Select Your Language

Notifications

webdunia
webdunia
webdunia
webdunia

ಬಾಲಕನ ಮೇಲೆ ಬಾಲಕನಿಂದಲೇ ಲೈಂಗಿಕ ದೌರ್ಜನ್ಯ

ಬಾಲಕನ ಮೇಲೆ ಬಾಲಕನಿಂದಲೇ ಲೈಂಗಿಕ ದೌರ್ಜನ್ಯ
ಬೀದರ್ , ಬುಧವಾರ, 26 ನವೆಂಬರ್ 2014 (10:35 IST)
8 ವರ್ಷದ ಪುಟ್ಟ ಬಾಲಕನ ಮೇಲೆ 17 ವರ್ಷದ ಯುವಕ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿದ ಘಟನೆ ಬೀದರ್ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.

ಹುಮ್ನಾಬಾದ್ ತಾಲ್ಲೂಕಿನ  ಘಾಟಬೋಡಾಳ್ ಎಂಬ ಗ್ರಾಮದಲ್ಲಿ ನಿನ್ನೆ ಸಂಜೆ ಈ ಘಟನೆ ನಡೆದಿದ್ದು  8 ವರ್ಷದ ಬಾಲಕನ್ನು 17 ವರ್ಷದ ಬಾಲಕ ಶ್ರೀಹರಿ ಲೈಂಗಿಕವಾಗಿ ಬಳಸಿಕೊಳ್ಳಲು ಪ್ರಯತ್ನಿಸಿದ್ದಾನೆ. ಪುಟ್ಟ ಹುಡುಗನ ಮನೆಯಲ್ಲಿ ಯಾರೂ ಇಲ್ಲದ್ದನ್ನು ನೋಡಿದ ಶ್ರೀಹರಿ ಬಾಲಕನ ಮೇಲೆ ಕುಕೃತ್ಯ ಪ್ರದರ್ಶಿಸತೊಡಗಿದಾಗ ಮಗು ದೊಡ್ಡದಾಗಿ ಕಿರುಚಿಕೊಂಡಿದೆ. ಅದನ್ನು ಕೇಳಿ ಸ್ಥಳಕ್ಕೆ ಆಗಮಿಸಿದ  ನೆರೆಹೊರೆಯವರು ಆರೋಪಿಯನ್ನು ಹಿಡಿದು ಧರ್ಮದೇಟು ನೀಡಿದ್ದಾರೆ. 
 
ತನ್ನ ಮಗ ನಡೆಸಿದ ಕುಕೃತ್ಯದ ಬಗ್ಗೆ ತಿಳಿದ ಆತನ ತಾಯಿ ಅಪಮಾನದಿಂದ ನೊಂದು ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾಳೆ.  ಆಕೆಯನ್ನು ಬೀದರ್ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
 
ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿ ಶ್ರೀಹರಿ ಪರಾರಿಯಾಗಿದ್ದಾನೆ. ಆತನ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. 

Share this Story:

Follow Webdunia kannada