Webdunia - Bharat's app for daily news and videos

Install App

ರಸ್ತೆಯಲ್ಲೇ ಕ್ಯಾಬ್ ನಿಲ್ಲಿಸಿ ಯುವತಿಯ ಮೈ ಕೈ ಮುಟ್ಟಿದ

Webdunia
ಮಂಗಳವಾರ, 2 ಮೇ 2017 (14:30 IST)
ಓಲಾ ಚಾಲಕನೊಬ್ಬ ಮೈಕೈ ಮುಟ್ಟಿ ಯುವತಿ ಜೊತೆ ಅಸಭ್ಯ ವರ್ತನೆ ತೋರಿದ ಆರೋಪ ಬೆಂಗಳೂರಿನ ಕೋರಮಂಗಲದಲ್ಲಿ ಕೇಳಿ ಬಂದಿದೆ.  ಪ್ರಕರಣ ಸಂಬಂಧ ಆರೋಪಿ ಚಾಲಕ ರವಿಕುಮಾರ್ ಎಂಬಾತನನ್ನ ಬಂಧಿಸಲಾಗಿದೆ.

ರಾತ್ರಿ 2 ಗಂಟೆವರೆಗೆ ಬಾರ್`ನಲ್ಲಿ ಕೆಲಸ ಮಾಡಿದ ಯುವತಿ ಆಪ್ ಮೂಲಕ ಕ್ಯಾಬ್ ಬುಕ್ ಮಾಡಿದ್ದಾಳೆ. ಯುವತಿಯನ್ನ ಕರೆದೊಯ್ದ ಚಾಲಕ 2.40ರ ಸುಮಾರಿಗೆ ಕೊಪ್ಪ ರಸ್ತೆ ಬಳಿ ಬಂದ ಅಲ್ಲಿ ಕಾಮಗಾರಿ ನಡೆಯುತ್ತಿದೆ ಬೇರೆ ರಸ್ತೆಗೆ ಹೋಗಬೇಕೆಂದು ಕಾರು ನಿಲ್ಲಿಸಿ, ಹಿಂದೆ ನೋಡುವಂತೆ ಹೇಳಿ, ಎದೆ ಮತ್ತು ಮೈ ಕೈ ಮುಟ್ಟಿ ಅಶ್ಲೀಲ ವರ್ತನೆ ತೋರಿದ್ದಾನೆ ಎಂದು ಆರೋಪಿಸಲಾಗಿದೆ.

ಈ ಸಂದರ್ಭ ಯುವತಿ ಕಾರಿನಿಂದ ಇಳಿದು ಓಡಲಾರಂಭಿಸಿದಾಗ ಸ್ಥಳೀಯ ಕಟ್ಟಡ ಭದ್ರತಾ ಸಿಬ್ಬಂದಿ ನೆರವಿಗೆ ಬಂದಿದ್ದಾರೆ. ಭದ್ರತಾ ಸಿಬ್ಬಂದಿ ಕಂಡು ಓಲಾ ಚಾಲಕ ಪರಾರಿಯಾಗಿದ್ದಾನೆ. ಮತ್ತೊಂದು ಕ್ಯಾಬ್ ಬುಕ್ ಮಾಡಿ ಮನೆಗೆ ತೆರಳಿದ ಯುವತಿ ಮರು ದಿನ ದೂರು ದಾಖಲಿಸಿದ್ದಾಳೆ.

ಸ್ಥಳಕ್ಕೆ ಹೋದ ಬಳಿಕವೂ ಪಾನಮತ್ತ ಯುವತಿ ಇಳಿಯುವ ಬಗ್ಗೆ ಸೂಕ್ತವಾಗಿ ಹೇಳಲಿಲ್ಲ. ಈ ಸಂದರ್ಭ ಜಗಳ ನಡೆದು ಮೈಕೈ ಮುಟ್ಟಿದೆ ಎಂದು ಆರೋಪಿ ಹೇಳಿಕೊಂಡಿದ್ದಾನೆ.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ