ನಮ್ಮ ಮೆಟ್ರೋದಲ್ಲಿ ಯುವತಿಗೆ ಲೈಂಗಿಕ ಕಿರುಕುಳ

Webdunia
ಶುಕ್ರವಾರ, 8 ಡಿಸೆಂಬರ್ 2023 (15:42 IST)
ನಮ್ಮ ಮೆಟ್ರೋದಲ್ಲಿ ಈ ಹಿಂದೆ ಎರಡ್ಮೂರು ಲೈಂಗಿಕ ಕಿರುಕುಳ ಆರೋಪ ಕೇಳಿಬಂದಿದ್ದು, ಇದೀಗ ಮತ್ತೊಬ್ಬ ಯುವತಿಗೆ ಲೈಂಗಿಕ ಕಿರುಕುಳ ಆರೋಪ ಮಾಡಲಾಗಿದೆ.

ನಿನ್ನೆ ಬೆಳಗ್ಗೆ 9.40ರ ಸುಮಾರಿಗೆ ಬೆಂಗಳೂರಿನ ರಾಜಾಜಿನಗರದಲ್ಲಿ ಮೆಟ್ರೋ ಹತ್ತಿದ್ದ 22 ವರ್ಷದ ಯುವತಿಯ ಮೈಕೈ ಮುಟ್ಟಿದ್ದು, ಯುವತಿ ಕೂಗುತ್ತಿದ್ದಂತೆ ಮುಂದಿನ ನಿಲ್ದಾಣದಲ್ಲಿ ಪರಾರಿಯಾಗಲು ಯತ್ನಿಸಿದ ಆರೋಪಿ ಲೋಕೇಶ್​ನನ್ನು ಮೆಟ್ರೋ ಭದ್ರತಾ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಬಳಿಕ ಆರೋಪಿಯನ್ನು ಉಪ್ಪಾರಪೇಟೆ ಪೊಲೀಸರಿಗೆ ಒಪ್ಪಿಸಲಾಗಿದೆ.

ತನಿಖೆಯ ವೇಳೆ ಆರೋಪಿ ಲೋಕೇಶ್​ನ ಕರಾಳ ಇತಿಹಾಸ ಬಯಲಾಗಿದ್ದು, ಈತನ ಮೇಲೆ ಈ ಹಿಂದೆ ಕೂಡ ಕೆಲ ಕೇಸ್​ ಗಳಿತ್ತು. ಈ ಹಿಂದೆ ಬಿಎಂಟಿಸಿ ಬಸ್​ನಲ್ಲಿ ಯುವತಿಯ ಮೊಬೈಲ್ ಕಳ್ಳತನ ಮಾಡಲು ಹೋಗಿ ಸಿಕ್ಕಿಕೊಂಡಿದ್ದ. ತನಿಖೆಯ ವೇಳೆ ಲೊಕೇಶ್ ಕಳ್ಳತನವನ್ನು ಕಾಯಕ ಮಾಡಿರುವ ವಿಷಯ ಬಯಲಾಗಿದೆ. ಆರೋಪಿ ಬಳಿಯಿಂದ 20 ಮೊಬೈಲ್ ಫೋನ್, ಒಂದು ದ್ವಿಚಕ್ರ ವಾಹನ ವಶಕ್ಕೆ ಪಡೆದುಕೊಳ್ಳಲಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಆರೈಕೆಗೆಂದು ಕೆಲಸಕ್ಕಿಟ್ಟವಳಿಂದಲೇ ನಾಯಿ ಫಿನೀಶ್‌, ಭೀಕರ ದೃಶ್ಯ ಸೆರೆ

ಸುಳೇಗಾಳಿ ಗ್ರಾಮದಲ್ಲಿ ಎರಡು ಆನೆ ಸಾವು, ಸಚಿವ ಈಶ್ವರ್ ಖಂಡ್ರೆ ಕೊಟ್ರು ಖಡಕ್ ವಾರ್ನಿಂಗ್‌

Gold Price: ಇಂದಿನ ಚಿನ್ನ,ಬೆಳ್ಳಿ ದರ ವಿವರ ಇಲ್ಲಿದೆ

ವೀರಪ್ಪನ್ ಆಗಿದ್ದಾಗ ಕಾಡು ಸೇಫ್ ಆಗಿತ್ತು: ಅರಣ್ಯ ಸಚಿವರಿಗೆ ರೈತರ ಅಳಲು

ಆರ್ ಎಸ್ಎಸ್ ಗೆ ಡೊನೇಷನ್ ಎಲ್ಲಿಂದ ಎಂದ ಪ್ರಿಯಾಂಕ್ ಖರ್ಗೆ: ರಾಜಕೀಯ ಪಕ್ಷಗಳಿಗೆ ಎಲ್ಲಿಂದ ಎಂದ ಪಬ್ಲಿಕ್

ಮುಂದಿನ ಸುದ್ದಿ