಿದ್ದಾರೆ.
 
ಶ್ರೀ ರಾಘವೇಶ್ವರ ಭಾರತೀಯ ಸ್ವಾಮೀಜಿಯವರ ಚಾಚುರ್ಮಾಸ್ಯ ಕುಮಟಾದ ಕೆಕ್ಕಾರು ಮಠದಲ್ಲಿ ನಡೆಯುತ್ತಿದ್ದು, ಅಲ್ಲಿ ಮೊದಲ ರಾಮಕಥೆಯ ಪ್ರಾರಂಭಕ್ಕೆ 4 ದಿನ ಮೊದಲು ಕವಿ, ರಾಮಕಥೆಯ ಗೀತಕಾರರಾದ ಡಾ. ಗಜಾನನ ಶರ್ಮರಿಗೆ ಬೆದರಿಕೆ ಹಾಕಲಾಗಿತ್ತು. ರಾಮಕಥೆಗೆ ಹಾಜರಾಗದಂತೆ, ಸಹಕರಿಸದಂತೆ ಎಚ್ಚರಿಕೆ ನೀಡಲಾಗಿತ್ತು. ಈ ಬಗ್ಗೆ ಈಗಾಗಲೇ ಬೆಂಗಳೂರಿನ ಚೆನ್ನಮ್ಮನ ಕೆರೆ ಅಚ್ಚುಕಟ್ಟು ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.
 
ಸ್ವಾಮೀಜಿಯವರಿಗೆ ಮತ್ತು ಮಠಕ್ಕೆ ಕಳಂಕ ತರುವ ಉದ್ದೇಶದಿಂದ ಬೆದರಿಕೆ ಹಾಕಲಾಗಿತ್ತು ಎಂದು ಮಠದ ಆಡಳಿತಾಧಿಕಾರಿಗಳು ಹೇಳಿದ್ದಾರೆ.
 
ಇದಾದ ನಂತರ ಗಾಯಕಿ ಶಂಕರಿ ಮೂರ್ತಿ ಬಾಳಿಲ ಅವರಿಗೆ ಕರೆಮಾಡಿ ರಾಮಕಥೆಯಲ್ಲಿ ಹಾಡದಿರುವಂತೆ ತಾಕೀತು ಮಾಡಲಾಗಿದೆ. ಇದಲ್ಲದೆ ನಾವು ಹೇಳಿದ ಸ್ಥಳಕ್ಕೆ ಬಂದು ಹೇಳಿದಂತೆ ಕೇಳಬೇಕು. ಇಲ್ಲದಿದ್ದರೆ ಪರಿಣಾಮ ನೆಟ್ಟಗಿರುವುದಿಲ್ಲ ಎಂದು ಬೆದರಿಸಲಾಗಿದೆ. ಗಾಯಕಿ ಶಂಕರಿ ಮೂರ್ತಿ ಸುಳ್ಯದಲ್ಲಿ ಸಂಗೀತ ಶಾಲೆ ನಡೆಸುತ್ತಿದ್ದು ಅವರು ಸುಳ್ಯ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
 
ಇನ್ನೊಬ್ಬ ಗಾಯಕಿ ದೀಪಿಕಾ ಅವರಿಗೆ ಕರೆ ಮಾಡಿ ರಾಮಕಥಾ ವೇದಿಕೆಗೆ ಹೋಗಬೇಡ. ನಿಂಗೆ ರಾಮಕಥೆಯಲ್ಲಿ ಎಷ್ಟು ದುಡ್ಡು ಕೊಡುತ್ತಾರೆ? ಅದಕ್ಕಿಂತ ಜಾಸ್ತಿ ನಾವು ಕೊಡುತ್ತೇವೆ. ನಾವು ಹೇಳಿಕೊಟ್ಟಂತೆ ನೀನು ಹೇಳಿಕೆ ಕೊಡಬೇಕು ಎಂದು ಬೆದರಿಕೆ ಕರೆ ಬಂದಿದೆ. ಈ ವಿಷಯವಾಗಿ ಹೊನ್ನಾವರ ಠಾಣೆಯಲ್ಲಿ ದೀಪಿಕಾ ದೂರು ದಾಖಲಿಸಿದ್ದಾರೆ.
 
ಶ್ರೀ ಸಂಸ್ಥಾನದ ಸವಾರಿ ವ್ಯವಸ್ಥಾಪಕ ರಾಘವೇಂದ್ರ ಮಧ್ಯಸ್ಥ ಅವರಿಗೆ ಕರೆ ಮಾಡಿ, ನಾವು ರಾಮಕಥೆ ನಡೆಯಲು ಬಿಡುವುದಿಲ್ಲ. ಚಾತುರ್ಮಾಸ್ಯ ಮುಗಿಯುವ ಮೊದಲೇ ಶ್ರೀಗಳು ಮಠ ಬಿಟ್ಟು ಹೋಗುವಂತೆ ಮಾಡುತ್ತೇವೆ ಎಂದು ಬೆದರಿಕೆ ಕರೆ ಬಂದಿದೆ. ಮಾಧ್ಯಮವನ್ನೂ ನಿಮ್ಮ ವಿರುದ್ಧ ಬಳಿಸಿಕೊಳ್ಳತ್ತೇವೆ ಎಂದು ಫೋನಿನಲ್ಲಿ ಧಮಕಿ ಹಾಕಲಾಗಿದೆ.
 
ಈ ಹಿಂದೆ ಪಿಐಎಲ್ ಹಾಕಿಸ ಬ್ಲಾಕ್ ಮೇಲ್ ಮಾಡಿದ ಸಂದರ್ಭದಲ್ಲಿ ಆರೋಪಿಗಳು ಸ್ವಾಮೀಜಿಯವರ ತೇಜೋವಧೆಗೆ ನಡೆಯುತ್ತಿದ್ದ ಷಡ್ಯಂತ್ರಗಳನ್ನು ತಿಳಿಸಿದ್ದರು. ಶ್ರೀಗಳ ತೇಜೋವಧೆಗೆ ಮಾಹಿತಿ ನೀಡುವ ವ್ಯಕ್ತಿಗಳು ಮಠದಲ್ಲಿಯೂ ಇದ್ದಾರೆ ಎಂದು ಹೇಳಿರುವುದಕ್ಕೂ, ಈಗ ರಾಮಕಥಾ ತಂಡದ ಸದಸ್ಯರನ್ನು ಬೆದರಿಸಿ ಸ್ವಾಮೀಜಿ ಮತ್ತು ಮಠದ ಹೆಸರಿಗೆ ಕಳಂಕ ತರುವ ಉದ್ದೇಶಕ್ಕೂ ಸಂಬಂಧವಿರಬುದು ಎಂಬ ಅನುಮಾನ ವ್ಯಕ್ತವಾಗಿದೆ.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ