Select Your Language

Notifications

webdunia
webdunia
webdunia
webdunia

ರಾಮಕಥಾ ಗಾಯಕಿ ಪ್ರೇಮಲತಾ ಬಟ್ಟೆಯಲ್ಲಿ ವೀರ್ಯಾಣು ಪತ್ತೆ: ತನಿಖೆಗೆ ಹೊಸ ತಿರುವು

ರಾಮಕಥಾ ಗಾಯಕಿ ಪ್ರೇಮಲತಾ ಬಟ್ಟೆಯಲ್ಲಿ ವೀರ್ಯಾಣು ಪತ್ತೆ: ತನಿಖೆಗೆ ಹೊಸ ತಿರುವು
ಬೆಂಗಳೂರು , ಗುರುವಾರ, 20 ನವೆಂಬರ್ 2014 (18:59 IST)
ರಾಘವೇಶ್ವರ ಭಾರತಿ ಶ್ರೀಗಳ ವಿರುದ್ಧ ಪ್ರೇಮಲತಾ ದಂಪತಿಯಿಂದ ಅತ್ಯಾಚಾರದ ದೂರು ಹೊಸ ತಿರುವು ಪಡೆಯುತ್ತಿದ್ದು, ಪ್ರೇಮಲತಾ ಸಿಐಡಿ ತನಿಖೆ ಸಲುವಾಗಿ ನೀಡಿದ್ದ ಬಟ್ಟೆಯ ಮೇಲೆ ವೀರ್ಯಾಣು ಪತ್ತೆಯಾಗಿದ್ದು, ಇದು ಯಾರದ್ದು ಎನ್ನುವುದನ್ನು ಪತ್ತೆಮಾಡಬೇಕಾಗಿದೆ.

ಸಿಐಡಿ ತನಿಖೆ ವೇಳೆ ಪ್ರೇಮಲತಾ ತನ್ನ ಬಟ್ಟೆಗಳನ್ನು ನೀಡಿದ್ದರು. ಈ ಬಟ್ಟೆಗಳನ್ನು ವಿಧಿವಿಜ್ಞಾನ ಪ್ರಯೋಗಾಲಯದಲ್ಲಿ ಪರೀಕ್ಷೆಗೆ ಒಳಪಡಿಸಿದಾಗ ವೀರ್ಯಾಣುಗಳಿರುವುದು ಪತ್ತೆಯಾಗಿದೆ. 
 
 47 ವರ್ಷ ವಯಸ್ಸಿನ ರಾಮಕಥಾ ಗಾಯಕಿ ಪ್ರೇಮಲತಾ ರಾಘವೇಶ್ವರ ಶ್ರೀಗಳು ತಮ್ಮ ಮೇಲೆ 2011ರ ಅಕ್ಟೋಬರ್‌ನಿಂದ ಅನೇಕ ಬಾರಿ ಲೈಂಗಿಕ ಕಿರುಕುಳ ನೀಡಿದ್ದಾರೆಂದು ಆರೋಪಿಸಿದ್ದರು. 
 
 ತಾವು ರಾಮನ ಅವತಾರವಾಗಿದ್ದು, ಪ್ರೇಮಲತಾ ಸಂಪೂರ್ಣವಾಗಿ ತಮಗೆ ಶರಣಾಗಲು ರಾಮ ಬಯಸಿದ್ದಾನೆಂದು ಶ್ರೀಗಳು ಹೇಳುತ್ತಿದ್ದರು.ಪ್ರೇಮಲತಾ ಹೇಳಿಕೆಯನ್ನು ತನಿಖೆ ನಡೆಸುತ್ತಿರುವ ಸಿಐಡಿ ಅಧಿಕಾರಿಗಳು ದಾಖಲಿಸಿಕೊಂಡಿದ್ದರು. ರಾಮಕಥಾ ಕಾರ್ಯಕ್ರಮಕ್ಕೆ ತಾವು ವಿವಿಧ ಕಡೆ ಹೋಗುತ್ತಿದ್ದುದಾಗಿ ಪ್ರೇಮಲತಾ ಹೇಳಿದ್ದರು.

 
ಜೋಧಪುರದಲ್ಲಿ ಕಾರ್ಯಕ್ರಮದ ನಂತರ ಸ್ವಾಮೀಜಿ ನನ್ನನ್ನು ಕೋಣೆಯೊಳಕ್ಕೆ ಕರೆದು ಪ್ರಸಾದ ಕೊಟ್ಟರು. ಪ್ರಸಾದ ತಿಂದ ಬಳಿಕ ಏನಾಗುತ್ತಿದೆಯೆಂದು ತಮಗೆ ಗೊತ್ತಾಗಲಿಲ್ಲ ಎಂದಿದ್ದಾರೆ.ಸ್ವಾಮಿ ಬಾಗಿಲನ್ನು ಹಾಕಿ ಒಳಕ್ಕೆ ಎಳೆದುಕೊಂಡರು.
 
ನೀವು ನನಗೆ ಸಂಪೂರ್ಣವಾಗಿ ಶರಣಾದರೆ ರಾಮನಿಗೆ ಖುಷಿಯಾಗುತ್ತದೆ ಎಂದು ಹೇಳಿ ಅವರ ಮೇಲೆ  ಅತ್ಯಾಚಾರ ಮಾಡಿದ್ದರು. ಈರೀತಿ ಲೈಂಗಿಕ ದೌರ್ಜನ್ಯ ಅನೇಕ ಸಂದರ್ಭಗಳಲ್ಲಿ ನಡೆದಿದ್ದು, ಪ್ರೇಮಲತಾ ಕಾರ್ಯಕ್ರಮಕ್ಕೆ ಅನೇಕ ಕಡೆ ಹೋಗಿದ್ದರು.

ಪ್ರತಿಯೊಂದು ಬಾರಿ ಸ್ವಾಮಿ ಪ್ರಸಾದ ನೀಡಿ ರೇಪ್ ಮಾಡುತ್ತಿದ್ದರು ಎಂದು ಪ್ರೇಮಲತಾ ದೂರಿದ್ದರು.  ಸಿಐಡಿ ಅಧಿಕಾರಿಗಳು ಪ್ರೇಮಲತಾ ಹೇಳಿಕೆಯನ್ನು ಪರಿಶೀಲಿಸುತ್ತಿದ್ದು ಸಾಕ್ಷ್ಯಗಳನ್ನು ಸಂಗ್ರಹಿಸಿದ್ದಾರೆ. ಇಂತಹ ಒಂದು ಲೈಂಗಿಕ ದೌರ್ಜನ್ಯದ ಬಳಿಕ ಪ್ರೇಮಲತಾ ಬಟ್ಟೆಗಳನ್ನು ರಕ್ಷಿಸಿ ಅದನ್ನು ವಿಧಿವಿಜ್ಞಾನ ಪ್ರಯೋಗಾಲದ ಪರೀಕ್ಷೆಗೆ ಕಳಿಸಿದ್ದರು. 

Share this Story:

Follow Webdunia kannada