Select Your Language

Notifications

webdunia
webdunia
webdunia
webdunia

ಮಹಿಳಾ ಕೈದಿಗಳ ಮೇಲೆ ಲೈಂಗಿಕ ದೌರ್ಜನ್ಯ ಆರೋಪ ತಳ್ಳಿಹಾಕಿದ ರಾಜಾ

ಮಹಿಳಾ ಕೈದಿಗಳ ಮೇಲೆ ಲೈಂಗಿಕ ದೌರ್ಜನ್ಯ ಆರೋಪ ತಳ್ಳಿಹಾಕಿದ ರಾಜಾ
ಬೆಂಗಳೂರು , ಶುಕ್ರವಾರ, 14 ನವೆಂಬರ್ 2014 (18:32 IST)
ಜೈಲಿನಲ್ಲಿ ಮಹಿಳಾ ಕೈದಿಗಳಿಗೆ ಲೈಂಗಿಕ ಕಿರುಕುಳ ಆರೋಪಕ್ಕೆ ಸಂಬಂಧಿಸಿದಂತೆ ಕೇಂದ್ರ ಕಾರಾಗೃಹ ಹೆಚ್ಚುವರಿ ಮಹಾನಿರೀಕ್ಷಕ ವಿ.ಎಸ್.  ರಾಜಾ ಆರೋಪವನ್ನು ತಳ್ಳಿಹಾಕಿದ್ದಾರೆ. ನ್ಯಾಯಮೂರ್ತಿಗಳಿಗೆ ಬರೆದ ಪತ್ರ ಹೇಗೆ ಬಹಿರಂಗವಾಯಿತು. ಸಲಹೆಪೆಟ್ಟಿಗೆಗೆ ಪತ್ರ ಬರೆದು ಹಾಕಿದವರು ಯಾರು. ವಾರ್ಡ‌ನ್‌ಗೆ ಆಗದವರು ಈ ಕೃತ್ಯವೆಸಗಿದ್ದಾರೆ. ಈ ಪ್ರಕರಣ ಸತ್ಯಾಸತ್ಯತೆಯನ್ನು ನಾವು ಬಯಲು ಮಾಡುತ್ತೇವೆ.

ಕಾರಾಗೃಹದ ಬಹುತೇಕ ಕಡೆ ಸಿಸಿಟಿವಿ ಅಳವಡಿಸಿದ್ದೇವೆ.  ಸಿಸಿಟಿವಿ ಕ್ಯಾಮೆರಾದ ಮೂಲಕ ಎಲ್ಲವನ್ನೂ ಪತ್ತೆಹಚ್ಚುತ್ತೇವೆ, ಆರೋಪಗಳ ಸತ್ಯಾಸತ್ಯತೆ ಕುರಿತು ಸಮಗ್ರ ತನಿಖೆ ಮಾಡುತ್ತೇವೆ  ಎಂದು ರಾಜಾ ಹೇಳಿದರು.

ಏತನ್ಮಧ್ಯೆ ಮಹಿಳಾ ಕೈದಿಗಳ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಮಿತಿಯಿಂದ ತನಿಖೆ ನಡೆಸುವುದಾಗಿ ವಿಧಾನಸೌಧದಲ್ಲಿ ಬಂಧೀಖಾನೆ ಸಚಿವ ಕೆ.ಜೆ. ಜಾರ್ಜ್ ಹೇಳಿದ್ದಾರೆ. ಜೈಲಿನ ಮಹಿಳಾ ವಾರ್ಡನ್‌‍ಗಳ ವಿರುದ್ಧ ಮಹಿಳಾ ಕೈದಿಗಳು ಗುರುತರ ಆರೋಪ ಮಾಡಿದ್ದರು.

Share this Story:

Follow Webdunia kannada